HomeNewsBMTC Ticket Price Hike - Revised bus fares comes into effect...

BMTC Ticket Price Hike – Revised bus fares comes into effect in Karnataka

BMTC Ticket Price Hike - ಬಿ.ಎಂ.ಟಿ.ಸಿ ಟಿಕೆಟ್ ದರ ಏರಿಕೆ

Spread the love

BMTC Ticket Price Hike – ಬಿಎಂಟಿಸಿ ಟಿಕೆಟ್ ದರ ಏರಿಕೆ

ಬೆಂಗಳೂರು: ರಾಜಧಾನಿ ಬೆಂಗಳೂರಿನ (Bengaluru) ಪ್ರಯಾಣಿಕರೇ ಗಮನಿಸಿ, ಇಂದು ಮಧ್ಯರಾತ್ರಿಯಿಂದಲೇ ಬಿಎಂಟಿಸಿ (BMTC) ಪ್ರಯಾಣ ದುಬಾರಿಯಾಗಲಿದೆ. ಇಲ್ಲಿಯವರೆಗೆ ಬಿಎಂಟಿಸಿ ದರ ಒಂದು ಸ್ಟೇಜ್‌ಗೆ 5 ರೂ. ಇತ್ತು. ಈಗ 1 ರೂಪಾಯಿ ಹೆಚ್ಚಳವಾಗಿ 6 ರೂ. ಆಗಿದೆ. ಹೀಗಾಗಿ ಬಸ್ಸು ಹತ್ತಿದ ನಂತರ ಬರುವ ಮೊದಲ ಸ್ಟೇಜ್‌ಗೆ 6 ರೂ. ದರವನ್ನು ನಿಗದಿ ಪಡಿಸಲಾಗಿದೆ.BMTC Ticket Price Hike: ಮಧ್ಯರಾತ್ರಿಯಿಂದಲೇ.. BMTC ಟಿಕೆಟ್ ದರ ಹೆಚ್ಚಳ; ಯಾವ ಏರಿಯಾಗೆ ಎಷ್ಟು ರೂ.? ಇಲ್ಲಿದೆ ಪಟ್ಟಿ | bmtc bus price hike: bengaluru complete list majestic bus stand - Goodreturns kannada

ಬಿಎಂಟಿಸಿ ಬಸ್ಸಿನಲ್ಲಿ ಅತೀ ಹೆಚ್ಚು ಅಂದರೆ  25 ಸ್ಟೇಜ್ ಮಾತ್ರ ಇದೆ. ಬೆಂಗಳೂರಲ್ಲಿ ಪ್ರತಿನಿತ್ಯ ಸುಮಾರು 5,800 ಬಿಎಂಟಿಸಿ ಬಸ್ಸುಗಳು 1,800 ಮಾರ್ಗಗಳಲ್ಲಿ ಸಂಚಾರ ಮಾಡುತ್ತಿವೆ

ಎಷ್ಟು ಏರಿಕೆ?
ಮೆಜೆಸ್ಟಿಕ್‌ನಿಂದ (Majestic) ಜೆಪಿನಗರ 6ನೇ ಹಂತಕ್ಕೆ 20 ರೂ. ಇದ್ದರೆ ಈಗ ಇನ್ನು ಮುಂದೆ 24 ರೂ. ಆಗಲಿದೆ. ಮೆಜೆಸ್ಟಿಕ್‌ನಿಂದ ದೊಡ್ಡಬಳ್ಳಾಪುರಕ್ಕೆ 25 ರೂ. ಇದ್ದರೆ ಭಾನುವಾರದಿಂದ 30 ರೂ. ಆಗಲಿದೆ.

Read this – Bigg Boss Kannada 11 : ಬಿಗ್​ಬಾಸ್ ಮನೆಗೆ ಧನರಾಜ್​ ಫ್ಯಾಮಿಲಿ ಎಂಟ್ರಿBMTC Ticket Price Hike| ಮೆಜೆಸ್ಟಿಕ್‌ನಿಂದ ನಿಮ್ಮ ಏರಿಯಾಗೆ ಎಷ್ಟು ರೂ.? ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌

ಸಾರಿಗೆ ಸಂಸ್ಥೆಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ

ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು ಆರ್ಥಿಕವಾಗಿ ಮುಂದುವರಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿಯ ಸುಧಾರಣೆಗೆ ಹಾಗೂ ಹಮ್ಮಿಕೊಳ್ಳಲಾಗಿರುವ ಯೋಜನೆಗಳನ್ನು ಜಾರಿಗೊಳಿಸಲು ಪ್ರಯಾಣಿಕ ಬಸ್ ದರಗಳನ್ನು ಶೇ.33ರಷ್ಟು ಹೆಚ್ಚಿಸಲು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಶೇ.42ರಷ್ಟು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು ಇದಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ಸಭೆಯಲ್ಲಿ ಚರ್ಚಿ ಮಾಡಿದ ನಂತರ ಶೇ.15ರಷ್ಟು ಟಿಕೆಟ್ ದರ ಪರಿಷ್ಕರಣೆ ಮಾಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ.

ಇನ್ನೂ ಸಾರಿಗೆ ಇಲಾಖೆಯಲ್ಲಿ ಸಿಬ್ಬಂದಿಗಳ ಭವಿಷ್ಯ ನಿಧಿ, ನಿವೃತ್ತ ನೌಕರರ ವೇತನ,ಗ್ರಾಚ್ಯುಟಿ, ಪೂರೈಕೆದಾರರ ಬಾಕಿ ಬಿಲ್‌ಗಳು, ಡೀಸೆಲ್ ಸರಬರಾಜು ಬಿಲ್, ಮೋಟಾರ್ ವಾಹನ ತೆರಿಗೆ ಪಾವತಿ ಮಾಡದಿರುವುದು ಮತ್ತು ಇತರ ಬಿಲ್‌ಗಳ ಬಾಕಿಯಿಂದಾಗಿ ನಾಲ್ಕು ಸಾರಿಗೆ ಸಂಸ್ಥೆಗಳ ಮೇಲೆ ಆರ್ಥಿಕ ಹೊಣೆಗಾರಿಕೆ ಜಾಸ್ತಿ ಇದೆ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments