HomeNewsThalapathy Vijay - ವಿಜಯ್ ಅವರ ಆಸ್ತಿ ಬಹಿರಂಗ ಹೂಡಿಕೆಗಳ ವಿವರ ಹೊರಬಂದಿತು

Thalapathy Vijay – ವಿಜಯ್ ಅವರ ಆಸ್ತಿ ಬಹಿರಂಗ ಹೂಡಿಕೆಗಳ ವಿವರ ಹೊರಬಂದಿತು

Thalapathy Vijay - ವಿಜಯ್​ನ ಪೋರ್ಟ್​ಫೋಲಿಯೋ ಇಂಟರೆಸ್ಟಿಂಗ್; ಹೂಡಿಕೆಯಲ್ಲಿ ಸಂಪ್ರದಾಯವಾದಿ; ಎಲ್ಲೆಲ್ಲಿದೆ ಅವರ 624 ಕೋಟಿ ರೂ ಹಣ?

Thalapathy Vijay – ವಿಜಯ್​ನ ಪೋರ್ಟ್​ಫೋಲಿಯೋ ಇಂಟರೆಸ್ಟಿಂಗ್; ಹೂಡಿಕೆಯಲ್ಲಿ ಸಂಪ್ರದಾಯವಾದಿ; ಎಲ್ಲೆಲ್ಲಿದೆ ಅವರ 624 ಕೋಟಿ ರೂ ಹಣ?

 

Actor turned politician Vijay’s Wealth Revealed: Rs 624 Crore Assets & Traditional Investments ನಟ ವಿಜಯ್ ಅವರ ಟಿವಿಕೆ ಪಕ್ಷದ ದಿಗ್ವಿಜಯದ ನಂತರ, ಅವರ ಆಸ್ತಿಪಾಸ್ತಿ ಮತ್ತು ಹೂಡಿಕೆಗಳ ಬಗ್ಗೆ ಕುತೂಹಲ ಹೆಚ್ಚಿದೆ. ಚುನಾವಣಾ ಅಫಿಡವಿಟ್ ಪ್ರಕಾರ, ವಿಜಯ್ 624 ಕೋಟಿ ರೂ. ಆಸ್ತಿ ಹೊಂದಿದ್ದು, ಶೂನ್ಯ ಸಾಲಗಾರರಾಗಿದ್ದಾರೆ. ಹೆಚ್ಚಿನ ಹಣವನ್ನು ಬ್ಯಾಂಕ್ ಠೇವಣಿ ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವ ಮೂಲಕ ಅವರು ಸಂಪ್ರದಾಯಸ್ಥ ಹೂಡಿಕೆದಾರರಂತೆ ಗೋಚರಿಸುತ್ತಾರೆ. ಷೇರು ಮಾರುಕಟ್ಟೆಯಲ್ಲಿ ಅವರ ಹೂಡಿಕೆ ಅತ್ಯಲ್ಪ.

ವಿಜಯ್ (Vijay) ತಮಿಳುನಾಡು ರಾಜಕೀಯವನ್ನೇ ಅಲುಗಾಡಿಸಿಬಿಟ್ಟಿದ್ದಾರೆ. ವಿಧಾನಸಭೆಯಲ್ಲಿ ಇಡೀ ರಾಜ್ಯವೇ ಸಂಚಲನಗೊಳ್ಳುವಂತೆ ಅವರ ಟಿವಿಕೆ ಪಕ್ಷ (TVK- Tamilaga Vetri Kazhagam) ದಿಗ್ವಿಜಯ ಸಾಧಿಸಿದೆ. ಏಕವ್ಯಕ್ತಿ ಈ ಮಹಾನ್ ಕ್ರಾಂತಿ ಮಾಡಿರುವುದು ಸಾಮಾನ್ಯದ ಸಂಗತಿಯಲ್ಲ. ಅಂತೆಯೇ, ಬಹಳ ಜನರು ವಿಜಯ್ ಅವರ ಹಣಕಾಸು ಶಕ್ತಿ ಮತ್ತು ಹಿನ್ನೆಲೆ ಬಗ್ಗೆ ಮಾಹಿತಿ ತಿಳಿಯಲು ಆಸಕ್ತರಾಗಿದ್ದಾರೆ. ಅವರ ಆಸ್ತಿಪಾಸ್ತಿ, ಹೂಡಿಕೆಯ ವಿವರ ನಿಜಕ್ಕೂ ಕುತೂಹಲಕಾರಿ ಎನಿಸಿದೆ.

ಹೊಸ ತಲೆಮಾರಿನ ಜನರನ್ನು ಮತಪೆಟ್ಟಿಗೆಗೆ ಆಕರ್ಷಿಸಿದ ವಿಜಯ್ ಅವರು ಹೂಡಿಕೆ ವಿಚಾರದಲ್ಲಿ ಮಹಾನ್ ಸಂಪ್ರದಾಯಸ್ಥರಂತೆ ಗೋಚರಿಸುತ್ತಾರೆ. ಅವರು ಚುನಾವಣಾ ಅಫಿಡವಿಟ್​ನಲ್ಲಿ ಘೋಷಿಸಿಕೊಂಡ ಒಟ್ಟು ಆಸ್ತಿ 624 ಕೋಟಿ ರೂ. ಅದರಲ್ಲಿ ಚರಾಸ್ತಿ 404 ಕೋಟಿ ರೂ, ಚಿರಾಸ್ತಿ 220 ಕೋಟಿ ರೂ. ಶೂನ್ಯ ಸಾಲ ಹೊಂದಿರುವ ಅಪರೂಪದ ರಾಜಕಾರಣಿ.

 

Vijay: ವಿಜಯ್ ದಳಪತಿಗೆ ತಾಯಿ, ಹೆಂಡತಿ, ಪ್ರೇಮಿ, ಗೆಳತಿಯಾಗಿ ನಟಿಸಿದ ಏಕೈಕ ನಾಯಕಿ ಇವರು | - News18 Kannada

Read here: Thalapathy Vijay  ಅವರ ಐತಿಹಾಸಿಕ ಗೆಲುವು ಮತ್ತು 17 ವರ್ಷಗಳ ಅಧಿಕಾರದ ಪಯಣ


ವಿಜಯ್ ಅವರ ಆಸ್ತಿಪಾಸ್ತಿ ವಿವರ

ದಳಪತಿ ವಿಜಯ್ ಅವರ ಒಟ್ಟು ಆಸ್ತಿ: 624 ಕೋಟಿ ರೂ

  • ಬ್ಯಾಂಕ್​ಗಳಲ್ಲಿ: 404 ಕೋಟಿ ರೂ
  • ರಿಯಲ್ ಎಸ್ಟೇಟ್ ಆಸ್ತಿಗಳು: 220 ಕೋಟಿ ರೂ
  • ವಾರ್ಷಿಕ ಆದಾಯ: 184.53 ಕೋಟಿ ರೂ
ವಿಜಯ್ ಅವರ ಬ್ಯಾಂಕ್ ಡೆಪಾಸಿಟ್​ಗಳು
  • ಚೆನ್ನೈನ ಸಾಲಿಗ್ರಾಮಮ್​ನಲ್ಲಿರುವ ಇಂಡಿಯನ್ ಓವರ್​ಸೀಸ್ ಬ್ಯಾಂಕ್​ನ ಒಂದು ಸೇವಿಂಗ್ಸ್ ಅಕೌಂಟ್​ನಲ್ಲಿ 213 ಕೋಟಿ ರೂ ಬ್ಯಾಲನ್ಸ್ ಹೊಂದಿದ್ದಾರೆ.
  • ಎಕ್ಸಿಸ್ ಬ್ಯಾಂಕ್​ನಲ್ಲಿ 40 ಕೋಟಿ ರೂ, ಐಒಬಿಯಲ್ಲಿ 25 ಕೊಟಿ ರೂ, ಎಚ್​ಡಿಎಫ್​ಸಿ ಬ್ಯಾಂಕಲ್ಲಿ 20 ಕೋಟಿ ರೂ, ಎಸ್​ಬಿಐನಲ್ಲಿ 15 ಕೋಟಿ ರೂ ಹೀಗೆ ವಿವಿಧ ಬ್ಯಾಂಕುಗಳಲ್ಲಿ 100 ಕೋಟಿ ರೂ ಮೊತ್ತದ ಫಿಕ್ಸೆಡ್ ಡೆಪಾಸಿಟ್​ಗಳನ್ನು ಹೊಂದಿದ್ದಾರೆ.
  • ಷೇರುಗಳಲ್ಲಿ ಅವರ ಹೂಡಿಕೆ 20 ಲಕ್ಷ ರೂಗಿಂತಲೂ ಕಡಿಮೆ. ಜಯನಗರ್ ಪ್ರಾಪರ್ಟಿ ಷೇರುಗಳಲ್ಲಿ 19.69 ಲಕ್ಷ ರೂ, ಐಒಬಿಯ ಷೇರುಗಳಲ್ಲಿ 9,600 ರೂ ಮತ್ತು ಸನ್ ಪೇಪರ್ ಮಿಲ್ ಷೇರುಗಳಲ್ಲಿ 25,000 ರೂ ಹೂಡಿಕೆ ಮಾಡಿದ್ದಾರೆ.
ವಿಜಯ್ ಅವರ ರಿಯಲ್ ಎಸ್ಟೇಟ್ ಹೂಡಿಕೆಗಳು
  • ವಿಜಯ್ ಅವರ ಸ್ಥಿರಾಸ್ತಿಗಳ ಮೌಲ್ಯ 220 ಕೋಟಿ ರೂನಷ್ಟು ಇದೆ. ನೀಲಂಕರೈ, ಸಾಲಿಗ್ರಾಮಮ್, ಮೈಲಾಪುರ್, ಎಗ್ಮೋರ್ ಮತ್ತಿತರೆಡೆ 115 ಕೋಟಿ ರೂ ಮೌಲ್ಯದ 10 ವಾಸ ಸ್ಥಳಗಳನ್ನು ಹೊಂದಿದ್ದಾರೆ.
  • ಪರಿವಾಕ್ಕಮ್, ತ್ಯಾಗರಾಜನಗರ್, ಶೋಲಿಂಗನಲ್ಲೂರ್, ಕೋಪ್ಪೂರ್​ನಲ್ಲಿ 82.8 ಕೋಟಿ ರೂ ಮೌಲ್ಯದ ಕಮರ್ಷಿಯಲ್ ಆಸ್ತಿಗಳನ್ನು ಹೊಂದಿದ್ದಾರೆ.
  • ವಾಟ್ಟಪಟ್ಟಿ ಗ್ರಾಮ್, ಕೊಡೈಕೆನಲಾಲ್​ನಲ್ಲಿ 20 ಲಕ್ಷ ರೂ ಮೌಲ್ಯದ ಕೃಷಿ ಭೂಮಿ ಹೊಂದಿದ್ದಾರೆ.
  • ಪೋರೂರ್, ಸಾಲಿಗ್ರಾಮಮ್ ಮತ್ತು ನೀಲಂಕರೈನಲ್ಲಿ 22 ಕೋಟಿ ರೂ ಮೌಲ್ಯದ ಕೃಷಿಯೇತರ ಜಮೀನು ಹೊಂದಿದ್ದಾರೆ.
ವಿಜಯ್ ಅವರ ಒಟ್ಟಾರೆ ಹೂಡಿಕೆ ಪ್ರವೃತ್ತಿ ಹೇಗೆ?

ಅವರ ಆಸ್ತಿಪಾಸ್ತಿ ಮತ್ತು ಹೂಡಿಕೆ ಗಮನಿಸಿದರೆ ವಿಜಯ್ ಅವರು ಸಂಪ್ರದಾಯಸ್ಥರಂತೆ ಗೋಚರವಾಗುತ್ತಾರೆ. ಹಿಂದಿನ ತಲೆಮಾರುಗಳ ಜನರ ರೀತಿಯಲ್ಲಿ ಹೆಚ್ಚಿನ ಹಣವು ಬ್ಯಾಂಕ್ ಡೆಪಾಸಿಟ್ ಮತ್ತು ರಿಯಲ್ ಎಸ್ಟೇಟ್​ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಷೇರುಗಳಲ್ಲಿ ಶೇ. 1ಕ್ಕಿಂತಲೂ ಕಡಿಮೆ ಹೂಡಿಕೆ ಮಾಡಿರುವುದು ಗಮನಾರ್ಹ.

ವಿಜಯ್ ಅವರ ವಾಹನ, ಒಡವೆ ಇತ್ಯಾದಿ ಆಸ್ತಿಗಳು

ವಿಜಯ್ ಅವರು ಐದು ಕಾರು ಮತ್ತು ಒಂದು ಬೈಕ್ ಹೊಂದಿದ್ದಾರೆ. ಇವೆಲ್ಲವೂ ಕಳೆದ ಐದಾರು ವರ್ಷಗಳಲ್ಲಿ ಖರೀದಿಸಿರುವಂಥವು. ಟೊಯೊಟಾ ಲೆಕ್ಸಸ್ 350, ಬಿಎಂಡಬ್ಲ್ಯು ಐ7, ಟೊಯೊಟಾ ವೆಲ್​ಫೈರ್, ಬಿಎಂಡಬ್ಲ್ಯು 530, ಮಾರುತಿ ಸ್ವಿಫ್ಟ್, ಟಿವಿಎಸ್ ಎಕ್ಸ್​ಎಲ್ ಸೂಪರ್ ಬೈಕ್ ವಾಹನಗಳಿವೆ ಎಂದು ವಿಜಯ್ ಘೋಷಿಸಿಕೊಂಡಿದ್ದಾರೆ. ಇದರಲ್ಲಿ ಟೊಯೊಟಾ ಲೆಕ್ಸಸ್ ಕಾರಿನ ಮೌಲ್ಯ ಮೂರು ಕೋಟಿ ರೂ ಇದೆ. ಬಿಎಂಡಬ್ಲ್ಯು ಐ7 ಕಾರಿನ ಮೌಲ್ಯ 2 ಕೋಟಿ ರೂಗೂ ಅಧಿಕ ಇದೆ. ವಿಜಯ್ ಅವರು 1.2 ಕೋಟಿ ರೂ ಮೌಲ್ಯದ 883 ಗ್ರಾಮ್ ತೂಕದ ಚಿನ್ನ ಮತ್ತು ಒಡವೆ ಆಸ್ತಿಗಳನ್ನು ಹೊಂದಿದ್ದಾರೆ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

 

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments