Trump-doesnt-care-about-anybody-he-does-what-he-wants-tv-mohandas-pai-on-india-us-trade-deal ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಯಾರ ಬಗ್ಗೆಯೂ ಕಾಳಜಿ ಇಲ್ಲ.. ಅವರಿಗೇನು ಬೇಕೋ ಅದನ್ನೇ ಅವರು ಮಾಡುತ್ತಾರೆ ಎಂದು ಕರ್ನಾಟಕದ ಉದ್ಯಮಿ ಮೋಹನ್ ದಾಸ್ ಪೈ ಹೇಳಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಿನ ಬಹು ನಿರೀಕ್ಷಿತ ವಾಣಿಜ್ಯ ಒಪ್ಪಂದ ಕುರಿತು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮೋಹನ್ ದಾಸ್ ಪೈ ಅವರು, ‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಬ್ಬ ವಿಶಿಷ್ಟ ವ್ಯಕ್ತಿ. ಅವರು ಯಾರ ಬಗ್ಗೆಯೂ ಕಾಳಜಿ ವಹಿಸುವುದಿಲ್ಲ… ಅವರು ತಮಗೇನು ಬೇಕೋ ಅದನ್ನೇ ಮಾಡುತ್ತಾರೆ. ಅವು ಬಯಸಿದ್ದನ್ನು ಮಾಡುತ್ತಾರೆ… ಅವರು ಸುಂಕಗಳನ್ನು ಹೆಚ್ಚಿಸುತ್ತಾರೆ… ನೀವು ಅವರೊಂದಿಗೆ ಹೋರಾಡಲು ಸಾಧ್ಯವಿಲ್ಲ’ ಎಂದರು.

Read Here PM Modi speaks to Donald Trump discusses strategic partnership
ಈಗ, ಅಧ್ಯಕ್ಷ ಟ್ರಂಪ್ ಸ್ಪಷ್ಟವಾಗಿ ಹೇಳಿರುವ ಪ್ರಕಾರ, ನೀವು ರಷ್ಯಾದ ತೈಲವನ್ನು ಖರೀದಿಸುತ್ತಿಲ್ಲವಾದ್ದರಿಂದ ನಾನು ಸುಂಕವನ್ನು ಶೇ.18% ಕ್ಕೆ ಇಳಿಸುತ್ತಿದ್ದೇನೆ. ಪ್ರಧಾನಿ ಮೋದಿಯವರು ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಏನು ಮಾಡುತ್ತಾರೆ ಎಂದು ನೀವು ನಂಬಬಹುದು ಎಂದರು.
Read Here PM Modi speaks to Donald Trump discusses strategic partnership
ಅಲ್ಲದೆ ‘ಅವರು ಹೇಳುವುದನ್ನು ನಾವು ಅನುಕೂಲಕರ ಒಪ್ಪಂದ ಎಂದು ಪಡೆದುಕೊಂಡಿದ್ದೇವೆ. ಅದನ್ನು ಪ್ರಮುಖ ಸ್ಲಾಟ್‌ನಲ್ಲಿ ಇಡುತ್ತಿದ್ದೇವೆ. ಅಮೆರಿಕದೊಂದಿಗಿನ ವ್ಯಾಪಾರದಿಂದಾಗಿ ಚೀನಾ ದೈತ್ಯ ಶಕ್ತಿಯಾಗಿದೆ. ನಾವು ಕೂಡ ಬುದ್ಧಿವಂತರಾಗಿರಬೇಕು ಮತ್ತು ಅಮೆರಿಕಕ್ಕೆ ಹೆಚ್ಚು ರಫ್ತು ಮಾಡಬೇಕು ಮತ್ತು ಅಮೆರಿಕದೊಂದಿಗೆ ಹೆಚ್ಚು ವ್ಯವಹಾರ ಮಾಡಬೇಕು’ ಮೋಹದಾಸ್ ಪೈ ಹೇಳಿದರು.
Support Us 


