Kidnapping case – ‘ಭೀಮ’ ಚಿತ್ರ ನಟಿ ಸೇರಿ 11 ಜನ ಜೈಲುಪಾಲು
ಹಣಕಾಸು ವಿಚಾರಕ್ಕೆ ಸಿನಿಮಾ ಶೈಲಿಯಲ್ಲಿ ನಿರ್ದೇಶಕನನ್ನು ಅಪಹರಿಸಿ ಹಲ್ಲೆಮಾಡಿ ಸುಲಿಗೆ ಮಾಡಿದ್ದ ‘ಭೀಮಾ’ ಸಿನಿಮಾದ ನಟಿ ಸೇರಿದಂತೆ 11 ಮಂದಿ ಆರೋಪಿಗಳನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ನಟಿ, ರೂಪದರ್ಶಿ ಐಶ್ವರ್ಯಾ ಅಲಿಯಾಸ್ ಆಶ್ ಮೆಲೋ , ಚಿತ್ರ ನಿರ್ಮಾಪಕ ಲಕ್ಷ್ಮೀ ನಾರಾಯಣ, ಇವೆಂಟ್ ಮ್ಯಾನೇಜರ್ ಆಶಿ ಅಲಿಯಾಸ್ ಆಶೀರ್ವಾದ್, ಸುಜನ್, ಅರ್ಸಲಾನ್, ಮೊಹಮದ್ ಆರೀಫ್, ಧ್ರುವ, ಸಂಜಯ್, ಶಾಹಿದ್ ಅಹ್ಮದ್ ಹಾಗೂ ರಿಯಾನ್ ಬಂಧಿತರು.
ಪ್ರಮುಖ ಆರೋಪಿ ಆಶೀರ್ವಾದ್ ನೇತೃತ್ವದ ತಂಡವು ಫೆ.9ರಂದು ನಿರ್ದೇಶಕ ಟಿ.ಎ. ಅನೀಶ್ ಅವರನ್ನು ಅಪಹರಿಸಿ ಎರಡು ದಿನ ಒತ್ತೆಯಾಳಾಗಿಸಿಕೊಂಡು ವಿಕೆಟ್ ಹಾಗೂ ಹಾಕಿ ಸ್ಟಿಕ್ನಿಂದ ಹಲ್ಲೆನಡೆಸಿದ್ದರು. ಚಿನ್ನದ ಕಡಗ ಕಸಿದುಕೊಂಡಿದ್ದರು. 30 ಸಾವಿರ ರೂ.ನಗದು ಸುಲಿಗೆ ಮಾಡಿ ಬಿಟ್ಟು ಕಳಿಸಿದ್ದರು. ಈ ಕುರಿತು ಅನೀಶ್ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಕೃತ್ಯದಲ್ಲಿಭಾಗಿಯಾಗಿದ್ದ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Read this – Highlights news of the day-ದಿನದ ಪ್ರಮುಖ ಸುದ್ದಿಗಳು
ಜತೆಗಿದ್ದವರೇ ಅರೆಸ್ಟ್ ಆದರು
ಕಿರುಚಿತ್ರ ಹಾಗೂ ಮಾಡೆಲಿಂಗ್ ಶೋ ನಿರ್ದೇಶಕನಾಗಿರುವ ಅನೀಶ್ ‘ಜೀವನದ ಭಾಷೆ’ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರಕ್ಕೆ ಲಕ್ಷ್ಮೀ ನಾರಾಯಣ ನಿರ್ಮಾಪಕರಾಗಿದ್ದರು. ಐಶ್ವರ್ಯ ಕೂಡ ನಾಯಕಿಯಾಗಿ ನಟಿಸಿದ್ದರು. ಹಣಕಾಸು ವಿಚಾರಕ್ಕೆ ಲಕ್ಷ್ಮೀ ನಾರಾಯಣ ನಡುವೆ ವೈಮನಸ್ಸು ಮೂಡಿದ್ದರಿಂದ ಚಿತ್ರ ಬಿಡುಗಡೆ ಆಗಿರಲಿಲ್ಲ. ಈ ನಡುವೆ, ಮುಂಬಯಿಗೆ ಶಿಫ್ಟ್ ಆಗಿದ್ದ ಅನೀಶ್ ಮತ್ತೊಂದು ಪ್ರಾಜೆಕ್ಟ್ನಲ್ಲಿತೊಡಗಿಸಿಕೊಂಡಿದ್ದರು.
ಚಿತ್ರ ಬಿಡುಗಡೆ ಮಾಡದೆ ಮುಂಬಯಿಗೆ ತೆಧಿರಧಿಳಿದ ಅನೀಶ್ ವಿರುದ್ಧ ಲಕ್ಷ್ಮೀ ನಾರಾಯಣ್ ಒಳಗೊಳಗೆ ಕುದಿಯುತ್ತಿದ್ದರು. ಇದೇ ವೇಳೆ ಹಣಕಾಸು ವಿಚಾರಕ್ಕೆ ಆಶೀರ್ವಾದ್ ಕೂಡ ಅನೀಶ್ ವಿರುದ್ಧ ಹಗೆ ಸಾಧಿಸುತ್ತಿದ್ದರು. ಇವರಿಬ್ಬರೂ ಸೇರಿ ನಿರ್ದೇಶಕನಿಗೆ ಪಾಠ ಕಲಿಸಲು ಸಂಚು ರೂಪಿಸಿದ್ದರು. ಇದನ್ನು ಕಾರ್ಯಗತಗೊಳಿಸಲು ನಟಿ ಐಶ್ವರ್ಯಾ ಮೂಲಕ ಮುಂಬಯಿನಿಂದ ಅನೀಶ್ರನ್ನು ನಗರಕ್ಕೆ ಕರೆಸಿಕೊಂಡಿದ್ದರು.
Read this – China Firm’s Cash Bash-ಇಯರ್ಎಂಡ್ ಪಾರ್ಟಿ ಕೋಟಿ ನಗದು ವಿತರಣೆ
ಸಿನಿಮಾದಂತೆ ಸಂಚು ಜಾರಿ
ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತನ್ನ ಕಾರು ಮಾರಾಟ ಮಾಡಲು ಸಿದ್ಧವಿರುವುದಾಗಿ ಹೇಳಿಕೊಂಡಿದ್ದ ಅನೀಶ್ಗೆ ಕರೆ ಮಾಡಿದ್ದ ಐಶ್ವರ್ಯಾ, ತನ್ನ ಪರಿಚಯದವರು ಕಾರು ಖರೀದಿಸಲು ಸಿದ್ಧವಿದ್ದು, ಇಂದಿರಾನಗರಕ್ಕೆ ಬರುವಂತೆ ಆಹ್ವಾನಿಸಿದ್ದರು. ಐಶ್ವರ್ಯಾ ಮಾತು ನಂಬಿ ಫೆ.9ರಂದು ಕಾರಿನ ಸಮೇತ ಅನೀಶ್ ಆಗಮಿಸಿದ್ದರು. ಇಂದಿರಾನಗರದಿಂದ ಉಳಿದ ಆರೋಪಿಗಳು ಅನೀಶ್ರನ್ನು ಅಪಹರಿಸಿದ್ದರು. ಬ್ಯಾಡರಹಳ್ಳಿಯ ಮನೆ ಹಾಗೂ ತುಮಕೂರು ಸಮೀಪದ ಮಂದಾರಗಿರಿ ಬೆಟ್ಟದಲ್ಲಿಕೂಡಿ ಹಾಕಿ ಹಲ್ಲೆನಡೆಸಿ ಹಣ ಹಾಗೂ ಆಭರಣ ಕಸಿದುಕೊಂಡು ಎರಡು ದಿನಗಳ ಬಳಿಕ ಬಿಟ್ಟು ಕಳಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


