ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
ಆದರೆ ಜನಪದ ವೈಭವದ ಕಾಲವೂ ಒಂದಿತ್ತು, ಆ ದಿನಗಳಲ್ಲಿ ಅದೇ ಒಂದು ಪಂಗಡ,ಧರ್ಮವಾಗಿ ಬೇಳೆದಿತ್ತು. ಕಲೆಯ ಕಾಲಿಗೆ ಬಿದ್ದು ಗೌರವಿಸುವ ಕಾಲ ಅದಾಗಿತ್ತು. ರಾಜಾದಿರಾಜರಿಂದ ಕಡು ಬಡವನವರೆಗೂ ಅದನ್ನು ಕಲಿಯುವ ತವಕ ಇತ್ತು ಹಾಗಾದರೆ ಅವೆಲ್ಲ ಯಾವುದಾಗಿತ್ತು ಮತ್ತು ಇಂದು ಬೀದಿ ದೋಂಬರಾಟ ವಾಗಲು ಕಾರಣವೇನು ? ಮುಂದೆ ಓದಿ
ದೊಡ್ಡಾಟ
ಹೌದು! ಇಂದು ಸುಣ್ಣದ ಗೋಡೆಯಂತೆ ಮಾಯ ವಾಗುತ್ತಿದೆ. ಒಂದು ಕಾಲದಲ್ಲಿ ಊರಿಗೆ ಊರೇ ಈ ದೊಡ್ಡಾಟಕ್ಕೆ ಕಾದು ಕುಳಿತು ಹಳೆ ಕಥೆಗಳ ಚಿತ್ರಣ ಕಂಡುಕೊಂಡ ವೈಭವ ಈ ಕಲೆಗಿತ್ತು.

ಈ ಆಟಕ್ಕೆ ಇನ್ನು ಹತ್ತಿಪ್ಪತ್ತು ದಿನ ಇರವಾಗಲೇ ಆಡುವ ಜಾಗವನ್ನು ಆಯ್ಕೆ ಮಾಡಿ ಅಲ್ಲಿ ‘ಹಂದರಗಂಬ’ವೊಂದನ್ನು ನಿಲ್ಲಿಸುತ್ತಾರೆ. ಪೌರಾಣಿಕ ಪ್ರಸಂಗಗಳನ್ನು ಹೊಂದುವ ಈ ಆಟ ರಾತ್ರಿಯೆಲ್ಲಾ ನಡೆದು ಸೂರ್ಯೋ ಉಯದ ವೇಳೆಗೆ ಮುಕ್ತಾಯವಾಗುತ್ತದೆ. ಹಾಗಾಗಿ ಸುರಕ್ಷಿತ ಜಾಗ ಮುಖ್ಯವಾಗುತ್ತದೆ .
ಜನಗಳನ್ನು ಸೆಳೆಯುವಂತ ಮಾತು ಚಾತುರ್ಯ, ಪಾತ್ರ ಹೋಲುವಂತ ಬಣ್ಣ ಮತ್ತು ಮಂಟಪ ಈ ದೊಡ್ಡಾಟಕ್ಕೆ ಬಲು ಮುಖ್ಯ ವಾಗುತ್ತದೆ.
ಈ ಆಟದಲ್ಲಿ ಕೃಷ್ಣ – ಅರ್ಜುನ ಒಳಗೊಂಡು ರಾಮ, ಲಕ್ಷ್ಮಣ, ಈಶ್ವರ , ಪಾರ್ವತಿ ಪಾತ್ರದಂತೆ ಕುರುಕ್ಷೇತ್ರ , ಕೃಷ್ಣಸಂಧಾನ, ಪುಷ್ಪಹರಣ,ವಿರಾಟ ಪರ್ವ, ಕರ್ಣಪರ್ವ, ಸುಧನ್ವಾರ್ಜನ ,ತಾರಕಾಸುರ ವಧೆ, ವೀರ ಅಭಿಮನ್ಯು, ಆಶ್ವಮೇಧಯಾಗದ್ದು, ವಾಲಿ-ಸುಗ್ರೀವರ ಕಾಳಗದ್ದು, ದ್ರೌಪದೀ ವಸ್ತ್ರಾಪ-ಹರಣ, ರತಿ-ಕಲ್ಯಾಣ, ಲವಕುಶರ ಕಾಳಗ, ತಾಮ್ರಧ್ವಜನ ಕಾಳಗ, ಅಹಿರಾವಣ, ರಾವಣ, ಶ್ವೇತ ಚರಿತ್ರೆ, ಭೀಮಾರ್ಜುನರ ಯುದ್ದ, ಕರ್ಣಾರ್ಜುನ ಕಾಳಗ, ಕಲಾವತಿ ಸ್ವಯಂವರ, ವೃತ್ತಪಾಲಕರಾಜ, ದುರ್ಗಾಸುರ ಕಾಳಗ, ಭೀಷ್ಮ – ಪರ್ವ, ಸುಭದ್ರಾಕಲ್ಯಾಣ, ಭಕ್ತ ಮಾರ್ಕಂಡೇಯರು, ಸತ್ಯ – ಹರಿಶ್ಚಂದ್ರ, ಇಂದ್ರಜಿತು ಕಾಳಗ, ಹಿಡಂಬಿ ಕಲ್ಯಾಣ, ಊರ್ವಶಿ, ರಾಮಾಂಜನೇಯ ಯುದ್ದ , ಲಂಕಾದಹನ, ಜಲಂಧರನ ಕಾಳಗ, ಸಾನಂದ ಗಣೇಶ ಹೀಗೆ ಅನೇಕ ಪಾತ್ರ ಪರಿಚಯ ತಿಳಿಸಿಕೊಟ್ಟ ಸಿಂಹ ಪಾಲು ಈ ದೊಡ್ಡಾಟದ್ದು.
ಕಾಲ ಬದಲಾಗುತ್ತಿದೆ, ಬಣ ಮಾಸುತ್ತಿದೆ, ಪೀಳಿಗೆ ಬದಲಾಗಿ ಆಸಕ್ತಿ ಬೇರೆಡೆಗೆ ವಾಲುತ್ತಾ ಇಂತಹ ಕಲೆಗಳನ್ನು ಕಾಣುವುದು ಕಷ್ಟ.
ಆದರು ಇದನ್ನು ಆರಾಧ್ಯ ದೈವದಂತೆ ಪೂಜಿಸುತ್ತಾ, ಪೂರ್ವಜರ ಕಲೆಯನ್ನು ಪರಗತ ಮಾಡಿಕೊಂಡ ಪಂಗಡ ನಮ್ಮಲ್ಲೀ ಈಗಲೂ ಸಿಗುತ್ತಾರೆ ಆದರೆ ಅವರ ಸತ್ಕಾರ ತುಂಬಾ ಕಡಿಮೆ .. ಕಲೆಗಳನ್ನು ಬೆಳೆಸಿ
ಮುಂದೆ ಯಕ್ಷಗಾನ ತಿಳಿಯೋಣ…..
- ಹಬ್ಬದ ಸಿಹಿಗೆ ಸೂಪರ್ ರೆಸಿಪಿ – ಮನೆಯಲ್ಲೇ ಮಾಡಿ ನೋಡಿ ಡ್ರೈ ಫ್ರೂಟ್ ಬರ್ಫಿಡ್ರೈ ಫ್ರೂಟ್ ಬರ್ಫಿ ರೆಸಿಪಿ – ಬಾದಾಮಿ, ಗೋಡಂಬಿಯಿಂದ ತಯಾರಿಸುವ ಆರೋಗ್ಯಕರ ಸಿಹಿ ಸಿಹಿ ತಿನ್ನಬೇಕು ಎನ್ನುವ ಆಸೆ ಬಂದಾಗ ರುಚಿಯ ಜೊತೆಗೆ ಸ್ವಲ್ಪ ಆರೋಗ್ಯಕರ ಆಯ್ಕೆಯನ್ನೂ ಹುಡುಕುವುದು ಸಾಮಾನ್ಯ. ಅಂತಹ ಸಂದರ್ಭಗಳಲ್ಲಿ ಡ್ರೈ ಫ್ರೂಟ್ ಬರ್ಫಿ ಉತ್ತಮ ಆಯ್ಕೆಯಾಗಬಹುದು. ಬಾದಾಮಿ, ಗೋಡಂಬಿ, ಪಿಸ್ತಾ, ಅಕ್ರೋಟ್ ಸೇರಿದಂತೆ… Read more: ಹಬ್ಬದ ಸಿಹಿಗೆ ಸೂಪರ್ ರೆಸಿಪಿ – ಮನೆಯಲ್ಲೇ ಮಾಡಿ ನೋಡಿ ಡ್ರೈ ಫ್ರೂಟ್ ಬರ್ಫಿ
- ಪ್ರತಿದಿನ ಒಂದೇ ತಿಂಡಿ ಬೇಡ – ರವೆಯಿಂದ ತಯಾರಿಸಬಹುದಾದ 5 ರುಚಿಕರವಾದ ಉಪಾಹಾರಗಳುಪ್ರತಿದಿನ ಒಂದೇ ಬ್ರೇಕ್ಫಾಸ್ಟ್ ಬೇಡ: ರವೆಯಿಂದ ಮಾಡಿ ನೋಡಿ ಈ 5 ರುಚಿಕರ ಉಪಾಹಾರಗಳು ಬೆಳಗಿನ ಉಪಾಹಾರ ದಿನದ ಮೊದಲ ಮತ್ತು ಪ್ರಮುಖ ಊಟವಾಗಿದೆ. ಪ್ರತಿದಿನ ಇಡ್ಲಿ, ದೋಸೆ, ಉಪ್ಪಿಟ್ಟು ಅಥವಾ ಒಂದೇ ರೀತಿಯ ತಿಂಡಿಗಳನ್ನು ತಿನ್ನುವುದರಿಂದ ಕೆಲವರಿಗೆ ಬೇಸರವಾಗಬಹುದು. ಇಂತಹ ಸಂದರ್ಭದಲ್ಲಿ ಮನೆಯಲ್ಲೇ ಸುಲಭವಾಗಿ ಸಿಗುವ… Read more: ಪ್ರತಿದಿನ ಒಂದೇ ತಿಂಡಿ ಬೇಡ – ರವೆಯಿಂದ ತಯಾರಿಸಬಹುದಾದ 5 ರುಚಿಕರವಾದ ಉಪಾಹಾರಗಳು
- ಸಂಜೆ ಟೀ ಜೊತೆ ಸವಿಯಲು ಕ್ರಿಸ್ಪಿ ಆಲೂಗಡ್ಡೆ ಲಾಲಿಪಾಪ್ ರೆಸಿಪಿ – ಮನೆಯಲ್ಲೇ ಮಾಡಿ ನೋಡಿಕ್ರಿಸ್ಪಿ ಆಲೂಗಡ್ಡೆ ಲಾಲಿಪಾಪ್ ರೆಸಿಪಿ – ಸಂಜೆ ಟೀ ಜೊತೆ ಸವಿಯಲು ಸಖತ್ ಟೇಸ್ಟಿ ಸ್ನ್ಯಾಕ್ ಸಂಜೆಯ ಸಮಯದಲ್ಲಿ ಒಂದು ಕಪ್ ಬಿಸಿ ಟೀ ಅಥವಾ ಕಾಫಿಯ ಜೊತೆ ಗರಿಗರಿಯಾದ ತಿಂಡಿ ಸವಿಯಲು ಎಲ್ಲರೂ ಇಷ್ಟಪಡುತ್ತಾರೆ. ಪ್ರತಿದಿನ ಒಂದೇ ರೀತಿಯ ಸ್ನ್ಯಾಕ್ಗಳನ್ನು ತಿನ್ನುವುದಕ್ಕಿಂತ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ… Read more: ಸಂಜೆ ಟೀ ಜೊತೆ ಸವಿಯಲು ಕ್ರಿಸ್ಪಿ ಆಲೂಗಡ್ಡೆ ಲಾಲಿಪಾಪ್ ರೆಸಿಪಿ – ಮನೆಯಲ್ಲೇ ಮಾಡಿ ನೋಡಿ
- ಪದೇ ಪದೇ ಮೈಗ್ರೇನ್ ಕಾಡುತ್ತಿದೆಯೇ? ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಿಳಿಯಿರಿಪದೇ ಪದೇ ಮೈಗ್ರೇನ್ ಕಾಡುತ್ತಿದೆಯೇ? ಈ ಲಕ್ಷಣಗಳಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಮೈಗ್ರೇನ್ ಎಂದರೆ ಸಾಮಾನ್ಯ ತಲೆನೋವು ಎಂದು ಹಲವರು ಭಾವಿಸುತ್ತಾರೆ. ಆದರೆ ಇದು ಕೇವಲ ತಲೆಯ ನೋವಲ್ಲ, ನರಮಂಡಲಕ್ಕೆ ಸಂಬಂಧಿಸಿದ ಒಂದು ಸಮಸ್ಯೆಯಾಗಿದ್ದು, ತೀವ್ರವಾದ ನೋವು, ವಾಕರಿಕೆ, ವಾಂತಿ, ಬೆಳಕು ಮತ್ತು ಶಬ್ದದ ಬಗ್ಗೆ ಅತಿಸೂಕ್ಷ್ಮತೆ… Read more: ಪದೇ ಪದೇ ಮೈಗ್ರೇನ್ ಕಾಡುತ್ತಿದೆಯೇ? ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಿಳಿಯಿರಿ
- ಪ್ರತಿದಿನ ಬೆಳಗ್ಗೆ ಬೆಚ್ಚಗಿನ ನೀರು ಕುಡಿಯುವುದರಿಂದ ಸಿಗುವ 8 ಆರೋಗ್ಯ ಪ್ರಯೋಜನಗಳುಪ್ರತಿದಿನ ಬೆಳಗ್ಗೆ ಬೆಚ್ಚಗಿನ ನೀರು ಕುಡಿಯಿರಿ: ದೇಹಕ್ಕೆ ಸಿಗುವ 8 ಪ್ರಮುಖ ಆರೋಗ್ಯ ಪ್ರಯೋಜನಗಳು ದಿನದ ಆರಂಭವನ್ನು ಆರೋಗ್ಯಕರ ಅಭ್ಯಾಸದಿಂದ ಪ್ರಾರಂಭಿಸುವುದು ದೇಹ ಮತ್ತು ಮನಸ್ಸಿನ ಚೈತನ್ಯಕ್ಕೆ ಸಹಾಯಕವಾಗುತ್ತದೆ. ಬೆಳಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ಬೆಚ್ಚಗಿನ ನೀರು ಕುಡಿಯುವ ಅಭ್ಯಾಸವನ್ನು ಅನೇಕರು ಅನುಸರಿಸುತ್ತಾರೆ. ಇದು ದೇಹಕ್ಕೆ… Read more: ಪ್ರತಿದಿನ ಬೆಳಗ್ಗೆ ಬೆಚ್ಚಗಿನ ನೀರು ಕುಡಿಯುವುದರಿಂದ ಸಿಗುವ 8 ಆರೋಗ್ಯ ಪ್ರಯೋಜನಗಳು
Support Us 


