HomeNewsCylinder explosion in anekal - ಆನೇಕಲ್ನಲ್ಲಿ ಸಿಲಿಂಡರ್ ಸ್ಫೋಟ

Cylinder explosion in anekal – ಆನೇಕಲ್ನಲ್ಲಿ ಸಿಲಿಂಡರ್ ಸ್ಫೋಟ

Cylinder explosion in anekal - ಆನೇಕಲ್‌ನಲ್ಲಿ ಸಿಲಿಂಡರ್ ಸ್ಫೋಟ

Spread the love

Cylinder explosion in anekal – ಆನೇಕಲ್‌ನಲ್ಲಿ ಸಿಲಿಂಡರ್ ಸ್ಫೋಟ

ಆನೇಕಲ್: ಸಿಲಿಂಡರ್ ಸ್ಫೋಟಗೊಂಡ  ಪರಿಣಾಮ ಕಟ್ಟಡದ ಒಂದು ಮಹಡಿ ಸಂಪೂರ್ಣ ಛಿದ್ರವಾಗಿರುವ ಘಟನೆ ಬೊಮ್ಮಸಂದ್ರ  ಸಮೀಪದ ಕಿತ್ತಗಾನ ಹಳ್ಳಿಯಲ್ಲಿ ನಡೆದಿದೆ.

ಗಾಯಾಳುಗಳನ್ನು ಕೇರಳ ಮೂಲದ ವಿಶ್ವ ಹಾಗೂ ತಮಿಳುನಾಡು ಮೂಲದ ಸುನಿಲ್ ಜಾದವ್ ಎಂದು ಗುರುತಿಸಲಾಗಿದ್ದು, ನಾರಾಯಣ ಹೃದಯಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿದ್ದ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.ಆನೇಕಲ್: ಗ್ಯಾಸ್ ಸಿಲಿಂಡರ್ ಸ್ಫೋಟ: ಇಬ್ಬರಿಗೆ ಗಂಭೀರ ಗಾಯ; ಮನೆಯ ಗೋಡೆ ಛಿದ್ರ | Anekal: Gas cylinder explosion: Two seriously injured; wall of house collapses

Read this – Bigg Boss Kannada 11 : ಬಿಗ್​ಬಾಸ್ ಮನೆಗೆ ಧನರಾಜ್​ ಫ್ಯಾಮಿಲಿ ಎಂಟ್ರಿ

ಇಂದು (ಜ.06 ) 8:30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಜಯನಗರ ಮೂಲದ ಸುನಿಲ್ ಎಂಬುವವರಿಗೆ ಸೇರಿದ್ದ ಕಟ್ಟಡದಲ್ಲಿ ಇಬ್ಬರು ವಾಸವಾಗಿದ್ದರು. ಕೆಲಸಕ್ಕೆ ಹೋಗಲು ಒಬ್ಬರು ಸ್ನಾನ ಮಾಡುತ್ತಿದ್ದರಂತೆ. ಇದೇ ವೇಳೆ ಸಿಲಿಂಡರ್ ಸ್ಫೋಟಗೊಂಡಿದ್ದು, ಇನ್ನೋರ್ವ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಎರಡನೇ ಅಂತಸ್ತಿನಿಂದ ಕೆಳಗೆ ಬಿದ್ದಿದ್ದಾನೆ. ಸ್ಫೋಟದ ತೀವ್ರತೆಗೆ ಕಟ್ಟಡದ ಹಾಲೋ ಬ್ಲಾಕ್‌ಗಳು ಹಾರಿಹೋಗಿವೆ. ಬಿಲ್ಡಿಂಗ್ ನಾಲ್ಕು ಪಿಲ್ಲರ್‌ಗಳು ಕೂಡ ಛಿದ್ರಗೊಂಡಿವೆ. ಇದರ ಪರಿಣಾಮ ನಾಲ್ಕು ಬಿಲ್ಡಿಂಗ್, 3 ಕಾರು, 6 ದ್ವಿಚಕ್ರವಾಹನಗಳು ಹಾನಿಗೊಳಗಾಗಿವೆ.

ಸದ್ಯ ಗಾಯಾಳುಗಳನ್ನ ಸ್ಥಳೀಯ ನಾರಾಯಣ ಹೃದಯಾಲಯಕ್ಕೆ ಶಿಫ್ಟ್ ಮಾಡಲಾಗಿದೆ. ಬೆಳಗ್ಗೆ ಲೈಟ್ ಹಾಕಿದಾಗ ಸ್ಫೋಟ ಆಗಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, 15ಕ್ಕೂ ಹೆಚ್ಚು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸೂರ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×