Trek safety concerns rise-ಸೋಲೋ ಟ್ರೆಕ್ಕಿಂಗ್ ಬ್ಯಾನ್ ಚರ್ಚೆ
ಮಡಿಕೇರಿಯ ತಡಿಯಂಡಮೋಳದಲ್ಲಿ ಐಟಿ ಉದ್ಯೋಗಿ ನಾಪತ್ತೆಯಾದ ಬಳಿಕ ರಾಜ್ಯದಲ್ಲಿ ಸೋಲೋ ಟ್ರೆಕ್ಕಿಂಗ್ ನಿಷೇಧದ ಚರ್ಚೆ ಶುರುವಾಗಿದೆ. ಅನುಭವವಿದ್ದರೂ ಒಂಟಿಯಾಗಿ ಚಾರಣದಿಂದ ಅಪಾಯದ ಸಾಧ್ಯತೆ ಹೆಚ್ಚು. ಹೀಗಾಗಿ ಒಂಟಿಯಾಗಿ ಚಾರಣ ಮಾಡುವವರ ಜೊತೆಗೆ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕಳುಹಿಸಬೇಕು. ಇದರಿಂದ ಚಾರಣಿಗರು ಸುರಕ್ಷಿತವಾಗಿ ಹಿಂದಿರುಗಲು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
Read this : Bypoll Fake Message Row-ಸಿರಿಗೆರೆ ಸ್ವಾಮೀಜಿ ನಕಲಿ ಸಂದೇಶ
ಕೊಡಗು, ಏಪ್ರಿಲ್ 07: ಮಡಿಕೇರಿ ತಾಲೂಕಿನ ತಡಿಯಂಡಮೋಳ ಬೆಟ್ಟಕ್ಕೆ ಚಾರಣಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯಾ ಬರೋಬ್ಬರಿ 4 ದಿನಗಳ ಬಳಿಕ ಸುರಕ್ಷಿತವಾಗಿ ಪತ್ತೆಯಾಗಿದ್ದರು. ಆ ಬೆನ್ನಲ್ಲೇ ಅರಣ್ಯ ಇಲಾಖೆ ಕೊಡಗಿನ ತಡಿಯಂಡಮೋಳ ಟ್ರೆಕ್ಕಿಂಗ್ ಮಾರ್ಗವನ್ನು ಏಪ್ರಿಲ್ 11ರವರೆಗೆ ತಾತ್ಕಾಲಿಕವಾಗಿ ಮುಚ್ಚಿದೆ. ಈ ಮಾರ್ಗದಲ್ಲಿ ಕೆಲವು ಸುರಕ್ಷತಾ ಕ್ರಮಗಳನ್ನು ಬಲಪಡಿಸುವ ಯೋಜನೆ ಕೈಗೊಂಡಿರುವ ಹಿನ್ನೆಲೆ ಈ ನಿರ್ದಾರ ಕೈಗೊಂಡಿರೋದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದೆಡೆ ಸೋಲೋ ಟ್ರೆಕ್ಕಿಂಗ್ ಸಾಕಷ್ಟು ಅಪಾಯಕ್ಕೆ ಕಾರಣವಾಗಿರುವ ಕಾರಣ ಒಬ್ಬಂಟಿಯಾಗಿ ಚಾರಣಕ್ಕೆ ಹೋಗುವುದನ್ನು ನಿಷೇಧಿಸಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ.
ಟ್ರೆಕ್ಕಿಂಗ್ಗೆಂದು ತೆರಳಿ ತಡಿಯಂಡಮೋಳ ಬೆಟ್ಟದಲ್ಲಿ ನಾಪತ್ತೆಯಾಗಿದ್ದ ಶರಣ್ಯಾಗೆ ಚಾರಣ ಹೊಸದೇನೂ ಆಗಿರಲಿಲ್ಲ. ಆ ಬಗ್ಗೆ ಸಾಕಷ್ಟು ಅನುಭವ ಅವರಿಗಿತ್ತು. ಹೀಗಾಗಿ ಟ್ರೆಕ್ಕರ್ಗಳು ಎಷ್ಟೇ ಅನುಭವ ಹೊಂದಿದ್ದರೂ ಪರಿಚಯವಿಲ್ಲದ ಮಾರ್ಗದಲ್ಲಿ ಒಬ್ಬರೇ ಟ್ರೆಕ್ಗೆ ಹೋಗುವುದು ಸೂಕ್ತವಲ್ಲ. ತಾವು ತೆರಳಲು ಉದ್ದೇಶಿಸಿದ ಮಾರ್ಗಗಳ ಕುರಿತು ಟ್ರೆಕ್ಕರ್ಗಳು ಮುಂಚಿತವಾಗಿ ಸಂಪೂರ್ಣ ಮಾಹಿತಿ ಸಂಗ್ರಹಿಸಿಕೊಳ್ಳಬೇಕು . ಒಬ್ಬರೇ ತೆರಳುವವರು ತಮ್ಮ ಹಾದಿಯನ್ನು ಜಾಗರೂಕತೆಯಿಂದ ಗುರುತಿಸಿಕೊಂಡು ಸಾಗಬೇಕು. ಹಲವು ಬಗೆಯ ನ್ಯಾವಿಗೇಶನ್ ಆಪ್ಗಳು ಲಭ್ಯವಿದ್ದು ಅವುಗಳನ್ನು ಬಳಸುವುದು ಒಳಿತು. ಏಕೆಂದರೆ ಇವುಗಳಲ್ಲಿ ಪೂರ್ವನಕ್ಷಿತ ಮಾರ್ಗಗಳು ಲಭ್ಯವಿರುತ್ತವೆ ಎಂಬ ಅಭಿಪ್ರಾಯಗಳು ಕೂಡ ವ್ಯಕ್ತವಾಗಿವೆ. ಇನ್ನು ಟ್ರೆಕ್ಕರ್ಗಳು ಅಗತ್ಯ ಸಾಧನಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು. ಟಾರ್ಚ್ಲೈಟ್, ನೀರು ಮತ್ತು ಆಹಾರ, ಸೀಟಿ (whistle), ಪೋರ್ಟ್ಬಲ್ ಚಾರ್ಜರ್ ಮತ್ತು ಫಸ್ಟ್ಏಯ್ಡ್ ಕಿಟ್ ಈ ಪೈಕಿ ಇರಲೇ ಬೇಕಾದಂತವು ಎಂಬ ಸೂಚನೆಯನ್ನು ತಜ್ಞರು ನೀಡಿದ್ದಾರೆ.
ಇನ್ನು ಕೊಡಗು ಜಿಲ್ಲೆಯ ಇತರೆ ಪ್ರಮುಖ ಟ್ರೆಕ್ಕಿಂಗ್ ಮಾರ್ಗಗಳಾದ ಸೋಮವಾರಪೇಟೆಯ ಬೀಡಹಳ್ಳಿಯಿಂದ ಆರಂಭವಾಗುವ ಕುಮಾರ ಪರ್ವತ ಟ್ರೆಕ್ಗೂ ಸ್ಪಷ್ಟ ಮಾರ್ಗಗಳಿದ್ದರೂ, ಅವು ಅರಣ್ಯ ಪ್ರದೇಶಗಳ ಮೂಲಕವೇ ಹೆಚ್ಚಾಗಿ ಸಾಗುವುದರಿಂದ ಇನ್ನಷ್ಟು ಸುರಕ್ಷತಾ ವ್ಯವಸ್ಥೆಗಳ ಅಗತ್ಯವಿದೆ. ಜೊತೆಗೆ ಈ ಮಾರ್ಗಗಳಲ್ಲಿ ಎಚ್ಚರಿಕೆ ಮತ್ತು ಸೂಚನಾ ಫಲಕಗಳ ಸ್ಥಾಪನೆ, ಸಂವಹನ ಕೇಂದ್ರಗಳ ನಿರ್ಮಾಣ, ವಿಶ್ರಾಂತಿ ಶೆಲ್ಟರ್ಗಳ ವ್ಯವಸ್ಥೆ, ಬ್ಯಾಕಪ್ ರೆಸ್ಕ್ಯೂ ತಂಡಗಳ ನಿಯೋಜನೆ ಮತ್ತು ಬೇಸ್ ಕ್ಯಾಂಪ್ಗಳಲ್ಲಿ ಆರೋಗ್ಯ ಸೇವೆಗಳ ಲಭ್ಯತೆ ಒದಗಿಸಬೇಕೇಂಬ ಬಗ್ಗೆಯೂ ಆಗ್ರಹ ಕೇಳಿಬಂದಿವೆ.
ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳುವವರಿಂದ ಅರಣ್ಯ ಇಲಾಖೆ ತಲಾ 250 ರೂ. ಶುಲ್ಕ ವಸೂಲಿ ಮಾಡುತ್ಯದೆ. ಆದರೆ ಚಾರಣ ತೆರಳುವವರ ಜೊತೆ ಯಾವುದೇ ಸಿಬ್ಬಂದಿಯನ್ನು ಕಳುಹಿಸುವುದಿಲ್ಲ. ಶರಣ್ಯಾ ಪ್ರಕರಣದಿಂದಾದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಚಾರಣ ಬರುವವರ ಜೊತೆ ಕನಿಷ್ಠ ಒಬ್ಬ ಸಿಬ್ಬಂದಿಯನ್ನು ಖಡ್ಡಾಯವಾಗಿ ಕಳುಹಿಸುವಂತಾಗಬೇಕು. ಇದರಿಂದ ಚಾರಣಿಗರು ಸುರಕ್ಷಿತವಾಗಿ ಹಿಂದಿರುಗಲು ಅನುಕೂಲವಾಗುತ್ತದೆ ಎಂದು ವಕೀಲ ಅಚ್ಚಾಂಡಿರ ಪವನ್ ಪೆಮ್ಮಯ್ಯ ಅಭಿಪ್ರಾಯಪಟ್ಟಿದ್ದಾರೆ.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


