HomeLyricsKolumande Jangama Song lyrics-ಕೋಲು ಮಂಡೆ|Janumada Jodi

Kolumande Jangama Song lyrics-ಕೋಲು ಮಂಡೆ|Janumada Jodi

Janapada song

ಉಘೇ ಮಾತ್ಮಲ್ಲಯ್ಯ
ಉಘೇ ಮಾತ್ಮಲ್ಲಯ್ಯ
ಕೋಲು ಮಂಡೆ ಜಂಗುಮ ದೇವರು
ಗುರುವೇ ಕ್ವಾರುಣ್ಯಕೆ ದಯಮಾಡೌವ್ರೇ
ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ
ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ
ಕೊಡುವಾಗ್ಲೆಲ್ಲ ಕೊಡ್ತಾನೊ ನಮ್ಮಪ್ಪ ಶಿವ
ಆಹಾ
ಅವನು ಒಲಿದರೆ ಕೊರಡು
ಕೊನರಿ ಬಂಗಾರ ಬಾಳವ್ವ
ಹೌದು
ಅಕ್ಕರೆ ಮಾತಾಡಿ ಭಿಕ್ಷೆ ಆಕವ್ವ
ಅಂದೌವ್ನೆ ಮಾದೇವ
ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ
ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ
ತಾಯಿ ಅಂದ್ರೆ ತಾಯಿ ಆಗ್ಬೇಕಿಲ್ಲ ತಾಯಿ
ಆಹಾ
ಲಗ್ನ ಆಗ್ದೇ ಇರೊ ಹೆಣ್ಮಗಳು ತಾಯಿ
ಹೌದು.. ಹೌದು..
ಭಿಕ್ಷೆ ನೀಡುದ್ರೆ ಬಾಳು ಬಂಗಾರ ತಾಯಿ
ಬೈದ್ ದೂಡುದ್ರೆ ಬಾಳು
ಬೂದ್ಗುಂಬಳಕಾಯಿ ಅಂದೌನೆ ಮಾದೇವಾ
ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ
ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ
ಹುಡ್ಗಿ ಅಂದ್ರೆ ಚಿಕ್ಕ್
ಹುಡ್ಗಿ ಅಲ್ಲ ತಾಯಿ
ಕಂಕಣ ಭಾಗ್ಯ ಬರೊ ಕನ್ಯಾಮಣಿ ತಾಯಿ
ಹುಮ್ಮ್
ಭಿಕ್ಷೆ ನೀಡುದ್ರೆ ಸಿರಿ ಸಿಂಗಾರ ತಾಯಿ
ಬೈದ್ ದೂಡುದ್ರೆ ನಿಮ್ ಬಾಳು
ಬೆಂಡೇಕಾಯಿ ಅಂದೌವ್ನೆ ಮಾದೇವಾ
ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ
ಕ್ವೋರಣ್ಯ ನೀಡವ್ವ ಕೋಡುಗಲ್ಲಮಾದೇವನಿಗೆ
ಶುಭವಾಗುತೈತಮ್ಮೋ
ಶುಭವಾಗುತೈತಮ್ಮೋ
ಹೆತ್ತೌವ್ರ ಪುಣ್ಯವು ಗುಟ್ಟಾಗಿ ಬಂತಮ್ಮೋ
ಮುತ್ತಂಥ ಭಾಗ್ಯವ ಬಾಗಿಲಿಗೆ ತಂತಮ್ಮೋ
ದೇವರ ಗುಡ್ಡ ಬಂದು ಭಕ್ತಿಇಂದ ಶಿವ
ನೆನೆದು ಹಾಡಿ
ಅಲ್ ಅಲ್ ಅಲ್ ಲೇ
ಭೂದೇವಿ ಕೈಯ ಚಾಚಿ ಆಕಾಶಾನ
ಮುಟ್ಟೋತಾವು ನೋಡಿ
ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ
ಶರಣೆಂದಾವೋ ಬನವು ಶರಣೆಂದಾವೋ
ಬನವೆಲ್ಲ ಹೂವಾದೋ,
ಹೂವೆಲ್ಲ ಗಮ್ಮೆಂದೊ
ಕೈ ಎತ್ತಿ ಕ್ವಾರುಣ್ಯ ಭಿಕ್ಷೆಯ ನೀಡೌವೋ
ಮಾದೇವ್ನ ಮನಸಾರೆ ರಕ್ಷೆಯ ಕೇಳವ್ವೋ
ನೆತ್ತಿಯ ಸೂರ್ಯ ಸ್ವಾಮಿ ಕತ್ಲೆ ಮನಗೆ
ಓಗೊ ಒತ್ತು ಆಡು
ಅಲ್ ಅಲ್ ಅಲ್ ಲೇ
ಚಿತ್ತಾವ ಗಟ್ಟಿ ಮಾಡಿ ಇತ್ತಾಗಿ
ಕುಳಿತ್ರೆ ಮುತ್ತು ನೋಡೋ
ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ
ಶರಣೆಂದಾವೋ ಬನವು ಶರಣೆಂದಾವೋ
ಕಾದೋರ್ಗೆ ಕಾಣ್ತಾನೋ,
ಕಂಡೋರ್ಗೆ ನೀಡ್ತಾನೋ
ಮುಂಗಾರ ಮಳೆಬರಲು
ಸೋಗೆಯು ಕುಣಿದಾವೋ
ಬಾಯಾರಿ ನೆಲದೊಡಲ
ಕಣಕಣವು ಮಣಿದಾವೋ
ಕೋಡ್ಗಲ್ಲ ಗುಡ್ಡೆ ಮ್ಯಾಗೆ ಮಾದೇವ ಬಂದೆ
ಬರುತಾನವ್ವೋ
ಅಲ್ ಅಲ್ ಅಲ್ ಲೇ
ನಂಬಿದ ಭಕ್ತರಿಗೆಂದು ಪ್ರೀತಿಯ
ಕೊಟ್ಟೆ ಕೊಡುತಾನವ್ವೋ
ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ
ಶರಣೆಂದಾವೋ ಬನವು ಶರಣೆಂದಾವೋ
ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ
ಶರಣೆಂದಾವೋ ಬನವು ಶರಣೆಂದಾವೋ
ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ
ಶರಣೆಂದಾವೋ ಬನವು ಶರಣೆಂದಾವೋ
ಮಾತಾಡ್ಯಾವೋ ಲಿಂಗ ಮಾತಾಡ್ಯಾವೋ
ಶರಣೆಂದಾವೋ ಬನವು ಶರಣೆಂದಾವೋ

Get More Here : 

Kelo Madeva Kannada Song – kelo mahadeva kannada song lyrics

Devare neenu nijavappa lyrics

Kelo madeva song lyrics

Devare neenu nijavappa lyrics in kannada

Madeshwara song lyrics in kannada

Mahadeshwara daya barade lyrics

Siddayya swamy banni lyrics in kannada

Madeshwara song lyrics

Ganga jatadhara lyrics in kannada

Adidavara manava balle song lyrics

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×