BMTC Ticket Price Hike – ಬಿಎಂಟಿಸಿ ಟಿಕೆಟ್ ದರ ಏರಿಕೆ
ಬೆಂಗಳೂರು: ರಾಜಧಾನಿ ಬೆಂಗಳೂರಿನ (Bengaluru) ಪ್ರಯಾಣಿಕರೇ ಗಮನಿಸಿ, ಇಂದು ಮಧ್ಯರಾತ್ರಿಯಿಂದಲೇ ಬಿಎಂಟಿಸಿ (BMTC) ಪ್ರಯಾಣ ದುಬಾರಿಯಾಗಲಿದೆ. ಇಲ್ಲಿಯವರೆಗೆ ಬಿಎಂಟಿಸಿ ದರ ಒಂದು ಸ್ಟೇಜ್‌ಗೆ 5 ರೂ. ಇತ್ತು. ಈಗ 1 ರೂಪಾಯಿ ಹೆಚ್ಚಳವಾಗಿ 6 ರೂ. ಆಗಿದೆ. ಹೀಗಾಗಿ ಬಸ್ಸು ಹತ್ತಿದ ನಂತರ ಬರುವ ಮೊದಲ ಸ್ಟೇಜ್‌ಗೆ 6 ರೂ. ದರವನ್ನು ನಿಗದಿ ಪಡಿಸಲಾಗಿದೆ.
ಬಿಎಂಟಿಸಿ ಬಸ್ಸಿನಲ್ಲಿ ಅತೀ ಹೆಚ್ಚು ಅಂದರೆ 25 ಸ್ಟೇಜ್ ಮಾತ್ರ ಇದೆ. ಬೆಂಗಳೂರಲ್ಲಿ ಪ್ರತಿನಿತ್ಯ ಸುಮಾರು 5,800 ಬಿಎಂಟಿಸಿ ಬಸ್ಸುಗಳು 1,800 ಮಾರ್ಗಗಳಲ್ಲಿ ಸಂಚಾರ ಮಾಡುತ್ತಿವೆ
ಎಷ್ಟು ಏರಿಕೆ?
ಮೆಜೆಸ್ಟಿಕ್‌ನಿಂದ (Majestic) ಜೆಪಿನಗರ 6ನೇ ಹಂತಕ್ಕೆ 20 ರೂ. ಇದ್ದರೆ ಈಗ ಇನ್ನು ಮುಂದೆ 24 ರೂ. ಆಗಲಿದೆ. ಮೆಜೆಸ್ಟಿಕ್‌ನಿಂದ ದೊಡ್ಡಬಳ್ಳಾಪುರಕ್ಕೆ 25 ರೂ. ಇದ್ದರೆ ಭಾನುವಾರದಿಂದ 30 ರೂ. ಆಗಲಿದೆ.
Read this – Bigg Boss Kannada 11 : ಬಿಗ್ಬಾಸ್ ಮನೆಗೆ ಧನರಾಜ್ ಫ್ಯಾಮಿಲಿ ಎಂಟ್ರಿ
ಸಾರಿಗೆ ಸಂಸ್ಥೆಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ
ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು ಆರ್ಥಿಕವಾಗಿ ಮುಂದುವರಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿಯ ಸುಧಾರಣೆಗೆ ಹಾಗೂ ಹಮ್ಮಿಕೊಳ್ಳಲಾಗಿರುವ ಯೋಜನೆಗಳನ್ನು ಜಾರಿಗೊಳಿಸಲು ಪ್ರಯಾಣಿಕ ಬಸ್ ದರಗಳನ್ನು ಶೇ.33ರಷ್ಟು ಹೆಚ್ಚಿಸಲು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಶೇ.42ರಷ್ಟು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು ಇದಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ಸಭೆಯಲ್ಲಿ ಚರ್ಚಿ ಮಾಡಿದ ನಂತರ ಶೇ.15ರಷ್ಟು ಟಿಕೆಟ್ ದರ ಪರಿಷ್ಕರಣೆ ಮಾಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ.
ಇನ್ನೂ ಸಾರಿಗೆ ಇಲಾಖೆಯಲ್ಲಿ ಸಿಬ್ಬಂದಿಗಳ ಭವಿಷ್ಯ ನಿಧಿ, ನಿವೃತ್ತ ನೌಕರರ ವೇತನ,ಗ್ರಾಚ್ಯುಟಿ, ಪೂರೈಕೆದಾರರ ಬಾಕಿ ಬಿಲ್‌ಗಳು, ಡೀಸೆಲ್ ಸರಬರಾಜು ಬಿಲ್, ಮೋಟಾರ್ ವಾಹನ ತೆರಿಗೆ ಪಾವತಿ ಮಾಡದಿರುವುದು ಮತ್ತು ಇತರ ಬಿಲ್‌ಗಳ ಬಾಕಿಯಿಂದಾಗಿ ನಾಲ್ಕು ಸಾರಿಗೆ ಸಂಸ್ಥೆಗಳ ಮೇಲೆ ಆರ್ಥಿಕ ಹೊಣೆಗಾರಿಕೆ ಜಾಸ್ತಿ ಇದೆ.