T20 World Cup -ಟಿ20 ವರ್ಲ್ಡ್‌ಕಪ್ ಜಂಜ OCI: ಮಾರ್ಷ್ ಗಾಯಗೊಂಡು ಸ್ಮಿತ್ ತಂಡಕ್ಕೆ ಕರೆ
2026 ರ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ತಂಡ ತನ್ನ ಮೊದಲ ಪಂದ್ಯವನ್ನು ಇಂದು ಐರ್ಲೆಂಡ್ ವಿರುದ್ಧ ಆಡಿತು. ಆದರೆ ಈ ಪಂದ್ಯದಲ್ಲಿ ತಂಡದ ನಾಯಕ ಮಿಚೆಲ್ ಮಾರ್ಷ್ ಆಡಲಿಲ್ಲ. ಇದಕ್ಕೆ ಕಾರಣ ಗಾಯ. ವಾಸ್ತವವಾಗಿ ಆಸ್ಟ್ರೇಲಿಯಾ ತಂಡಕ್ಕೆ ಸ್ಟಾರ್ ಆಟಗಾರರ ಗಾಯದ ಸಮಸ್ಯೆ ಬೆಂಬಿಡದ ಭೂತದಂತೆ ಕಾಡುತ್ತಿದೆ. ಇದೆಲ್ಲದರ ನಡುವೆ ತಂಡದ ನಾಯಕ ಮಾರ್ಷ್ ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ.
ಆಸ್ಟ್ರೇಲಿಯಾ ತಂಡ ಆಟಗಾರರ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ಇದೇ ಮೊದಲಲ್ಲ. ವಿಶ್ವಕಪ್ ಆರಂಭಕ್ಕೂ ಮುನ್ನವೇ ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್‌ವುಡ್, ಟಿಮ್ ಡೇವಿಡ್ ಗಾಯಗೊಂಡಿದ್ದರು. ಈಗ ಮಿಚೆಲ್ ಮಾರ್ಷ್ ಗಾಯಗೊಂಡಿದ್ದಾರೆ. ಚಾಂಪಿಯನ್ ಉದ್ದೇಶದಿಂದ ಟಿ20 ವಿಶ್ವಕಪ್‌ಗೆ ಪ್ರವೇಶಿಸಿದ್ದ ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಮ್ಮೆ ದುಃಖದ ಬೆಟ್ಟವೇ ಅಪ್ಪಳಿಸಿದೆ.
Read This:ಮುಂದಿನವಾರ ರಾಜಧಾನಿಯಲ್ಲಿ ಇರಲಿದೆ ದಾಖಲೆಯ ಚಳಿ- Kannada News | Bangalore Braces for Record Cold
ಐರ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾದ ನಾಯಕ ಮಿಚೆಲ್ ಮಾರ್ಷ್ ಗಾಯಗೊಂಡಿದ್ದಾರೆ. ಬ್ಯಾಟಿಂಗ್ ಅಭ್ಯಾಸದ ಸಮಯದಲ್ಲಿ ಮಾರ್ಷ್ಗೆ ಗಂಭೀರ ಗಾಯವಾಗಿದೆ. ವರದಿ ಪ್ರಕಾರ ಮಾರ್ಷ್ ಅವರ ಕಿಬ್ಬೊಟ್ಟೆಯ ಗಾರ್ಡ್‌ಗೆ ಚೆಂಡು ತಗುಲಿದ್ದು, ಇದರಿಂದ ಅವರಿಗೆ ಗಂಭೀರ ಗಾಯವಾಗಿದೆ.
ಮಿಚೆಲ್ ಮಾರ್ಷ್ ಗಂಭೀರವಾಗಿ ಗಾಯಗೊಂಡಿರುವುದರಿಂದ ಅವರ ಚೇತರಿಕೆಗೆ ಸಮಯ ಬೇಕಾಗಬಹುದು. ಹೀಗಾಗಿ ಆಸ್ಟ್ರೇಲಿಯಾದ ಆಯ್ಕೆದಾರರು ಅನುಭವಿ ಸ್ಟೀವ್ ಸ್ಮಿತ್ ಅವರನ್ನು ಮೀಸಲು ಆಟಗಾರನಾಗಿ ತಂಡಕ್ಕೆ ಆಯ್ಕೆ ಮಾಡಿದ್ದಾರೆ. ಮುಂದಿನ ಪಂದ್ಯದಲ್ಲಿ ಮಾರ್ಷ್ ಭಾಗವಹಿಸುವುದು ಇನ್ನು ಖಚಿತವಾಗಿಲ್ಲ. ಮುಂದೆ ಆಡುವುದು ಕೂಡ ಮುಂಬರುವ ದಿನಗಳಲ್ಲಿ ತಿಳಿಯಲಿದೆ. ಒಂದು ವೇಳೆ ಮಾರ್ಷ್ ಗುಣಮುಖರಾಗದಿದ್ದರೆ, ಸ್ಮಿತ್ ತಂಡದಲ್ಲಿ ಆಡಲಿದ್ದಾರೆ.
Read This:ಮುಂದಿನವಾರ ರಾಜಧಾನಿಯಲ್ಲಿ ಇರಲಿದೆ ದಾಖಲೆಯ ಚಳಿ- Kannada News | Bangalore Braces for Record Cold
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


