Sabarimala-ಶಬರಿಮಲೆ ಯಾತ್ರೆ ಎಷ್ಟು ಕಠಿಣವಾಗಿರುತ್ತೆ?-Top Devotional stories of Ayyappa Swam
Read this-Harivaraasanam Vishwamohanam ಹರಿವರಾಸನಂ ವಿಶ್ವಮೋಹನಂ Top Devotional Songs
ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳಲ್ಲಿ ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನ ಕೂಡ ಒಂದು. ಈ ದೇವಸ್ಥಾನಕ್ಕೆ ದೇಶದ ಮೂಲೆ ಮೂಲೆಗಳಿಂದ ಜನ ಆಗಮಿಸುತ್ತಾರೆ. ಅಯ್ಯಪ್ಪನ ದರ್ಶನ ಪಡೆಯಲು ಭಕ್ತರು ಮಾಲೆ ಧರಿಸಿ ಬರುತ್ತದೆ. ಸಾಮಾನ್ಯವಾಗಿ ಮಕರ ಸಂಕ್ರಾಂತಿಯ ಮೊದಲು ಹೆಚ್ಚಾಗಿ ಮಾಲೆ ಧರಿಸಿ, ದೇವರ ದರ್ಶನಕ್ಕೆ ಬರುತ್ತಾರೆ. ಪ್ರತಿವರ್ಷ ನವೆಂಬರ್ನಿಂದ ಡಿಸೆಂಬರ್ ತನಕ ವಾರ್ಷಿಕ ಪೂಜೆಗಳು ನಡೆಯುತ್ತದೆ. ಈ ಸಮಯದಲ್ಲಿ ಭಕ್ತಾಧಿಗಳು ಸ್ವಲ್ಪ ಹೆಚ್ಚು ಬರುತ್ತದೆ. ಆದರೆ ಇಲ್ಲಿಗೆ ಬರುವ ಭಕ್ತರು 41 ದಿನಗಳ ಕಾಲ ವ್ರತ ಆಚರಣೆ ಮಾಡಿ ಬರುತ್ತಾರೆ. ಅದನ್ನು ಮಾಲೆ ಹಾಕುವುದು ಎಂದು ಹೇಳಲಾಗುತ್ತದೆ. ಹಾಗಾದ್ರೆ ಈ ಮಾಲೆ ಹಾಕುವುದು ಏಕೆ ಕಡ್ಡಾಯ ಎಂಬುದು ಇಲ್ಲಿದೆ.
ಮಾಲೆ ಹಾಕಿ ಬರುವ ಸಾವಿರಾರು ಭಕ್ತಾಧಿಗಳು
ಕೇರಳದ ಪಥನಂತಿಟ್ಟ ಜಿಲ್ಲೆಯ ಅಯ್ಯಪ್ಪ ದೇವರಿಗೆ ಸಮರ್ಪಿತವಾಗಿರುವ ಶಬರಿಮಲೆ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಸಮುದ್ರ ಮಟ್ಟದಿಂದ 4000 ಅಡಿ ಎತ್ತರದಲ್ಲಿರುವ ಈ ದೇವಾಲಯಕ್ಕೆ ನಾಲ್ಕು ಕಿಲೋಮೀಟರ್ಗಳಿಗಿಂತ ಹೆಚ್ಚು ದೂರದ ಹಾಗೂ ಕಷ್ಟಕರವಾದ ಟ್ರೆಕ್ಕಿಂಗ್ ಮೂಲಕ ಭಕ್ತರು ಕಾಲ್ನಡಿಗೆಯಲ್ಲಿ ಹೋಗುತ್ತಾರೆ. ಇನ್ನು ಕಾಡಿನ ಮೂಲಕ, ಪಂಬಾ ನದಿಯನ್ನು ದಾಟಿ ಈ ದೇವಾಲಯಕ್ಕೆ ಹೋಗುವ ಈ ದೇವಾಲಯಕ್ಕೆ ಸಂಕ್ರಾಂತಿಯ ಸಮಯದಲ್ಲಿ ಮಕರ ಜ್ಯೋತಿ ವೀಕ್ಷಣೆಗೆ ಕಠಿಣ ವ್ರತ ಮಾಡುವ ಮೂಲಕ ಬರುತ್ತಾರೆ.
ವೃಶ್ಚಿಕ ಮಾಸದ 1 ನೇ ದಿನದಂದು ಗುರುಸ್ವಾಮಿ ಅವರು ಮಾಲೆ (ತುಳಸಿ ಅಥವಾ ರುದ್ರಾಕ್ಷ ಮಣಿಗಳ ಸರ) ಹಾಕುತ್ತಾರೆ. ಸಾಮಾನ್ಯವಾಗಿ ದೇವಸ್ಥಾನದಲ್ಲಿ ಮಾಲಾಧಾರಣೆಯ ಕಾರ್ಯಕ್ರಮ ಮಾಡಲಾಗುತ್ತದೆ. ಮೊದಲು ಮಾಲೆ ಧರಿಸುವ ಭಕ್ತ ದಕ್ಷಿಣೆ ಅರ್ಪಿಸುವ ಮೂಲಕ ಅವರ ಹೆತ್ತವರು ಮತ್ತು ಹಿರಿಯರ ಆಶೀರ್ವಾದವನ್ನು ಪಡೆಯುತ್ತಾರೆ.
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ



