Vaibhav Suryavanshi’s IPL Sensation – ವೈಭವ್ ಸೂರ್ಯವಂಶಿ
ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅಕ್ಷರಶಃ ಅಬ್ಬರಿಸಿದ್ದಾರೆ. ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 12 ಭರ್ಜರಿ ಸಿಕ್ಸರ್ಗಳ ನೆರವಿನಿಂದ 97 ರನ್ ಸಿಡಿಸಿದ ವೈಭವ್, ಎಸ್ಆರ್ಹೆಚ್ ಬೌಲಿಂಗ್ ಪಡೆಯನ್ನು ಧೂಳೀಪಟ ಮಾಡಿದರು. ಕೇವಲ 3 ರನ್ಗಳಿಂದ ಐಪಿಎಲ್ ಇತಿಹಾಸದ ಅತ್ಯಂತ ವೇಗದ ಶತಕದ ದಾಖಲೆಯನ್ನು ಮಿಸ್ ಮಾಡಿಕೊಂಡರೂ, ಈ ಹುಡುಗನ ಆಟಕ್ಕೆ ಇಡೀ ಕ್ರಿಕೆಟ್ ಜಗತ್ತೇ ಫಿದಾ ಆಗಿದೆ. ಭಾರತದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ವೈಭವ್ ಅವರ ಆಟವನ್ನು ಕೊಂಡಾಡಿದ್ದು, ಆತನ ಪೋಷಕರಿಗೆ ವಿಶೇಷ ಸಲಹೆಯೊಂದನ್ನು ನೀಡಿದ್ದಾರೆ.![]()
Read this – DK Shivakumar Asks astrologer date And time for Karnataka CM oath ceremony – ಡಿಕೆ ಶಿವಕುಮಾರ್
ವೈಭವ್ ಆಟದ ಬಗ್ಗೆ ಮಾತನಾಡಿರುವ ಆರ್. ಅಶ್ವಿನ್, ‘ನಾನು ಇಲ್ಲಿ 15 ವರ್ಷದ ಹುಡುಗ ಎಂಬ ಕಾರ್ಡ್ ಬಳಸಿ ಮಾತನಾಡಲು ಬಯಸುವುದಿಲ್ಲ. ಆದರೆ ಈ ವಯಸ್ಸಿನಲ್ಲಿ ಇಷ್ಟು ಅದ್ಭುತವಾದ ಮಾನಸಿಕ ಪಕ್ವತೆ ಬರಬೇಕಾದರೆ ಆತ ಎಷ್ಟು ಪಂದ್ಯಗಳನ್ನು ಆಡಿರಬಹುದು ನೀವೇ ಹೇಳಿ’ ಎಂದು ಅವರು ಕೇಳಿದ್ದಾರೆ.‘ಸೀಸನ್ ಆರಂಭದಲ್ಲಿ ಇದೇ ರೀತಿಯ ಎಸೆತಗಳನ್ನು ನೇರವಾಗಿ ಹೊಡೆಯಲು ಹೋಗಿ ಟಾಪ್ ಎಡ್ಜ್ ಆಗುತ್ತಿತ್ತು. ಆದರೆ ಒಂದೇ ಸೀಸನ್ನಲ್ಲಿ ಆತ ತನ್ನ ತಪ್ಪುಗಳನ್ನು ತಿದ್ದಿಕೊಂಡು ಥರ್ಡ್ ಮ್ಯಾನ್ ಮೇಲೆ ಸಿಕ್ಸರ್ ಬಾರಿಸುವ ಮಟ್ಟಿಗೆ ಬದಲಾಗಿದ್ದಾನೆ. ಆತ ಸಾಮಾನ್ಯ ಆಟಗಾರನಲ್ಲ. ಅವನ ತಂದೆ-ತಾಯಿ ಏನು ಬೇಕಾದರೂ ಮಾಡಲಿ, ಆದರೆ ಮೊದಲು ಅವನಿಗೆ ತಗುಲಿರುವ ಕೆಟ್ಟ ದೃಷ್ಟಿಯನ್ನು (Evil Eye) ತೆಗೆಯಲಿ’ ಎಂದು ಹೇಳಿದ್ದಾರೆ.
Ravi Ashwin on Vaibhav Suryavanshi:
“I don’t wanna play 15 years old boy card but tell me how many matches did he play at age of 15 to get this level of mental maturity?
If you remember his uppercut over 3rd man for six, the same ball at start of season he was trying to play… pic.twitter.com/yt8KmqgFlG
— Rajiv (@Rajiv1841) May 28, 2026
ಪಂದ್ಯದ ನಂತರ ವೈಭವ್ ಆಡಿದ ಮಾತುಗಳು ಅಶ್ವಿನ್ ಅವರ ಮನಗೆದ್ದಿವೆ. ಈ ಬಗ್ಗೆ ಉಲ್ಲೇಖಿಸಿದ ಅಶ್ವಿನ್, ‘ಪಂದ್ಯ ಮುಗಿದ ಬಳಿಕ ಆ ಹುಡುಗ, ಶತಕಗಳು ಆಮೇಲೆಯೂ ಬರುತ್ತವೆ, ಇವತ್ತಿನ ಪಂದ್ಯದಲ್ಲಿ ತಂಡವನ್ನು ಗೆಲ್ಲಿಸುವುದು ನನ್ನ ಗುರಿಯಾಗಿತ್ತು’ ಎಂದು ಹೇಳಿದ್ದಾನೆ. ಅವನ ಬ್ಯಾಟಿಂಗ್ ಶೈಲಿ ನೋಡಿದರೆ ಆತನಿಗೆ 100 ರನ್ ಗಳಿಸುವ ಬಗ್ಗೆ ಚಿಂತೆಯಿಲ್ಲ, ಅದು ಎಂದಾದರೂ ಬಂದೇ ಬರುತ್ತದೆ ಎಂಬ ನಂಬಿಕೆ ಅವನಲ್ಲಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಒತ್ತಡದ ಪರಿಸ್ಥಿತಿಯನ್ನು ಆತ ನಿಭಾಯಿಸಿದ ರೀತಿ ನಿಜಕ್ಕೂ ಅದ್ಭುತ,” ಎಂದು ಶ್ಲಾಘಿಸಿದ್ದಾರೆ.ಬುಧವಾರ ನಡೆದ ಹೈವೋಲ್ಟೇಜ್ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸಿಕ್ಸರ್ಗಳ ಮಳೆ ಹರಿಸಿದರು. ಹೈದರಾಬಾದ್ ನಾಯಕ ಹಾಗೂ ವಿಶ್ವದ ಶ್ರೇಷ್ಠ ಬೌಲರ್ ಪ್ಯಾಟ್ ಕಮ್ಮಿನ್ಸ್ ಓವರ್ನಲ್ಲೇ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಅಬ್ಬರಿಸಿದ ವೈಭವ್, ಕಮ್ಮಿನ್ಸ್ ಅವರ ಬೌಲಿಂಗ್ ಲಯವನ್ನೇ ತಪ್ಪಿಸಿದರು.
Read this – RR vs SRH ; ಲೈವ್ ಸ್ಕೋರ್ IPL 2026 ಎಲಿಮಿನೇಟರ್ನಲ್ಲಿ ಬ್ಯಾಟರ್ಗಳ ಅಬ್ಬರ!
ಕ್ರಿಸ್ ಗೇಲ್ ದಾಖಲೆ ಬ್ರೇಕ್: ಒಂದೇ ಐಪಿಎಲ್ ಸೀಸನ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಕ್ರಿಸ್ ಗೇಲ್ (59 ಸಿಕ್ಸರ್) ಅವರ 14 ವರ್ಷಗಳ ಹಳೆಯ ದಾಖಲೆಯನ್ನು ವೈಭವ್ (65 ಸಿಕ್ಸರ್) ಮುರಿದಿದ್ದಾರೆ.
ವೇಗದ ಅರ್ಧಶತಕ: ಕೇವಲ 16 ಎಸೆತಗಳಲ್ಲಿ ಫಿಫ್ಟಿ ಬಾರಿಸುವ ಮೂಲಕ ಐಪಿಎಲ್ ಪ್ಲೇಆಫ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕದ ದಾಖಲೆ ಬರೆದರು.
ವಾರ್ನರ್ ದಾಖಲೆ ಉಡೀಸ್: ಪವರ್ಪ್ಲೇ ಓವರ್ಗಳಲ್ಲಿ ಭರ್ಜರಿ 490 ರನ್ ಗಳಿಸುವ ಮೂಲಕ ಒಂದೇ ಸೀಸನ್ನ ಪವರ್ಪ್ಲೇನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಡೇವಿಡ್ ವಾರ್ನರ್ ದಾಖಲೆಯನ್ನೂ ಧೂಳೀಪಟ ಮಾಡಿದರು. ವೈಭವ್ ನೀಡಿದ ಈ ಆಘಾತದಿಂದ ಚೇತರಿಸಿಕೊಳ್ಳದ ಸನ್ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ 47 ರನ್ಗಳ ಸೋಲು ಕಂಡು ಐಪಿಎಲ್ 2026ರ ಟೂರ್ನಿಯಿಂದ ಹೊರಬಿದ್ದಿದೆ. ರಾಜಸ್ಥಾನ್ ರಾಯಲ್ಸ್ ಭರ್ಜರಿಯಾಗಿ ಕ್ವಾಲಿಫೈಯರ್ 2 ಹಂತಕ್ಕೇರಿದೆ.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


