HomeNewsCultureThe Story Of Talakaadu - Why Mysore Kingdom doesn't has successor by...

The Story Of Talakaadu – Why Mysore Kingdom doesn’t has successor by their own

ಮಾಲಂಗಿ ಮಡುವಾಗಿ ತಲಕಾಡು ಮರಳಾಗಿ ಮೈಸೂರು ರಾಜರಿಗೆ ಮಕ್ಕಳಾಗದಿರಲಿ – ಅಜ್ಜ ಹೇಳಿದ ಕಥೆ / ಜಾನಪದ ಕಥೆಗಳು

ಪೂರ್ವ ಕಾಲದಿಂದಲೂ ಮೈಸೂರಿನಲ್ಲಿ ವೈಭವದ ಮನೆತನಗಳನ್ನು ಕಂಡಿದ್ದೇವೆ ಆದರೆ ವಂಶಸ್ಥರು ತಮ್ಮ ಸ್ವಂತ ಪೀಳಿಗೆ ಮುಂದುವರಿಸಲು ವಿಫಲಗೊಂಡಿವೆ ಅದಕ್ಕೆ ವೈಜ್ಞಾನಿಕ ಅರ್ಥ ಏನೇ ಇದ್ದರು ನಾವು ಕೇಳಿ – ಅರಿಯದ ಮಾತೊಂದು ಇರುವುದಂತೂ ನಿಜ.

ಆ ಶ್ರಿರಂಗ ಪಟ್ಟಣದಲ್ಲಿ ವಿಜಯ ನಗರದ ಸಮಂತ ರಾಜ ಆಡಳಿತ ನಡೆಸುತ್ತಿದ್ದ. ವಿಸ ಎಂಬಂತೆ ಅತನಿಗೆ ಬೇನ್ನು ಉಣ್ಣಿನ ಕಾಯಿಲೆ ಕಾಣಿಸಿತು. ಅತನ ಹೆಂಡತಿ ಶಿವಶರಣೆ ಅಲುಮೇಲಮ್ಮ ಮಹಾ ಪತಿವ್ರತೆ ತನ್ನ ಪತಿಯ ಕಾಯಿಲೆ ಗುಣಪಡಿಸಲು ಕೈಲಾಸ ವನದಂತಿದ್ದ ತಲಕಾಡಿಗೆ ಬಂದು ಅಲ್ಲಿನ ವೈದ್ಯನಾಥೇಶ್ವರ ದೇಗುಲದಲ್ಲಿ ಪೂಜೆಗಾಗಿ ಬರುತ್ತಾರೆ.

ತಪ – ಪೂಜೆ ಮುಗಿದ ನಂತರ ಅತಿಯಾದ ಪ್ರಯಾಣ ಬಾಸವಾಗಿ ವಿಶ್ರಮಿಸಲು ಆಗದೆ ರಾಜ ಅಸುನೀಗುತ್ತಾನೆ. ಅದಾಗಲೇ ಶ್ರೀರಂಗ ಪಟ್ಟಣದ ರಾಜನ ಅಸಾಹಯಕತೆ ತಿಳಿದಿದ್ದ  ಮೈಸೂರಿನ ರಾಜ ಒಡೆಯರು ಸೇನೆಯೋಂದಿಗೆ ತಲಕಾಡಿನ ಮೇಲೆ ಮುತ್ತಿಗೆ ಹಾಕುತ್ತಾರೆ.

ವಿಷಯ ತಿಳಿದ ಅಲುಮೇಲಮ್ಮ ಹತ್ತಿರದ ಮಾಲಂಗಿ ಊರಿನಲ್ಲಿ ಆಶ್ರಯ ಪಡೆಯುತ್ತಾರೆ. ಆಕ್ರಮಣದ ನಂತರ ಊರಿನಲ್ಲಿದ್ದ ನಾಯಕನ ಪತ್ನಿ ಅಲುಮೇಲಮ್ಮ ರಾಜ ಒಡೆಯರ ಕಣ್ಣಿಗೆ  ಬೀಳುತ್ತಾರೆ . ಅವರ ಕಣ್ಣೆದುರೇ ಅವರ ಸೈನಿಕರು ಅಮ್ಮನವ ಒಡವೆ ಬಾಚಲು ಹಿಂಬಾಲಿಸುತ್ತಾರೆ.

ಆದರೆ ರಾಜ ಪರಿವಾರದವರು ಚೂಡಾಮಣಿ, ಮೂಗುತ್ತಿ ಕಳೆದರೆ ಸರ್ವಸ್ವ ಕಳೆದುಕೊಂಡಂತೆ ಎಂದು ನೋಂದು “ತಲಕಾಡು ಬರಡಾಗಿ ಮಾಲಂಗಿ ಮಡವಾಗಿ ಮೈಸೂರು ರಾಜರಿಗೆ ಮಕ್ಕಳಾಗದಿರಲಿ” ಎಂದು ಶಾಪ ಹಾಕಿ ಹುಚ್ಚಂತೆ ಹರಿಯುತ್ತಿದ್ದ ಕಾವೇರಿಯ ಪ್ರವಾಹಕ್ಕೆ ಹಾರಿ ಪ್ರಾಣ ತ್ಯಜಿಸಿದರು.

ಇದು ಕಥೆಯೇ ಅಥವಾ ನಿಜವೇ.. ಪೂರಕ ಎಂಬಂತೆ ನದಿಯ ದಂಡೆಯಲ್ಲಿರುವ ತಲಕಾಡಿನಲ್ಲಿ ಹಸಿರಿಲ್ಲ… ಮಾಲಂಗಿ ಉಳಿದಿಲ್ಲ.. ಮೈಸೂರ ಮೂಲ ವಂಶ ಮುಂದುವರಿಯಲಿಲ್ಲ…

ಹೀಗೆ ಒಂದಕ್ಕೊಂದು ಅಂತರವಿದೆ … ಹಾಗೆ ಮುಂದುವರಿಯಲಿದೆ


 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments