HomeNewsToday’s Gold Price-10 ದಿನದಲ್ಲಿ ಚಿನ್ನ ₹6,100 ಏರಿಕೆ |Kannada Folks

Today’s Gold Price-10 ದಿನದಲ್ಲಿ ಚಿನ್ನ ₹6,100 ಏರಿಕೆ |Kannada Folks

Gold surges ₹6,100 in 10 days

Today’s Gold Price-10 ದಿನದಲ್ಲಿ ಚಿನ್ನ ₹6,100 ಏರಿಕೆ

Bullion Market 2026 April 19th: ಈ ವಾರಾಂತ್ಯದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೆಚ್ಚಿವೆ. ಚಿನ್ನದ ಬೆಲೆ 145 ರೂ ಏರಿದರೆ, ಬೆಳ್ಳಿ ಬೆಲೆ 10 ರೂ ಹೆಚ್ಚಿದೆ. 22 ಕ್ಯಾರಟ್ ಚಿನ್ನದ ಬೆಲೆ 14,135 ರೂನಿಂದ 14,280 ರೂಗೆ ಹೆಚ್ಚಿದೆ. 24 ಕ್ಯಾರಟ್ ಚಿನ್ನದ ಬೆಲೆ 15,578 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ ಗ್ರಾಮ್​ಗೆ 275 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 280 ರೂ ಇದೆ.Gold Rates: ಹತ್ತು ಗ್ರಾಮ್ ಚಿನ್ನದ ಬೆಲೆ 10 ದಿನದಲ್ಲಿ 6,100 ರೂ ಏರಿಕೆ

Read this:Davanagere South Rift ಕಾಂಗ್ರೆಸ್‌ನಲ್ಲಿ ದಾವಣಗೆರೆ ಉಪಕದನ ಕಿಚ್ಚು

ಬೆಂಗಳೂರು, ಏಪ್ರಿಲ್ 19: ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold Rates) ತೂಗುಯ್ಯಾಲೆಯಂತೆ ಆಡುತ್ತಿವೆ. ಈ ವಾರಾಂತ್ಯದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 145 ರೂ ಏರಿಕೆಯಾಗಿದೆ. ಬೆಳ್ಳಿ ಬೆಲೆ 10 ರೂ ಹಿಗ್ಗಿದೆ. ಕಳೆದ ಎರಡು ವಾರಗಳಿಂದ ಕಣ್ಣಾಮುಚ್ಚಾಳೆ ಆಡುತ್ತಿದ್ದರೂ ಹತ್ತು ದಿನದಲ್ಲಿ ಇವೆರಡರ ಬೆಲೆಗಳು ಸಖತ್ತಾಗಿ ಏರಿವೆ. ಚಿನ್ನದ ಬೆಲೆ ಭಾರತದಲ್ಲಿ 10 ದಿನದಲ್ಲಿ ಸುಮಾರು 600ಕ್ಕೂ ಅಧಿಕ ಮೊತ್ತದಷ್ಟು ಹೆಚ್ಚಳ ಕಂಡಿದೆ. ಬೆಳ್ಳಿ ಬೆಲೆ 25 ರೂಗಳಷ್ಟು ದುಬಾರಿಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,42,800 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,55,780 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 27,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,42,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 27,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 19ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,578 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,280 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,684 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,578 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,280 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,280 ರೂ
  • ಚೆನ್ನೈ: 14,360 ರೂ
  • ಮುಂಬೈ: 14,280 ರೂ
  • ದೆಹಲಿ: 14,295 ರೂ
  • ಕೋಲ್ಕತಾ: 14,280 ರೂ
  • ಕೇರಳ: 14,280 ರೂ
  • ಅಹ್ಮದಾಬಾದ್: 14,285 ರೂ
  • ಜೈಪುರ್: 14,295 ರೂ
  • ಲಕ್ನೋ: 14,295 ರೂ
  • ಭುವನೇಶ್ವರ್: 14,280 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 593 ರಿಂಗಿಟ್ (13,896 ರುಪಾಯಿ)
  • ದುಬೈ: 544.50 ಡಿರಾಮ್ (13,728 ರುಪಾಯಿ)
  • ಅಮೆರಿಕ: 152 ಡಾಲರ್ (14,076 ರುಪಾಯಿ)
  • ಸಿಂಗಾಪುರ: 190.40 ಸಿಂಗಾಪುರ್ ಡಾಲರ್ (13,848 ರುಪಾಯಿ)
  • ಕತಾರ್: 540.50 ಕತಾರಿ ರಿಯಾಲ್ (13,730 ರೂ)
  • ಸೌದಿ ಅರೇಬಿಯಾ: 552 ಸೌದಿ ರಿಯಾಲ್ (13,627 ರುಪಾಯಿ)
  • ಓಮನ್: 57.75 ಒಮಾನಿ ರಿಯಾಲ್ (13,891 ರುಪಾಯಿ)
  • ಕುವೇತ್: 44.86 ಕುವೇತಿ ದಿನಾರ್ (13,567 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 275 ರೂ
  • ಚೆನ್ನೈ: 280 ರೂ
  • ಮುಂಬೈ: 275 ರೂ
  • ದೆಹಲಿ: 275 ರೂ
  • ಕೋಲ್ಕತಾ: 275 ರೂ
  • ಕೇರಳ: 280 ರೂ
  • ಅಹ್ಮದಾಬಾದ್: 275 ರೂ
  • ಜೈಪುರ್: 275 ರೂ
  • ಲಕ್ನೋ: 275 ರೂ
  • ಭುವನೇಶ್ವರ್: 280 ರೂ
  • ಪುಣೆ: 275

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments