HomeNewsಮುಂದಿನವಾರ ರಾಜಧಾನಿಯಲ್ಲಿ ಇರಲಿದೆ ದಾಖಲೆಯ ಚಳಿ- Kannada News | Bangalore Braces for Record...

ಮುಂದಿನವಾರ ರಾಜಧಾನಿಯಲ್ಲಿ ಇರಲಿದೆ ದಾಖಲೆಯ ಚಳಿ- Kannada News | Bangalore Braces for Record Cold| kannadafolks

ಮುಂದಿನವಾರ ರಾಜಧಾನಿಯಲ್ಲಿ ಇರಲಿದೆ ದಾಖಲೆಯ ಚಳಿ- Kannada News | Bangalore Braces for Record Cold| kannadafolks

ಮುಂದಿನವಾರ ರಾಜಧಾನಿಯಲ್ಲಿ ಇರಲಿದೆ ದಾಖಲೆಯ ಚಳಿ- Kannada News | Bangalore Braces for Record Cold| kannadafolks
ಬೆಂಗಳೂರಿಗರನ್ನು ಗಡ ಗಡ ನಡುಗಿಸುತ್ತಿರುವ ಚಳಿ: ಮುಂದಿನ ವಾರ ಇನ್ನಷ್ಟು ಏರಿಕೆ! - Kannada  News | Cold Started In Bengaluru And rise next week Says meteorological  department News In Kannada | TV9 Kannada

Read this – Happy new year– 2026 ಹೃದಯಸ್ಪರ್ಶಿ ಟಾಪ್ 5 ಶುಭಾಶಯಗಳು

ಬೆಂಗಳೂರಿನಲ್ಲಿ ಮುಂದಿನ ವಾರ ದಾಖಲೆಯ ಚಳಿ ಎದುರಾಗಲಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ನಗರದ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ನಿರೀಕ್ಷೆಯಿದೆ. ಇದು 2016ರ ನಂತರ ಡಿಸೆಂಬರ್‌ನಲ್ಲಿ ದಾಖಲಾಗುವ ಅತ್ಯಂತ ಕಡಿಮೆ ತಾಪಮಾನವಾಗಿದೆ. ರಾಜ್ಯದ ಇತರೆ ಜಿಲ್ಲೆಗಳಲ್ಲೂ ಚಳಿಯ ತೀವ್ರತೆ ಹೆಚ್ಚಲಿದೆ.

ಸಿಲಿಕಾನ್​​ ಸಿಟಿ ನಿವಾಸಿಗಳೇ ಈಗ ಇರುವ ವಾತಾವರಣವೇ ನಿಮಗೆ ಚಳಿ ಚಳಿ ಅನ್ನಿಸುತ್ತಿದ್ಯಾ? ಹಾಗಿದ್ರೆ ಮತ್ತಷ್ಟು ಕೂಲ್​​ ಕೂಲ್​​ ವೆದರ್​​ ಎದುರಿಸಲು ನೀವು ಸಿದ್ಧರಾಗಿ. ರಾಜಧಾನಿ ಬೆಂಗಳೂರಲ್ಲಿ ಮುಂದಿನ ವಾರ ಚಳಿ ಮತ್ತಷ್ಟು ಹೆಚ್ಚಲಿದೆ ಎಂದು ಹವಾಮಾನ ಇಳಾಖೆ ತಿಳಿಸಿದೆ. ನಗರದ ಕನಿಷ್ಠ ತಾಪಮಾನವು 12 ಡಿಗ್ರಿ ಸೆಲ್ಸಿಯಸ್‌ವರೆಗೆ ಇಳಿಯುವ ನಿರೀಕ್ಷೆಯಿದ್ದು, ಇದು 2016ರ ನಂತರ ಡಿಸೆಂಬರ್‌ನಲ್ಲಿ ದಾಖಲಾಗುವ ಅತಿ ಕಡಿಮೆ ತಾಪಮಾನವಾಗಿದೆ.

ನಗರದಲ್ಲಿ ಚಳಿಗಾಲದ ತೀವ್ರತೆ ಕ್ರಮೇಣ ಹೆಚ್ಚುತ್ತಿದ್ದು, ಮುಂದಿನವಾರ ಬೆಳಗ್ಗಿನ ಹೊತ್ತು ಮತ್ತು ಸಂಜೆ ವೇಳೆ ಭರ್ಜರಿ ಚಳಿ ಇರಲಿದೆ. ಕಳೆದ ವಾರ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದ ಪರಿಣಾಮ ಬೆಂಗಳೂರಿಗರಿಗೆ ಚಳಿಯ ಅನುಭವ ಆಗಿತ್ತು. ಆದ್ರೆ ಮುಂದಿನ ವಾರ ನಗರದ ಕನಿಷ್ಠ ತಾಪಮಾನ ಮತ್ತಷ್ಟು ಇಳಿಕೆ ಆಗಲಿರುವ ಕಾರಣ, ಚಳಿಯೂ ಹೆಚ್ಚಲಿದೆ. IMD ಪ್ರಕಾರ, ಕನಿಷ್ಠ ತಾಪಮಾನ 12ರಿಂದ 14 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದ್ದು, ಡಿಸೆಂಬರ್‌ನ ಸರಾಸರಿ 16.4 ಡಿಗ್ರಿಗಿಂತ ಕಡಿಮೆಯಾಗಿದೆ. ಅಂದಾಜು ಪ್ರಕಾರ ತಾಪಮಾನ ಇಳಿಕೆ ಮುಂದುವರಿದರೆ, 2016ರ ಡಿಸೆಂಬರ್ 11ರ ನಂತರ ಅತ್ಯಂತ ಚಳಿಯನ್ನು ಬೆಂಗಳೂರು 2025ರ ಡಿಸೆಂಬರ್​​ನಲ್ಲಿ ದಾಖಲಿಸಲಿದೆ. ಆ ವೇಳೆ ಕೂಡ ನಗರದ ತಾಪಮಾನ 12 ಡಿಗ್ರಿ ಸೆಲ್ಸಿಯಸ್ ತಲುಪಿತ್ತು.

Read this – Menstrual Leave: New Karnataka Govt Order  ಋತುಚಕ್ರ ರಜೆ: ಕರ್ನಾಟಕ ಸರ್ಕಾರದ ಹೊಸ ಆದೇಶ

ರಾಜ್ಯದ ಹಲವೆಡೆ ಚಳಿ ಹೆಚ್ಚಡ

ಉತ್ತರ ಮತ್ತು ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿಯೂ ಚಳಿ ಹೆಚ್ಚಿರಲಿದೆ. ಬೀದರ್​​, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ ಮತ್ತು ಧಾರವಾಡದಲ್ಲಿ ಇಂದು ಮತ್ತು ನಾಳೆ ಚಳಿ ಹೆಚ್ಚಿರಲಿದೆ. ಕರಾವಳಿ ಜಿಲ್ಲೆಗಳು ಸೇರಿ ಉಳಿದೆಡೆ ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×