ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
ಆದರೆ ಜನಪದ ವೈಭವದ ಕಾಲವೂ ಒಂದಿತ್ತು, ಆ ದಿನಗಳಲ್ಲಿ ಅದೇ ಒಂದು ಪಂಗಡ,ಧರ್ಮವಾಗಿ ಬೇಳೆದಿತ್ತು. ಕಲೆಯ ಕಾಲಿಗೆ ಬಿದ್ದು ಗೌರವಿಸುವ ಕಾಲ ಅದಾಗಿತ್ತು. ರಾಜಾದಿರಾಜರಿಂದ ಕಡು ಬಡವನವರೆಗೂ ಅದನ್ನು ಕಲಿಯುವ ತವಕ ಇತ್ತು ಹಾಗಾದರೆ ಅವೆಲ್ಲ ಯಾವುದಾಗಿತ್ತು ಮತ್ತು ಇಂದು ಬೀದಿ ದೋಂಬರಾಟ ವಾಗಲು ಕಾರಣವೇನು ? ಮುಂದೆ ಓದಿ
ದೊಡ್ಡಾಟ
ಹೌದು! ಇಂದು ಸುಣ್ಣದ ಗೋಡೆಯಂತೆ ಮಾಯ ವಾಗುತ್ತಿದೆ. ಒಂದು ಕಾಲದಲ್ಲಿ ಊರಿಗೆ ಊರೇ ಈ ದೊಡ್ಡಾಟಕ್ಕೆ ಕಾದು ಕುಳಿತು ಹಳೆ ಕಥೆಗಳ ಚಿತ್ರಣ ಕಂಡುಕೊಂಡ ವೈಭವ ಈ ಕಲೆಗಿತ್ತು.

ಈ ಆಟಕ್ಕೆ ಇನ್ನು ಹತ್ತಿಪ್ಪತ್ತು ದಿನ ಇರವಾಗಲೇ ಆಡುವ ಜಾಗವನ್ನು ಆಯ್ಕೆ ಮಾಡಿ ಅಲ್ಲಿ ‘ಹಂದರಗಂಬ’ವೊಂದನ್ನು ನಿಲ್ಲಿಸುತ್ತಾರೆ. ಪೌರಾಣಿಕ ಪ್ರಸಂಗಗಳನ್ನು ಹೊಂದುವ ಈ ಆಟ ರಾತ್ರಿಯೆಲ್ಲಾ ನಡೆದು ಸೂರ್ಯೋ ಉಯದ ವೇಳೆಗೆ ಮುಕ್ತಾಯವಾಗುತ್ತದೆ. ಹಾಗಾಗಿ ಸುರಕ್ಷಿತ ಜಾಗ ಮುಖ್ಯವಾಗುತ್ತದೆ .
ಜನಗಳನ್ನು ಸೆಳೆಯುವಂತ ಮಾತು ಚಾತುರ್ಯ, ಪಾತ್ರ ಹೋಲುವಂತ ಬಣ್ಣ ಮತ್ತು ಮಂಟಪ ಈ ದೊಡ್ಡಾಟಕ್ಕೆ ಬಲು ಮುಖ್ಯ ವಾಗುತ್ತದೆ.
ಈ ಆಟದಲ್ಲಿ ಕೃಷ್ಣ – ಅರ್ಜುನ ಒಳಗೊಂಡು ರಾಮ, ಲಕ್ಷ್ಮಣ, ಈಶ್ವರ , ಪಾರ್ವತಿ ಪಾತ್ರದಂತೆ ಕುರುಕ್ಷೇತ್ರ , ಕೃಷ್ಣಸಂಧಾನ, ಪುಷ್ಪಹರಣ,ವಿರಾಟ ಪರ್ವ, ಕರ್ಣಪರ್ವ, ಸುಧನ್ವಾರ್ಜನ ,ತಾರಕಾಸುರ ವಧೆ, ವೀರ ಅಭಿಮನ್ಯು, ಆಶ್ವಮೇಧಯಾಗದ್ದು, ವಾಲಿ-ಸುಗ್ರೀವರ ಕಾಳಗದ್ದು, ದ್ರೌಪದೀ ವಸ್ತ್ರಾಪ-ಹರಣ, ರತಿ-ಕಲ್ಯಾಣ, ಲವಕುಶರ ಕಾಳಗ, ತಾಮ್ರಧ್ವಜನ ಕಾಳಗ, ಅಹಿರಾವಣ, ರಾವಣ, ಶ್ವೇತ ಚರಿತ್ರೆ, ಭೀಮಾರ್ಜುನರ ಯುದ್ದ, ಕರ್ಣಾರ್ಜುನ ಕಾಳಗ, ಕಲಾವತಿ ಸ್ವಯಂವರ, ವೃತ್ತಪಾಲಕರಾಜ, ದುರ್ಗಾಸುರ ಕಾಳಗ, ಭೀಷ್ಮ – ಪರ್ವ, ಸುಭದ್ರಾಕಲ್ಯಾಣ, ಭಕ್ತ ಮಾರ್ಕಂಡೇಯರು, ಸತ್ಯ – ಹರಿಶ್ಚಂದ್ರ, ಇಂದ್ರಜಿತು ಕಾಳಗ, ಹಿಡಂಬಿ ಕಲ್ಯಾಣ, ಊರ್ವಶಿ, ರಾಮಾಂಜನೇಯ ಯುದ್ದ , ಲಂಕಾದಹನ, ಜಲಂಧರನ ಕಾಳಗ, ಸಾನಂದ ಗಣೇಶ ಹೀಗೆ ಅನೇಕ ಪಾತ್ರ ಪರಿಚಯ ತಿಳಿಸಿಕೊಟ್ಟ ಸಿಂಹ ಪಾಲು ಈ ದೊಡ್ಡಾಟದ್ದು.
ಕಾಲ ಬದಲಾಗುತ್ತಿದೆ, ಬಣ ಮಾಸುತ್ತಿದೆ, ಪೀಳಿಗೆ ಬದಲಾಗಿ ಆಸಕ್ತಿ ಬೇರೆಡೆಗೆ ವಾಲುತ್ತಾ ಇಂತಹ ಕಲೆಗಳನ್ನು ಕಾಣುವುದು ಕಷ್ಟ.
ಆದರು ಇದನ್ನು ಆರಾಧ್ಯ ದೈವದಂತೆ ಪೂಜಿಸುತ್ತಾ, ಪೂರ್ವಜರ ಕಲೆಯನ್ನು ಪರಗತ ಮಾಡಿಕೊಂಡ ಪಂಗಡ ನಮ್ಮಲ್ಲೀ ಈಗಲೂ ಸಿಗುತ್ತಾರೆ ಆದರೆ ಅವರ ಸತ್ಕಾರ ತುಂಬಾ ಕಡಿಮೆ .. ಕಲೆಗಳನ್ನು ಬೆಳೆಸಿ
ಮುಂದೆ ಯಕ್ಷಗಾನ ತಿಳಿಯೋಣ…..
- Ashada – ಆಷಾಡ ಯಾವಾಗ ಪ್ರಾರಂಭವಾಗುತ್ತದೆ? ದಿನಾಂಕಗಳು, ಮಹತ್ವ ಮತ್ತು ಆಚರಣೆಗಳು – Cultural Significance of Ashada MonthSpread the love೨೦೨೫ರಲ್ಲಿ ಆಶಾಢ ಮಾಸ ಯಾವಾಗ ಆರಂಭವಾಗುತ್ತದೆ? ದಿನಾಂಕಗಳು, ಪೌರಾಣಿಕ ಮಹತ್ವ ಮತ್ತು ಆಚರಣೆಗಳ ವಿವರಣೆ Ashada: ಭಾರತೀಯ ಸಂಪ್ರದಾಯದಲ್ಲಿ ಆಶಾಢ ಮಾಸ ಶ್ರಾವಣದ ಮೊದಲು ಬರುವ ಧಾರ್ಮಿಕ ಹಾಗೂ ತತ್ವಪೂರ್ಣ ಸಮಯ. ಈ ಕಾಲಮಾನವನ್ನು ದೈವಚಿಂತನೆಗೆ ಮೀಸಲಾಗಿರುವ, ಶ್ರದ್ಧಾ, ಭಕ್ತಿ ಮತ್ತು ತಪಸ್ಸಿನ ಕಾಲವೆಂದು… Read more: Ashada – ಆಷಾಡ ಯಾವಾಗ ಪ್ರಾರಂಭವಾಗುತ್ತದೆ? ದಿನಾಂಕಗಳು, ಮಹತ್ವ ಮತ್ತು ಆಚರಣೆಗಳು – Cultural Significance of Ashada Month
- Why is sleep important for health – ಆರೋಗ್ಯಕ್ಕೆ ನಿದ್ರೆ ಏಕೆ ಮುಖ್ಯSpread the loveWhy is sleep important for health – ಆರೋಗ್ಯಕ್ಕೆ ನಿದ್ರೆ ಏಕೆ ಮುಖ್ಯ ಆರೋಗ್ಯದ ಮೂರು ಸ್ತಂಭಗಳು ಪೋಷಣೆ, ದೈಹಿಕ ವ್ಯಾಯಾಮ ಮತ್ತು ನಿದ್ರೆ. ಈ ಮೂರೂ ಪರಸ್ಪರ ಸಂಬಂಧ ಹೊಂದಿವೆ. ನೀವು ಚೆನ್ನಾಗಿ ನಿದ್ರೆ ಮಾಡದಿದ್ದರೆ, ನೀವು ಚೆನ್ನಾಗಿ ತಿನ್ನದಿರಬಹುದು. ಜನರು… Read more: Why is sleep important for health – ಆರೋಗ್ಯಕ್ಕೆ ನಿದ್ರೆ ಏಕೆ ಮುಖ್ಯ
- Benefits of drinking almond milk – ಬಾದಾಮಿ ಹಾಲು ಕುಡಿಯುವುದರಿಂದ ಪ್ರಯೋಜನSpread the loveBenefits of drinking almond milk – ಬಾದಾಮಿ ಹಾಲು ಕುಡಿಯುವುದರಿಂದ ಪ್ರಯೋಜನ ನಾವು ದಿನನಿತ್ಯದಲ್ಲಿ ಹೆಚ್ಚು ಸೇವಿಸುವ ಆಹಾರ ಪದಾರ್ಥಗಳಲ್ಲಿ ಬಾದಾಮಿ ಪ್ರಮುಖವಾಗಿದೆ. ಬಾದಾಮಿಗಳು ಹೆಚ್ಚು ಪೌಷ್ಟಿಕಾಂಶಗಳಿಂದ ತುಂಬಿರುತ್ತವೆ ಮತ್ತು ಇದರ ಜೊತೆಗೆ ಫೈಬರ್, ಪ್ರೋಟೀನ್, ವಿಟಮಿನ್ ಇ, ಮ್ಯಾಂಗನೀಸ್, ಮೆಗ್ನೀಷಿಯಂ, ತಾಮ್ರ ಮತ್ತು… Read more: Benefits of drinking almond milk – ಬಾದಾಮಿ ಹಾಲು ಕುಡಿಯುವುದರಿಂದ ಪ್ರಯೋಜನ
- Tigers found dead – a mother and its cubs, found dead in M.M. Hills Wildlife SanctuarySpread the loveFive tigers, a mother and its cubs, found dead in M.M. Hills Wildlife Sanctuary; poisoning suspected ನಿನ್ನೆ (ಜೂನ್ 26, 2025) Karnataka ರಾಜ್ಯದ Male Mahadeshwara (MM) Hills ವನ್ಯಜೀವಿ ಅರಣ್ಯದಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದೆ: ಒಂದೇ ದಿನದಲ್ಲಿ… Read more: Tigers found dead – a mother and its cubs, found dead in M.M. Hills Wildlife Sanctuary
- ನುಗ್ಗೆಕಾಯಿ ಕರಿ ಬೇಯಿಸುವುದು ಹೇಗೆSpread the loveನುಗ್ಗೆಕಾಯಿ ಕರಿ ಬೇಯಿಸುವುದು ಹೇಗೆ ಬೇಕಾಗುವ ಪದಾರ್ಥಗಳು… ನುಗ್ಗೆಕಾಯಿ- 4 ಕೊಬ್ಬರಿ- ಸ್ವಲ್ಪ ಕಡಲೆಕಾಯಿ ಬೀಜ- 1 ಸಣ್ಣ ಬಟ್ಟಲು ಬಿಳಿ ಎಳ್ಳು- 1 ಚಮಚ ಸಾಸಿವೆ- ಸ್ವಲ್ಪ ಜೀರಿಗೆ-ಸ್ವಲ್ಪ ಕರಿಬೇವು-ಸ್ವಲ್ಪ ಹಸಿಮೆಣಸಿನ ಕಾಯಿ – 2 (ಸಣ್ಣಗೆ ಹೆಚ್ಚಿದ್ದು) ಈರುಳ್ಳಿ- 2 (ಉದ್ದುದ್ದಕ್ಕೆ… Read more: ನುಗ್ಗೆಕಾಯಿ ಕರಿ ಬೇಯಿಸುವುದು ಹೇಗೆ