Homeಕನ್ನಡ ಫೊಕ್ಸ್T20 World Cup -ಟಿ20 ವರ್ಲ್ಡ್‌ಕಪ್ ಜಂಜ OCI: ಮಾರ್ಷ್ ಗಾಯಗೊಂಡು ಸ್ಮಿತ್ ತಂಡಕ್ಕೆ ಕರೆ

T20 World Cup -ಟಿ20 ವರ್ಲ್ಡ್‌ಕಪ್ ಜಂಜ OCI: ಮಾರ್ಷ್ ಗಾಯಗೊಂಡು ಸ್ಮಿತ್ ತಂಡಕ್ಕೆ ಕರೆ

T20 World Cup 2026: 2026ರ ಟಿ20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ನಾಯಕ ಮಿಚೆಲ್ ಮಾರ್ಷ್ ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನ ಗಾಯಗೊಂಡಿದ್ದು, ಅವರ ಆಟದ ಬಗ್ಗೆ ಅನುಮಾನ ಮೂಡಿದೆ. ಪ್ಯಾಟ್ ಕಮ್ಮಿನ್ಸ್, ಹ್ಯಾಜಲ್‌ವುಡ್ ಕೂಡ ಗಾಯಗೊಂಡಿದ್ದಾರೆ

T20 World Cup -ಟಿ20 ವರ್ಲ್ಡ್‌ಕಪ್ ಜಂಜ OCI: ಮಾರ್ಷ್ ಗಾಯಗೊಂಡು ಸ್ಮಿತ್ ತಂಡಕ್ಕೆ ಕರೆ

2026 ರ ಟಿ20 ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ತಂಡ ತನ್ನ ಮೊದಲ ಪಂದ್ಯವನ್ನು ಇಂದು ಐರ್ಲೆಂಡ್ ವಿರುದ್ಧ ಆಡಿತು. ಆದರೆ ಈ ಪಂದ್ಯದಲ್ಲಿ ತಂಡದ ನಾಯಕ ಮಿಚೆಲ್ ಮಾರ್ಷ್ ಆಡಲಿಲ್ಲ. ಇದಕ್ಕೆ ಕಾರಣ ಗಾಯ. ವಾಸ್ತವವಾಗಿ ಆಸ್ಟ್ರೇಲಿಯಾ ತಂಡಕ್ಕೆ ಸ್ಟಾರ್ ಆಟಗಾರರ ಗಾಯದ ಸಮಸ್ಯೆ ಬೆಂಬಿಡದ ಭೂತದಂತೆ ಕಾಡುತ್ತಿದೆ. ಇದೆಲ್ಲದರ ನಡುವೆ ತಂಡದ ನಾಯಕ ಮಾರ್ಷ್​ ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ.

ಆಸ್ಟ್ರೇಲಿಯಾ ತಂಡ ಆಟಗಾರರ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ಇದೇ ಮೊದಲಲ್ಲ. ವಿಶ್ವಕಪ್ ಆರಂಭಕ್ಕೂ ಮುನ್ನವೇ ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್‌ವುಡ್, ಟಿಮ್ ಡೇವಿಡ್ ಗಾಯಗೊಂಡಿದ್ದರು. ಈಗ ಮಿಚೆಲ್ ಮಾರ್ಷ್ ಗಾಯಗೊಂಡಿದ್ದಾರೆ. ಚಾಂಪಿಯನ್ ಉದ್ದೇಶದಿಂದ ಟಿ20 ವಿಶ್ವಕಪ್‌ಗೆ ಪ್ರವೇಶಿಸಿದ್ದ ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಮ್ಮೆ ದುಃಖದ ಬೆಟ್ಟವೇ ಅಪ್ಪಳಿಸಿದೆ.

T20 World Cup winners: Full list of champions

Read This:ಮುಂದಿನವಾರ ರಾಜಧಾನಿಯಲ್ಲಿ ಇರಲಿದೆ ದಾಖಲೆಯ ಚಳಿ- Kannada News | Bangalore Braces for Record Cold

ಐರ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾದ ನಾಯಕ ಮಿಚೆಲ್ ಮಾರ್ಷ್ ಗಾಯಗೊಂಡಿದ್ದಾರೆ. ಬ್ಯಾಟಿಂಗ್ ಅಭ್ಯಾಸದ ಸಮಯದಲ್ಲಿ ಮಾರ್ಷ್​ಗೆ ಗಂಭೀರ ಗಾಯವಾಗಿದೆ. ವರದಿ ಪ್ರಕಾರ ಮಾರ್ಷ್​ ಅವರ ಕಿಬ್ಬೊಟ್ಟೆಯ ಗಾರ್ಡ್‌ಗೆ ಚೆಂಡು ತಗುಲಿದ್ದು, ಇದರಿಂದ ಅವರಿಗೆ ಗಂಭೀರ ಗಾಯವಾಗಿದೆ.

ಮಿಚೆಲ್ ಮಾರ್ಷ್ ಗಂಭೀರವಾಗಿ ಗಾಯಗೊಂಡಿರುವುದರಿಂದ ಅವರ ಚೇತರಿಕೆಗೆ ಸಮಯ ಬೇಕಾಗಬಹುದು. ಹೀಗಾಗಿ ಆಸ್ಟ್ರೇಲಿಯಾದ ಆಯ್ಕೆದಾರರು ಅನುಭವಿ ಸ್ಟೀವ್ ಸ್ಮಿತ್ ಅವರನ್ನು ಮೀಸಲು ಆಟಗಾರನಾಗಿ ತಂಡಕ್ಕೆ ಆಯ್ಕೆ ಮಾಡಿದ್ದಾರೆ. ಮುಂದಿನ ಪಂದ್ಯದಲ್ಲಿ ಮಾರ್ಷ್ ಭಾಗವಹಿಸುವುದು ಇನ್ನು ಖಚಿತವಾಗಿಲ್ಲ. ಮುಂದೆ ಆಡುವುದು ಕೂಡ ಮುಂಬರುವ ದಿನಗಳಲ್ಲಿ ತಿಳಿಯಲಿದೆ. ಒಂದು ವೇಳೆ ಮಾರ್ಷ್​ ಗುಣಮುಖರಾಗದಿದ್ದರೆ, ಸ್ಮಿತ್ ತಂಡದಲ್ಲಿ ಆಡಲಿದ್ದಾರೆ.

Read This:ಮುಂದಿನವಾರ ರಾಜಧಾನಿಯಲ್ಲಿ ಇರಲಿದೆ ದಾಖಲೆಯ ಚಳಿ- Kannada News | Bangalore Braces for Record Cold

ಸ್ಟೀವ್ ಸ್ಮಿತ್ ಪ್ರಸ್ತುತ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗೆ ನಡೆದಿದ್ದ ಬಿಗ್ ಬ್ಯಾಷ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸ್ಮಿತ್, ಸಿಡ್ನಿ ಸಿಕ್ಸರ್ಸ್‌ ತಂಡದ ಪರ ಆಡಿದ ಆರು ಇನ್ನಿಂಗ್ಸ್‌ಗಳಲ್ಲಿ 59 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 299 ರನ್ ಕಲೆಹಾಕಿದ್ದರು. 167.97 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ ಸ್ಮಿತ್ ಸಿಡ್ನಿ ಥಂಡರ್ ವಿರುದ್ಧ ಕೇವಲ 42 ಎಸೆತಗಳಲ್ಲಿ ಶತಕ ಬಾರಿಸುವುದರ ಜೊತೆಗೆ ಲೀಗ್​ನಲ್ಲಿ ಎರಡು ಅರ್ಧಶತಕಗಳನ್ನು ಬಾರಿಸಿದ್ದರು.

ಗಾಯದ ಕಾರಣದಿಂದಾಗಿ ಮಿಚೆಲ್ ಮಾರ್ಷ್ ಐರ್ಲೆಂಡ್ ವಿರುದ್ಧ ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ಟ್ರಾವಿಸ್ ಹೆಡ್ ಅವರನ್ನು ನಾಯಕನನ್ನಾಗಿ ನೇಮಿಸಲಾಯಿತು. ಆಸ್ಟ್ರೇಲಿಯಾವನ್ನು ಟಿ20 ವಿಶ್ವಕಪ್ ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು, ಆದರೆ ಈಗ ತಂಡವು ಪ್ರಮುಖ ಆಟಗಾರರನ್ನು ಗಾಯದಿಂದಾಗಿ ಕಳೆದುಕೊಂಡಿದೆ. ಪ್ಯಾಟ್ ಕಮ್ಮಿನ್ಸ್ ಮತ್ತು ಹ್ಯಾಜಲ್‌ವುಡ್ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದರೆ ಜೊತೆಗೆ ಟಿಮ್ ಡೇವಿಡ್ ಮತ್ತು ಮಾರ್ಷ್ ಆಡುವುದು ಕೂಡ ಅನುಮಾನವಾಗಿದೆ.

 

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×