Mutton Roast Recipe – ಮಟನ್ ರೋಸ್ಟ್
ಬೇಕಾಗುವ ಪದಾರ್ಥಗಳು..
- ಮಟನ್: 1/2 ಕೆಜಿ (ಚಿಕ್ಕದಾಗಿ ಕತ್ತರಿಸಿದ್ದು)
- ಈರುಳ್ಳಿ: 2-3 (ಸಣ್ಣದಾಗಿ ಹೆಚ್ಚಿದ್ದು)
- ಶುಂಠಿ-ಬೆಳ್ಳುಳ್ಳಿ ಪೇಸ್ಟ್: 1 ದೊಡ್ಡ ಚಮಚ
- ಖಾರದ ಪುಡಿ: 1-2 ಚಮಚ (ರುಚಿಗೆ ತಕ್ಕಂತೆ)
- ದನಿಯಾ ಪುಡಿ: 1 ಚಮಚ
- ಗರಂ ಮಸಾಲ ಪುಡಿ: 1/2 ಚಮಚ
- ಅರಿಶಿನ ಪುಡಿ: 1/2 ಚಮಚ
- ಕಾಳು ಮೆಣಸಿನ ಪುಡಿ: 1 ಚಮಚ
- ಕರಿಬೇವು: 2 ಎಸಳು
- ಹಸಿಮೆಣಸಿನಕಾಯಿ: 2-3
- ಎಣ್ಣೆ ಅಥವಾ ತುಪ್ಪ: 3-4 ಚಮಚ
- ನಿಂಬೆ ರಸ: 1 ಚಮಚ
- ಉಪ್ಪು: ರುಚಿಗೆ ತಕ್ಕಷ್ಟು

Read this – Methi rice bath Recipe in Kannada ಮೆಂತ್ಯ ಸೊಪ್ಪಿನ ಬಾತ್
ಮಾಡುವ ವಿಧಾನ…
- ಕುಕ್ಕರ್ನಲ್ಲಿ ಮಟನ್, ಅರಿಶಿನ, ಉಪ್ಪು, ಸ್ವಲ್ಪ ಖಾರದ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಸ್ವಲ್ಪ ನೀರು ಸೇರಿಸಿ 4-5 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ.
- ಒಂದು ಬಾಣಲೆಗೆ ಎಣ್ಣೆ ಅಥವಾ ತುಪ್ಪ ಹಾಕಿ ಬಿಸಿ ಮಾಡಿ. ಅದಕ್ಕೆ ಕರಿಬೇವು, ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿಸಿ ಚೆನ್ನಾಗಿ ಹುರಿಯಿರಿ. ಈರುಳ್ಳಿ ಚಿನ್ನ ಬಣ್ಣ ಬರುವವರೆಗೆ ಹುರಿಯಬೇಕು.
- ಈಗ ಇದಕ್ಕೆ ಧನಿಯಾ ಪುಡಿ, ಖಾರದ ಪುಡಿ ಮತ್ತು ಗರಂ ಮಸಾಲ ಸೇರಿಸಿ ಸಣ್ಣ ಉರಿಯಲ್ಲಿ 1 ನಿಮಿಷ ಹುರಿಯಿರಿ.
- ಬೇಯಿಸಿದ ಮಟನ್ ಅನ್ನು ಮಸಾಲೆಯೊಂದಿಗೆ ಸೇರಿಸಿ (ಮಟನ್ ಬೇಯಿಸಿದ ನೀರು ಇದ್ದರೆ ಅದನ್ನೂ ಸೇರಿಸಿ). ಮಟನ್ ನೀರಿನಂಶ ಸಂಪೂರ್ಣವಾಗಿ ಆವಿಯಾಗಿ ಅದು ಎಣ್ಣೆ ಬಿಡುವವರೆಗೆ ಚೆನ್ನಾಗಿ ಫ್ರೈ ಮಾಡಿ.
- ಕೊನೆಯಲ್ಲಿ ಕಾಳು ಮೆಣಸಿನ ಪುಡಿ ಮತ್ತು ಲಿಂಬೆ ರಸ ಸೇರಿಸಿ ಚೆನ್ನಾಗಿ ಕಲಸಿ. ಬೇಕಿದ್ದಲ್ಲಿ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಮೇಲಿನಿಂದ ಉದುರಿಸಿ. ಇದೀಗ ರುಚಿಕರವಾದ ಮಟನ್ ರೋಸ್ಟ್ ಸವಿಯಲು ಸಿದ್ಧ.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ



