Welcome to Kannada Folks   Click to listen highlighted text! Welcome to Kannada Folks
HomeNewsCultureಜನಪದ ಕಂಡ ಪಂಗಡಗಳು - ದೊಡ್ಡಾಟ - ಯಕ್ಷಗಾನ - ಬಯಲಾಟ / ಮರೆಯಾಗುತ್ತಿರುವ ಕಲೆಗಳು...

ಜನಪದ ಕಂಡ ಪಂಗಡಗಳು – ದೊಡ್ಡಾಟ – ಯಕ್ಷಗಾನ – ಬಯಲಾಟ / ಮರೆಯಾಗುತ್ತಿರುವ ಕಲೆಗಳು – 1

Spread the love

ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.

ಆದರೆ ಜನಪದ ವೈಭವದ ಕಾಲವೂ ಒಂದಿತ್ತು, ಆ ದಿನಗಳಲ್ಲಿ ಅದೇ ಒಂದು ಪಂಗಡ,ಧರ್ಮವಾಗಿ ಬೇಳೆದಿತ್ತು. ಕಲೆಯ ಕಾಲಿಗೆ ಬಿದ್ದು ಗೌರವಿಸುವ ಕಾಲ ಅದಾಗಿತ್ತು. ರಾಜಾದಿರಾಜರಿಂದ ಕಡು ಬಡವನವರೆಗೂ ಅದನ್ನು ಕಲಿಯುವ ತವಕ ಇತ್ತು ಹಾಗಾದರೆ ಅವೆಲ್ಲ ಯಾವುದಾಗಿತ್ತು ಮತ್ತು ಇಂದು ಬೀದಿ ದೋಂಬರಾಟ ವಾಗಲು ಕಾರಣವೇನು ? ಮುಂದೆ ಓದಿ

ದೊಡ್ಡಾಟ

ಹೌದು! ಇಂದು ಸುಣ್ಣದ ಗೋಡೆಯಂತೆ ಮಾಯ ವಾಗುತ್ತಿದೆ. ಒಂದು ಕಾಲದಲ್ಲಿ ಊರಿಗೆ ಊರೇ ಈ ದೊಡ್ಡಾಟಕ್ಕೆ ಕಾದು ಕುಳಿತು ಹಳೆ ಕಥೆಗಳ ಚಿತ್ರಣ ಕಂಡುಕೊಂಡ ವೈಭವ ಈ ಕಲೆಗಿತ್ತು.

ಈ ಆಟಕ್ಕೆ ಇನ್ನು ಹತ್ತಿಪ್ಪತ್ತು ದಿನ ಇರವಾಗಲೇ ಆಡುವ ಜಾಗವನ್ನು ಆಯ್ಕೆ ಮಾಡಿ ಅಲ್ಲಿ ‘ಹಂದರಗಂಬ’ವೊಂದನ್ನು ನಿಲ್ಲಿಸುತ್ತಾರೆ. ಪೌರಾಣಿಕ ಪ್ರಸಂಗಗಳನ್ನು ಹೊಂದುವ ಈ ಆಟ ರಾತ್ರಿಯೆಲ್ಲಾ ನಡೆದು ಸೂರ್ಯೋ ಉಯದ ವೇಳೆಗೆ ಮುಕ್ತಾಯವಾಗುತ್ತದೆ. ಹಾಗಾಗಿ ಸುರಕ್ಷಿತ ಜಾಗ ಮುಖ್ಯವಾಗುತ್ತದೆ .

ಜನಗಳನ್ನು ಸೆಳೆಯುವಂತ ಮಾತು ಚಾತುರ್ಯ, ಪಾತ್ರ ಹೋಲುವಂತ ಬಣ್ಣ ಮತ್ತು ಮಂಟಪ ಈ ದೊಡ್ಡಾಟಕ್ಕೆ ಬಲು ಮುಖ್ಯ ವಾಗುತ್ತದೆ.

ಈ ಆಟದಲ್ಲಿ ಕೃಷ್ಣ – ಅರ್ಜುನ ಒಳಗೊಂಡು ರಾಮ, ಲಕ್ಷ್ಮಣ, ಈಶ್ವರ , ಪಾರ್ವತಿ ಪಾತ್ರದಂತೆ ಕುರುಕ್ಷೇತ್ರ , ಕೃಷ್ಣಸಂಧಾನ, ಪುಷ್ಪಹರಣ,ವಿರಾಟ ಪರ್ವ, ಕರ್ಣಪರ್ವ, ಸುಧನ್ವಾರ್ಜನ ,ತಾರಕಾಸುರ ವಧೆ, ವೀರ ಅಭಿಮನ್ಯು, ಆಶ್ವಮೇಧಯಾಗದ್ದು, ವಾಲಿ-ಸುಗ್ರೀವರ ಕಾಳಗದ್ದು, ದ್ರೌಪದೀ ವಸ್ತ್ರಾಪ-ಹರಣ, ರತಿ-ಕಲ್ಯಾಣ, ಲವಕುಶರ ಕಾಳಗ, ತಾಮ್ರಧ್ವಜನ ಕಾಳಗ, ಅಹಿರಾವಣ, ರಾವಣ, ಶ್ವೇತ ಚರಿತ್ರೆ, ಭೀಮಾರ್ಜುನರ ಯುದ್ದ, ಕರ್ಣಾರ್ಜುನ ಕಾಳಗ, ಕಲಾವತಿ ಸ್ವಯಂವರ, ವೃತ್ತಪಾಲಕರಾಜ, ದುರ್ಗಾಸುರ ಕಾಳಗ, ಭೀಷ್ಮ – ಪರ್ವ, ಸುಭದ್ರಾಕಲ್ಯಾಣ, ಭಕ್ತ ಮಾರ್ಕಂಡೇಯರು, ಸತ್ಯ – ಹರಿಶ್ಚಂದ್ರ, ಇಂದ್ರಜಿತು ಕಾಳಗ, ಹಿಡಂಬಿ ಕಲ್ಯಾಣ, ಊರ್ವಶಿ, ರಾಮಾಂಜನೇಯ ಯುದ್ದ , ಲಂಕಾದಹನ, ಜಲಂಧರನ ಕಾಳಗ, ಸಾನಂದ ಗಣೇಶ ಹೀಗೆ ಅನೇಕ ಪಾತ್ರ ಪರಿಚಯ ತಿಳಿಸಿಕೊಟ್ಟ ಸಿಂಹ ಪಾಲು ಈ ದೊಡ್ಡಾಟದ್ದು.

ಕಾಲ ಬದಲಾಗುತ್ತಿದೆ, ಬಣ ಮಾಸುತ್ತಿದೆ, ಪೀಳಿಗೆ ಬದಲಾಗಿ ಆಸಕ್ತಿ ಬೇರೆಡೆಗೆ ವಾಲುತ್ತಾ ಇಂತಹ ಕಲೆಗಳನ್ನು ಕಾಣುವುದು ಕಷ್ಟ.

ಆದರು ಇದನ್ನು ಆರಾಧ್ಯ ದೈವದಂತೆ ಪೂಜಿಸುತ್ತಾ, ಪೂರ್ವಜರ ಕಲೆಯನ್ನು ಪರಗತ ಮಾಡಿಕೊಂಡ ಪಂಗಡ ನಮ್ಮಲ್ಲೀ ಈಗಲೂ ಸಿಗುತ್ತಾರೆ ಆದರೆ ಅವರ ಸತ್ಕಾರ ತುಂಬಾ ಕಡಿಮೆ .. ಕಲೆಗಳನ್ನು ಬೆಳೆಸಿ

ಮುಂದೆ ಯಕ್ಷಗಾನ ತಿಳಿಯೋಣ…..

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Click to listen highlighted text!