Welcome to Kannada Folks   Click to listen highlighted text! Welcome to Kannada Folks
HomeNewsCultureಶ್ರೀ ರಾಮರಿಗೂ ವಾಲ್ಮೀಕಿ ಅವರಿಗೂ ಏನು ಸಂಬಂಧ - ಹುತ್ತದ ವಾಲ್ಮೀಕಿ / ವಾಲ್ಮೀಕಿ ಅವರ...

ಶ್ರೀ ರಾಮರಿಗೂ ವಾಲ್ಮೀಕಿ ಅವರಿಗೂ ಏನು ಸಂಬಂಧ – ಹುತ್ತದ ವಾಲ್ಮೀಕಿ / ವಾಲ್ಮೀಕಿ ಅವರ ಜಯಂತಿ / ಜನಪದ ರಾಮಾಯಣ – 1

Spread the love

ಕೆಲವೋಮ್ಮೆ ಮಹತ್ಕಾರ್ಯಗಳು ಸಣ್ಣ ಅಲೋಚನೆಯಿಂದ ಲಭಿಸುತ್ತವೆ. ಅಂದೊಮ್ಮೆ ಅನಿಸುತ್ತದೆ ಈ ಮಾಹಾ ಗ್ರಂಥಗಳು ಎಲ್ಲಿಂದ ಎಲ್ಲಿಯೋ ಸಂಧಿಸುತ್ತವೆ ಎಂದು.

ಕಾಡಿನಲ್ಲಿಯ ಋಷಿ ಎಲ್ಲಿ? ಸಿಂಹಾಸನ ರಾಜನೆಲ್ಲಿ ? ಎಲ್ಲಿಯ ರಘುವಂಶ… ಎಲ್ಲಿಯ ರತ್ನಾಕರ..?! ಮತ್ತೆಲಿಯೋ ಆ ದಶಕಂಠ ?!

ಹೌದು ನಿಮ್ಮ ಊಹೆ ನಿಜ! ಇದು ರಾಮಾಯಣ ಜಾಡು. ಈ ಮಹಾಗ್ರಂಥದ ಬುನಾದಿ ಹುಡುಕಲು ಅಸಾದ್ಯ. ಆದರೆ ಸಾದ್ಯವೆನಿಸಿದ್ದು ಈ ಮಹಾ ಋಷಿ ವಾ ಲ್ಮೀ ಕೀ – ಪದದಲ್ಲೇ ಗ್ರಂಥವನಿಟ್ಟ ಮಹರ್ಷಿ !

ಈ ಮಹಾ ರತ್ನಾಕರರ ಬಗ್ಗೆ ಅನೇಕ ದಂತ ಕಥೆಗಳಿವೆ. ಅನೇಕ ವರ್ಷಗಳು ಪರಮಾತ್ಮರ ಕುರಿತು ತಪಸ್ಸು ಮಾಡಿದಾಗ ಸುತ್ತಲೂ ಹುತ್ತ ಬೆಳೆದು ನಂತರ ಎದ್ದುಬಂದ ಇವರನ್ನು ವಾಲ್ಮೀಕಿ ಎನ್ನುವುದುಂಟು.

ಕಾಡಿನ ಋಷಿ ಪುತ್ರರಾದ ಇವರಿಗೂ ರಘುವಂಶಿ ರಾಮ ರಾಜರ ಕಥೆಗೂ ಏನು ಸಂಬಂಧ ?

ಕಾಡಿನಲ್ಲಿ ಜೋಡಿ ಪಕ್ಷಿಗಳೆರೆಡು ಅನ್ಯೋನ್ಯತೆ ಇಂದಿರುವಾಗ ಬೇಡನೊಬ್ಬನ ಬಾಣ ಒಂದು ಪಕ್ಷಿಯನ್ನು ಕೊಂದಿತ್ತು, ಇದರಿಂದ ಇನ್ನೊಂದು ಪಕ್ಷಿ ಚೀರಲಾರಂಭಿಸಿತು.

ಈ ಸನ್ನಿವೇಶ ಮುನಿವರ್ಯರ ಹೃದಯವನ್ನು ಗಾಸಿಗೊಳಿಸಿ ತಕ್ಷಣ ಕೋಪ-ನೋವಿನಿಂದ ಶಾಪ ನೀಡಲು ಅವರಿಗೇ ತಿಳಿಯದಂತೆ ಅವರ ಬಾಯಲ್ಲಿ ಸಂಸ್ಕೃತ ಉಚ್ಛಾರಣೆಯಾಯಿತು.

ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ | ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್

ಎಂಬ ಪದಗಳಿಂದ ಶಪಿತನಾದ ಬೇಡ ಸ್ಥಳದಲ್ಲಿ ಶಾಪೃಕ್ಕೊಳಗಾಗುತ್ತಾನೆ ಆದರೆ ಅರಿವಿಲ್ಲದೇ ಬಂದ ಆ ಪದಗಳ ಬಗ್ಗೆ ಚಿಂತಿತರಾದರು. ಅಂದು ನಾರದರು ಅತಿಥ್ಯ ಸ್ವೀಕರಿಸಲು ಬಂದಾಗ ವಾಲ್ಮೀಕಿಯವರು ತಮ್ಮ ಮನದ ಗೊಂದಲಗಳನ್ನು ಹೇಳುತ್ತಾರೆ.

ಇದರ ಒಳಾರ್ಥ ತಿಳಿದ ನಾರದರು ವಾಲ್ಮಿಕಿಯವರಿಗೆ ಅದ್ಭುತ ಶಕ್ತಿಯನ್ನು ಮತ್ತು ಅವರಿಗೆ ಪರಮಾರ್ಥದ ಪ್ರೇರಣೆಯನ್ನು ತಿಳಿಸುತ್ತಾರೆ ಮತ್ತು ರಾಮಾಯಣ ರಚಿಸಲು ಪ್ರೇರೇಪಿಸುತ್ತಾರೆ.

ಮುಂದೆ ಎನಾಯಿತು, ಧರ್ಮಪುರುಷರ ಜೀವನ ವಾಲ್ಮೀಕಿ ಅವರಿಗೆ ತಿಳಿದಿದ್ದು ಹೇಗೆ … ಮುಂದುವರಿಯುವುದು !…


Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Click to listen highlighted text!