ಕನ್ನಡ ಫೊಕ್ಸ್ ಜನಪದ

ಶ್ರೀ ರಾಮರಿಗೂ ವಾಲ್ಮೀಕಿ ಅವರಿಗೂ ಏನು ಸಂಬಂಧ – ಹುತ್ತದ ವಾಲ್ಮೀಕಿ / ವಾಲ್ಮೀಕಿ ಅವರ ಜಯಂತಿ / ಜನಪದ ರಾಮಾಯಣ – 1

ಕೆಲವೋಮ್ಮೆ ಮಹತ್ಕಾರ್ಯಗಳು ಸಣ್ಣ ಅಲೋಚನೆಯಿಂದ ಲಭಿಸುತ್ತವೆ. ಅಂದೊಮ್ಮೆ ಅನಿಸುತ್ತದೆ ಈ ಮಾಹಾ ಗ್ರಂಥಗಳು ಎಲ್ಲಿಂದ ಎಲ್ಲಿಯೋ ಸಂಧಿಸುತ್ತವೆ ಎಂದು.

ಕಾಡಿನಲ್ಲಿಯ ಋಷಿ ಎಲ್ಲಿ? ಸಿಂಹಾಸನ ರಾಜನೆಲ್ಲಿ ? ಎಲ್ಲಿಯ ರಘುವಂಶ… ಎಲ್ಲಿಯ ರತ್ನಾಕರ..?! ಮತ್ತೆಲಿಯೋ ಆ ದಶಕಂಠ ?!

ಹೌದು ನಿಮ್ಮ ಊಹೆ ನಿಜ! ಇದು ರಾಮಾಯಣ ಜಾಡು. ಈ ಮಹಾಗ್ರಂಥದ ಬುನಾದಿ ಹುಡುಕಲು ಅಸಾದ್ಯ. ಆದರೆ ಸಾದ್ಯವೆನಿಸಿದ್ದು ಈ ಮಹಾ ಋಷಿ ವಾ ಲ್ಮೀ ಕೀ – ಪದದಲ್ಲೇ ಗ್ರಂಥವನಿಟ್ಟ ಮಹರ್ಷಿ !

ಈ ಮಹಾ ರತ್ನಾಕರರ ಬಗ್ಗೆ ಅನೇಕ ದಂತ ಕಥೆಗಳಿವೆ. ಅನೇಕ ವರ್ಷಗಳು ಪರಮಾತ್ಮರ ಕುರಿತು ತಪಸ್ಸು ಮಾಡಿದಾಗ ಸುತ್ತಲೂ ಹುತ್ತ ಬೆಳೆದು ನಂತರ ಎದ್ದುಬಂದ ಇವರನ್ನು ವಾಲ್ಮೀಕಿ ಎನ್ನುವುದುಂಟು.

ಕಾಡಿನ ಋಷಿ ಪುತ್ರರಾದ ಇವರಿಗೂ ರಘುವಂಶಿ ರಾಮ ರಾಜರ ಕಥೆಗೂ ಏನು ಸಂಬಂಧ ?

ಕಾಡಿನಲ್ಲಿ ಜೋಡಿ ಪಕ್ಷಿಗಳೆರೆಡು ಅನ್ಯೋನ್ಯತೆ ಇಂದಿರುವಾಗ ಬೇಡನೊಬ್ಬನ ಬಾಣ ಒಂದು ಪಕ್ಷಿಯನ್ನು ಕೊಂದಿತ್ತು, ಇದರಿಂದ ಇನ್ನೊಂದು ಪಕ್ಷಿ ಚೀರಲಾರಂಭಿಸಿತು.

ಈ ಸನ್ನಿವೇಶ ಮುನಿವರ್ಯರ ಹೃದಯವನ್ನು ಗಾಸಿಗೊಳಿಸಿ ತಕ್ಷಣ ಕೋಪ-ನೋವಿನಿಂದ ಶಾಪ ನೀಡಲು ಅವರಿಗೇ ತಿಳಿಯದಂತೆ ಅವರ ಬಾಯಲ್ಲಿ ಸಂಸ್ಕೃತ ಉಚ್ಛಾರಣೆಯಾಯಿತು.

ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ | ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್

ಎಂಬ ಪದಗಳಿಂದ ಶಪಿತನಾದ ಬೇಡ ಸ್ಥಳದಲ್ಲಿ ಶಾಪೃಕ್ಕೊಳಗಾಗುತ್ತಾನೆ ಆದರೆ ಅರಿವಿಲ್ಲದೇ ಬಂದ ಆ ಪದಗಳ ಬಗ್ಗೆ ಚಿಂತಿತರಾದರು. ಅಂದು ನಾರದರು ಅತಿಥ್ಯ ಸ್ವೀಕರಿಸಲು ಬಂದಾಗ ವಾಲ್ಮೀಕಿಯವರು ತಮ್ಮ ಮನದ ಗೊಂದಲಗಳನ್ನು ಹೇಳುತ್ತಾರೆ.

ಇದರ ಒಳಾರ್ಥ ತಿಳಿದ ನಾರದರು ವಾಲ್ಮಿಕಿಯವರಿಗೆ ಅದ್ಭುತ ಶಕ್ತಿಯನ್ನು ಮತ್ತು ಅವರಿಗೆ ಪರಮಾರ್ಥದ ಪ್ರೇರಣೆಯನ್ನು ತಿಳಿಸುತ್ತಾರೆ ಮತ್ತು ರಾಮಾಯಣ ರಚಿಸಲು ಪ್ರೇರೇಪಿಸುತ್ತಾರೆ.

ಮುಂದೆ ಎನಾಯಿತು, ಧರ್ಮಪುರುಷರ ಜೀವನ ವಾಲ್ಮೀಕಿ ಅವರಿಗೆ ತಿಳಿದಿದ್ದು ಹೇಗೆ … ಮುಂದುವರಿಯುವುದು !…


 • KannadaKing Mayuraa /ಕದಂಬರು/ಸಾರ್ವಭೌಮರು
  ನನ್ನೂರ ರಾಜರು ಭಾಗ 2 ಕದಂಬರು (ಕ್ರಿ.ಶ. 345–525) ಭಾರತದ ಕರ್ನಾಟಕದ ಪ್ರಾಚೀನ ರಾಜಮನೆತನದವರಾಗಿದ್ದು, ಇಂದಿನ ಉತ್ತರ ಕನ್ನಡ ಜಿಲ್ಲೆಯ ಉತ್ತರ ಕರ್ನಾಟಕ ಮತ್ತು ಕೊಂಕಣವನ್ನು ಬನವಾಸಿಯಿಂದ ಆಳಿದರು.                   ಈ ರಾಜ್ಯವನ್ನು ಮಯೂರಶರ್ಮ ಅವರು ಕ್ರಿ.ಪೂ. 345, ಮತ್ತು ನಂತರದ ಸಮಯದಲ್ಲಿ ಸಾಮ್ರಾಜ್ಯಶಾಹಿ […]
 • ಕೆಜಿಎಫ್ 2 ನಾವು- ನೀವು ಅಂದುಕೊಂಡಂತೆ ಖಂಡಿತ ಇರುವುದಿಲ್ಲ !
  ಜನರು ಅಂದುಕೊಳ್ಳೊದು ಒಂದು ಪ್ರಾಶಾಂತ್ ನೀಲ್ ಮಾಡೊದೇ ಇನ್ನೋಂದು ! ತುಂಬಾ ಅಂದ್ರೆ ಸುಮಾರು ವರ್ಷಗಳಿಂದ ಕಾದ ಬಂಡೆ ಮೇಲೆ ನೀರು ಅಲ್ಲ ಜಲಪಾತ ಹರಿದ ಹಾಗೆ ಹಾಗಿದೆ ನಮ್ಮ ಯಶ್ ಮಾತು ಪ್ರಶಾಂತ್ ನೀಲ್ ಅವರು ಜೀವನ ಇವತ್ತು. ಏಕೆ ಈ ಪೀಠಿಕೆ ಅಂದ್ರೆ ಅದು ಬೇರೆ ಏನು ಅಲ್ಲ ಕೆ. ಜಿ . […]
 • ಕನ್ನಡದ ಕಟ್ಟಾಳುಗಳು/Karnataka Kings – ನನ್ನೂರ ರಾಜರು ಭಾಗ 1
      ನನ್ನೂರ ರಾಜರು ಭಾಗ 1  ಕ್ರಿ.ಪೂ 4 ಮತ್ತು 3 ನೇ ಶತಮಾನದಲ್ಲಿ ಕರ್ನಾಟಕವು ನಂದ ಮತ್ತು ಮೌರ್ಯ ಸಾಮ್ರಾಜ್ಯದ ಭಾಗವಾಗಿತ್ತು. ಕ್ರಿ.ಪೂ .230 ರ ಸುಮಾರಿಗೆ ಚಿತ್ರದುರ್ಗದಲ್ಲಿನ ಬ್ರಹ್ಮಗಿರಿ ಶಾಸನಗಳು ಅಶೋಕ ಚಕ್ರವರ್ತಿ ಸೇರಿವೆ ಮತ್ತು ಹತ್ತಿರದ ಪ್ರದೇಶವನ್ನು ಇಸಿಲಾ ಎ0ದು ಹೇಳುತ್ತದೆ, ಇದರರ್ಥ ಸ0ಸ್ಕೃತದಲ್ಲಿ “ಕೋಟೆ ಪ್ರದೇಶ”.     […]
 • ಹಂಪಿ ಕಥೆಗಳು – ಅಧ್ಯಾಯ 2- ವಿಶ್ವದ ಎರಡನೇ ಅತಿದೊಡ್ಡ ಮಧ್ಯಕಾಲೀನ ಯುಗದ ನಗರವಾಗಿತ್ತು
  ಹಂಪಿ 14 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಹಂಪಿಯು ತುಂಗಭದ್ರಾ ನದಿಯ ಸಮೀಪ ಸಮೃದ್ಧ, ಶ್ರೀಮಂತ ಮತ್ತು ಭವ್ಯವಾದ ನಗರವಾಗಿತ್ತು, ಹಲವಾರು ದೇವಾಲಯಗಳು, ಹೊಲಗಳು ಮತ್ತು ವ್ಯಾಪಾರ ಮಾರುಕಟ್ಟೆಗಳಿವೆ. ಕ್ರಿ.ಶ 1500 ರ ಹೊತ್ತಿಗೆ, ಹಂಪಿ-ವಿಜಯನಗರವು, ಬೀಜಿಂಗ್ (ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ರಾಜಧಾನಿ )  ನಂತರ ವಿಶ್ವದ ಎರಡನೇ ಅತಿದೊಡ್ಡ ಮಧ್ಯಕಾಲೀನ ಯುಗದ […]
 • ಹಂಪಿ ಕಥೆಗಳು – ಅಧ್ಯಾಯ 1 : ಸಾಂಪ್ರದಾಯಿಕವಾಗಿ ಪಂಪ-ಕ್ಷೇತ್ರ- ಹಂಪೆ -ಪಂಪಾಪತಿ / ಇತಿಹಾಸದ ಪುರಾಣ ಕಥೆ
  ಹಂಪಿ ವಿಜಯನಗರ ಸಾಮ್ರಾಜ್ಯಕ್ಕೆ ಮುಂಚೆಯೇ; ಅಶೋಕನ ಶಿಲಾಶಾಸನಕ್ಕೆ ಪುರಾವೆಗಳಿವೆ, ಮತ್ತು ಇದನ್ನು ರಾಮಾಯಣ ಮತ್ತು ಹಿಂದೂ ಧರ್ಮದ ಪುರಾಣಗಳಲ್ಲಿ ಪಂಪಾ ದೇವಿ ತೀರ್ಥ ಕ್ಷೇತ್ರ ಎಂದು ಉಲ್ಲೇಖಿಸಲಾಗಿದೆ. ಹಂಪಿ – ಸಾಂಪ್ರದಾಯಿಕವಾಗಿ ಪಂಪ-ಕ್ಷೇತ್ರ, ಕಿಷ್ಕಿಂಧ-ಕ್ಷೇತ್ರ ಅಥವಾ ಭಾಸ್ಕರ-ಕ್ಷೇತ್ರ ಎಂದು ಕರೆಯಲ್ಪಡುತ್ತದೆ-ಹಿಂದೂ ಧರ್ಮಶಾಸ್ತ್ರದಲ್ಲಿ ಪಾರ್ವತಿ ದೇವಿಯ ಮತ್ತೊಂದು ಹೆಸರಾದ ಪಂಪಾದಿಂದ ಬಂದಿದೆ. ಪುರಾಣದ ಪ್ರಕಾರ, ಮೊದಲ ಪಾರ್ವತಿ […]

Leave a Reply

Your email address will not be published. Required fields are marked *