HomeNewsCultureಜನಪದ ಕಂಡ ಪಂಗಡಗಳು - ದೊಡ್ಡಾಟ - ಯಕ್ಷಗಾನ - ಬಯಲಾಟ / ಮರೆಯಾಗುತ್ತಿರುವ ಕಲೆಗಳು...

ಜನಪದ ಕಂಡ ಪಂಗಡಗಳು – ದೊಡ್ಡಾಟ – ಯಕ್ಷಗಾನ – ಬಯಲಾಟ / ಮರೆಯಾಗುತ್ತಿರುವ ಕಲೆಗಳು – 1

ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.

ಆದರೆ ಜನಪದ ವೈಭವದ ಕಾಲವೂ ಒಂದಿತ್ತು, ಆ ದಿನಗಳಲ್ಲಿ ಅದೇ ಒಂದು ಪಂಗಡ,ಧರ್ಮವಾಗಿ ಬೇಳೆದಿತ್ತು. ಕಲೆಯ ಕಾಲಿಗೆ ಬಿದ್ದು ಗೌರವಿಸುವ ಕಾಲ ಅದಾಗಿತ್ತು. ರಾಜಾದಿರಾಜರಿಂದ ಕಡು ಬಡವನವರೆಗೂ ಅದನ್ನು ಕಲಿಯುವ ತವಕ ಇತ್ತು ಹಾಗಾದರೆ ಅವೆಲ್ಲ ಯಾವುದಾಗಿತ್ತು ಮತ್ತು ಇಂದು ಬೀದಿ ದೋಂಬರಾಟ ವಾಗಲು ಕಾರಣವೇನು ? ಮುಂದೆ ಓದಿ

ದೊಡ್ಡಾಟ

ಹೌದು! ಇಂದು ಸುಣ್ಣದ ಗೋಡೆಯಂತೆ ಮಾಯ ವಾಗುತ್ತಿದೆ. ಒಂದು ಕಾಲದಲ್ಲಿ ಊರಿಗೆ ಊರೇ ಈ ದೊಡ್ಡಾಟಕ್ಕೆ ಕಾದು ಕುಳಿತು ಹಳೆ ಕಥೆಗಳ ಚಿತ್ರಣ ಕಂಡುಕೊಂಡ ವೈಭವ ಈ ಕಲೆಗಿತ್ತು.

ಈ ಆಟಕ್ಕೆ ಇನ್ನು ಹತ್ತಿಪ್ಪತ್ತು ದಿನ ಇರವಾಗಲೇ ಆಡುವ ಜಾಗವನ್ನು ಆಯ್ಕೆ ಮಾಡಿ ಅಲ್ಲಿ ‘ಹಂದರಗಂಬ’ವೊಂದನ್ನು ನಿಲ್ಲಿಸುತ್ತಾರೆ. ಪೌರಾಣಿಕ ಪ್ರಸಂಗಗಳನ್ನು ಹೊಂದುವ ಈ ಆಟ ರಾತ್ರಿಯೆಲ್ಲಾ ನಡೆದು ಸೂರ್ಯೋ ಉಯದ ವೇಳೆಗೆ ಮುಕ್ತಾಯವಾಗುತ್ತದೆ. ಹಾಗಾಗಿ ಸುರಕ್ಷಿತ ಜಾಗ ಮುಖ್ಯವಾಗುತ್ತದೆ .

ಜನಗಳನ್ನು ಸೆಳೆಯುವಂತ ಮಾತು ಚಾತುರ್ಯ, ಪಾತ್ರ ಹೋಲುವಂತ ಬಣ್ಣ ಮತ್ತು ಮಂಟಪ ಈ ದೊಡ್ಡಾಟಕ್ಕೆ ಬಲು ಮುಖ್ಯ ವಾಗುತ್ತದೆ.

ಈ ಆಟದಲ್ಲಿ ಕೃಷ್ಣ – ಅರ್ಜುನ ಒಳಗೊಂಡು ರಾಮ, ಲಕ್ಷ್ಮಣ, ಈಶ್ವರ , ಪಾರ್ವತಿ ಪಾತ್ರದಂತೆ ಕುರುಕ್ಷೇತ್ರ , ಕೃಷ್ಣಸಂಧಾನ, ಪುಷ್ಪಹರಣ,ವಿರಾಟ ಪರ್ವ, ಕರ್ಣಪರ್ವ, ಸುಧನ್ವಾರ್ಜನ ,ತಾರಕಾಸುರ ವಧೆ, ವೀರ ಅಭಿಮನ್ಯು, ಆಶ್ವಮೇಧಯಾಗದ್ದು, ವಾಲಿ-ಸುಗ್ರೀವರ ಕಾಳಗದ್ದು, ದ್ರೌಪದೀ ವಸ್ತ್ರಾಪ-ಹರಣ, ರತಿ-ಕಲ್ಯಾಣ, ಲವಕುಶರ ಕಾಳಗ, ತಾಮ್ರಧ್ವಜನ ಕಾಳಗ, ಅಹಿರಾವಣ, ರಾವಣ, ಶ್ವೇತ ಚರಿತ್ರೆ, ಭೀಮಾರ್ಜುನರ ಯುದ್ದ, ಕರ್ಣಾರ್ಜುನ ಕಾಳಗ, ಕಲಾವತಿ ಸ್ವಯಂವರ, ವೃತ್ತಪಾಲಕರಾಜ, ದುರ್ಗಾಸುರ ಕಾಳಗ, ಭೀಷ್ಮ – ಪರ್ವ, ಸುಭದ್ರಾಕಲ್ಯಾಣ, ಭಕ್ತ ಮಾರ್ಕಂಡೇಯರು, ಸತ್ಯ – ಹರಿಶ್ಚಂದ್ರ, ಇಂದ್ರಜಿತು ಕಾಳಗ, ಹಿಡಂಬಿ ಕಲ್ಯಾಣ, ಊರ್ವಶಿ, ರಾಮಾಂಜನೇಯ ಯುದ್ದ , ಲಂಕಾದಹನ, ಜಲಂಧರನ ಕಾಳಗ, ಸಾನಂದ ಗಣೇಶ ಹೀಗೆ ಅನೇಕ ಪಾತ್ರ ಪರಿಚಯ ತಿಳಿಸಿಕೊಟ್ಟ ಸಿಂಹ ಪಾಲು ಈ ದೊಡ್ಡಾಟದ್ದು.

ಕಾಲ ಬದಲಾಗುತ್ತಿದೆ, ಬಣ ಮಾಸುತ್ತಿದೆ, ಪೀಳಿಗೆ ಬದಲಾಗಿ ಆಸಕ್ತಿ ಬೇರೆಡೆಗೆ ವಾಲುತ್ತಾ ಇಂತಹ ಕಲೆಗಳನ್ನು ಕಾಣುವುದು ಕಷ್ಟ.

ಆದರು ಇದನ್ನು ಆರಾಧ್ಯ ದೈವದಂತೆ ಪೂಜಿಸುತ್ತಾ, ಪೂರ್ವಜರ ಕಲೆಯನ್ನು ಪರಗತ ಮಾಡಿಕೊಂಡ ಪಂಗಡ ನಮ್ಮಲ್ಲೀ ಈಗಲೂ ಸಿಗುತ್ತಾರೆ ಆದರೆ ಅವರ ಸತ್ಕಾರ ತುಂಬಾ ಕಡಿಮೆ .. ಕಲೆಗಳನ್ನು ಬೆಳೆಸಿ

ಮುಂದೆ ಯಕ್ಷಗಾನ ತಿಳಿಯೋಣ…..

  • Story of Siddhidatri Devi: ನವರಾತ್ರಿಯ ಒಂಬತ್ತನೇ ದೇವಿ
    ಸಿದ್ಧಿದಾತ್ರಿ ದೇವಿ: ನವರಾತ್ರಿಯ ಒಂಬತ್ತನೇ ದಿನ ಆರಾಧಿಸುವ ನವದುರ್ಗೆಯ ಅಂತಿಮ ರೂಪ ಸಿದ್ಧಿದಾತ್ರಿ ದೇವಿ ಯಾರು? ನವರಾತ್ರಿ ಹಬ್ಬದ ಒಂಬತ್ತನೇ ದಿನ ಸಿದ್ಧಿದಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ. ನವದುರ್ಗೆಯ ಒಂಬತ್ತನೇ ಹಾಗೂ ಅಂತಿಮ ರೂಪವಾಗಿರುವ ಈ ದೇವಿಯು ಸಿದ್ಧಿ, ಜ್ಞಾನ, ಆಧ್ಯಾತ್ಮಿಕ ಶಕ್ತಿ, ಶಾಂತಿ ಮತ್ತು ಪೂರ್ಣತೆಯ ಪ್ರತೀಕ… Read more: Story of Siddhidatri Devi: ನವರಾತ್ರಿಯ ಒಂಬತ್ತನೇ ದೇವಿ
  • Story of Mahagauri Devi – ನವರಾತ್ರಿಯ ಎಂಟನೇ ದೇವಿ
    ಮಹಾಗೌರಿ ದೇವಿ: ನವರಾತ್ರಿಯ ಎಂಟನೇ ದೇವಿ ಮಹಾಗೌರಿ ದೇವಿ ಯಾರು? ನವರಾತ್ರಿಯ ಎಂಟನೇ ದಿನ ಆರಾಧಿಸಲಾಗುವ ನವದುರ್ಗೆಯ ಎಂಟನೇ ರೂಪವೇ ಮಹಾಗೌರಿ ದೇವಿ. ‘ಮಹಾ’ ಎಂದರೆ ಅತ್ಯಂತ ಶ್ರೇಷ್ಠ ಮತ್ತು ‘ಗೌರಿ’ ಎಂದರೆ ಪ್ರಕಾಶಮಾನವಾದ, ಶುಭ್ರವಾದ ಎಂಬ ಅರ್ಥವನ್ನು ನೀಡುತ್ತದೆ. ಪಾವಿತ್ರ್ಯ, ಶಾಂತಿ, ಕರುಣೆ ಮತ್ತು ಸೌಭಾಗ್ಯದ… Read more: Story of Mahagauri Devi – ನವರಾತ್ರಿಯ ಎಂಟನೇ ದೇವಿ
  • Story of Kalratri Devi – ನವರಾತ್ರಿಯ ಏಳನೇ ದೇವಿ
    ಕಾಲರಾತ್ರಿ ದೇವಿ: ನವರಾತ್ರಿಯ ಏಳನೇ ದೇವಿ ಕಾಲರಾತ್ರಿ ದೇವಿ ಯಾರು? ನವರಾತ್ರಿಯ ಏಳನೇ ದಿನ ಆರಾಧಿಸಲಾಗುವ ನವದುರ್ಗೆಯ ಏಳನೇ ರೂಪವೇ ಕಾಲರಾತ್ರಿ ದೇವಿ. ಹೆಸರಿನಲ್ಲೇ ಉಗ್ರತೆಯ ಸಂಕೇತವಿದ್ದರೂ, ಭಕ್ತರಿಗೆ ಕಾಲರಾತ್ರಿ ದೇವಿಯು ರಕ್ಷಣೆ, ಧೈರ್ಯ ಮತ್ತು ಭಯವನ್ನು ದೂರ ಮಾಡುವ ದೈವಿಕ ಶಕ್ತಿಯ ರೂಪವಾಗಿ ಪರಿಗಣಿಸಲ್ಪಡುತ್ತಾಳೆ. ಪೌರಾಣಿಕ… Read more: Story of Kalratri Devi – ನವರಾತ್ರಿಯ ಏಳನೇ ದೇವಿ
  • Story of Katyayani Devi – ನವರಾತ್ರಿಯ ಆರನೇ ದೇವಿ
    ಕಾತ್ಯಾಯನಿ ದೇವಿ: ನವರಾತ್ರಿಯ ಆರನೇ ದೇವಿ ಕಾತ್ಯಾಯನಿ ದೇವಿ ಯಾರು? ನವರಾತ್ರಿಯ ಆರನೇ ದಿನ ಆರಾಧಿಸಲಾಗುವ ನವದುರ್ಗೆಯ ಆರನೇ ರೂಪವೇ ಕಾತ್ಯಾಯನಿ ದೇವಿ. ಶಕ್ತಿ, ಧೈರ್ಯ, ನ್ಯಾಯ ಮತ್ತು ದುಷ್ಟಶಕ್ತಿಗಳ ಸಂಹಾರದ ಪ್ರತೀಕವಾಗಿ ದೇವಿಯನ್ನು ಭಕ್ತರು ಪೂಜಿಸುತ್ತಾರೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಮಹಿಷಾಸುರನಂತಹ ದುಷ್ಟಶಕ್ತಿಗಳನ್ನು ಸಂಹರಿಸಲು ದೇವಿಯು… Read more: Story of Katyayani Devi – ನವರಾತ್ರಿಯ ಆರನೇ ದೇವಿ
  • Story of Skandamata Devi – ನವರಾತ್ರಿಯ ಐದನೇ ದೇವಿ
    ಸ್ಕಂದಮಾತಾ ದೇವಿ: ನವರಾತ್ರಿಯ ಐದನೇ ದೇವಿ ಸ್ಕಂದಮಾತಾ ಯಾರು? ನವರಾತ್ರಿಯ ಐದನೇ ದಿನ ಆರಾಧಿಸಲಾಗುವ ನವದುರ್ಗೆಯ ಐದನೇ ರೂಪವೇ ಸ್ಕಂದಮಾತಾ ದೇವಿ. ‘ಸ್ಕಂದ’ ಎಂದರೆ ಭಗವಾನ್ ಕಾರ್ತಿಕೇಯ ಅಥವಾ ಸುಬ್ರಹ್ಮಣ್ಯನ ಹೆಸರು. ಸ್ಕಂದನ ತಾಯಿಯಾಗಿರುವುದರಿಂದ ಪಾರ್ವತಿ ದೇವಿಯನ್ನು ಸ್ಕಂದಮಾತಾ ಎಂದು ಕರೆಯಲಾಗುತ್ತದೆ. ಮಾತೃತ್ವ, ಕರುಣೆ, ಶಕ್ತಿ ಮತ್ತು… Read more: Story of Skandamata Devi – ನವರಾತ್ರಿಯ ಐದನೇ ದೇವಿ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
Banu Mitra
Banu Mitrahttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

Leave a Reply

- Advertisment -

Most Popular

Recent Comments