Demand for bengaluru tunnel road in front of cm siddaramaiah
ಬೆಂಗಳೂರು: ಒಂದು ಕಡೆ ಡಿಸಿಎಂ ಡಿ.ಕೆ ಶಿವಕುಮಾರ್ ಟನಲ್ ರೋಡ್‌ಗೆ ಟೆಕ್ನಿಕಲ್ ಸಮಸ್ಯೆ ಅಂತಿದ್ರೆ, ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯಎದುರು ಟನಲ್ ರೋಡ್ ಮಾಡಿ ಎಂಬ ಬೇಡಿಕೆ ಬಂದಿದೆ.
Read this – PM modi takes holy dip in prayagraj sangam ಪ್ರಯಾಗ್ರಾಜರ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಪ್ರಧಾನಿ ಮೋದಿ
ವಿಧಾನಸೌಧದ ಬಜೆಟ್ ಪೂರ್ವಾಭಾವಿ ಸಾರಿಗೆ ವಲಯದ ಸಂಘ ಸಂಸ್ಥೆಗಳ ಸಭೆಯಲ್ಲಿ ಈ ಬೇಡಿಕೆ ಇಡಲಾಗಿದೆ. ಕರ್ನಾಟಕ ಟ್ರಾವೆಲ್ಸ್ ಮಾಲೀಕರ ಸಂಘ ಬಜೆಟ್ ಬೇಡಿಕೆ ಸಲ್ಲಿಸಿದ್ದಾರೆ. ಅದರಲ್ಲಿ ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆ ಜಾಸ್ತಿ ಇದೆ, ಟ್ರಾಫಿಕ್ ಸಮಸ್ಯೆ ತಗ್ಗಿಸಲು ಟನಲ್ ರಸ್ತೆ ಬೇಕು ಎಂದು ಮನವಿ ಮಾಡಲಾಗಿದೆ.
ಇನ್ನು ಇದೇ ವೇಳೆ ಹೊಸ ಪ್ರವಾಸೋದ್ಯಮ ನೀತಿಗೆ ಮೆಚ್ಚುಗೆ ಸೂಚಿಸಿ ಮುಖ್ಯಮಂತ್ರಿಗಳಿಗೆ ವಾಣಿಜ್ಯೋದ್ಯಮಿಗಳು, ಸಂಘ ಸಂಸ್ಥೆಗಳು ಅಭಿನಂದಿಸಿದ್ದಾರೆ.
ಸರ್ಕಾರ ಇತ್ತೀಚಿಗೆ ತಂದಿರುವ ಹೊಸ ಪ್ರವಾಸೋದ್ಯಮ ನೀತಿ ವಾಣಿಜ್ಯೋದ್ಯಮಿಗಳು ಮತ್ತು ವಾಣಿಜ್ಯ ಸಂಘ ಸಂಸ್ಥೆಗಳಿಂದ ಒಕ್ಕೋರಲ ಮೆಚ್ಚುಗೆ ವ್ಯಕ್ತವಾಯಿತು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ವಾಣಿಜ್ಯ ಸಂಘ ಸಂಸ್ಥೆಗಳ ಬಜೆಟ್ ಪೂರ್ವ ಸಭೆಯಲ್ಲಿ ಬಹುತೇಕ ಎಲ್ಲರೂ ಹೊಸ ಪ್ರವಾಸೋದ್ಯಮ ನೀತಿಯನ್ನು ಶ್ಲಾಘಿಸಿದರು.
Read this – how did kumbh mela monalisa accepted the movie offer the dairy of Manipur
ಈ ನೀತಿ ಏಕ ಕಾಲಕ್ಕೆ ರಾಜ್ಯದ ಆರ್ಥಿಕತೆ ವೃದ್ಧಿಸುವ ಜೊತೆಗೆ ಉದ್ಯಮಗಳ ಬೆಳವಣಿಗೆಗೂ ಪೂರಕವಾಗಿದೆ ಎಂದು ಸರ್ಕಾರದ ನಿಲುವು ಮತ್ತು ತೀರ್ಮಾನವನ್ನು ಶ್ಲಾಘಿಸಲಾಯಿತು.