Homeಕನ್ನಡ ಫೊಕ್ಸ್Swamy Ayyappa - ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ - Top Devotional song

Swamy Ayyappa – ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ – Top Devotional song

Swamy Ayyappa - ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ - Top Devotional song

Swamy Ayyappa – ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ – Top Devotional song

ಹದಿನೆಂಟು ಬೆಟ್ಟಗಳ ಮಧ್ಯೆ ನೆಲೆನಿಂತ ಶಬರಿಮಲೆಯ ಮಹಾತ್ಮೆ | Things you dont known about Sabarimala - Kannada BoldSky

Read this-Devare Neenu Nijavappa  Kannada God songs Lyrics ದೇವರೇ ನೀನು ನಿಜವಪ್ಪ

ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಸ್ವಾಮಿಯೇ|
ಸ್ವಾಮಿ ಶರಣಂ ಅಯ್ಯಪ್ಪ ಶರಣಂ|
ಸ್ವಾಮಿಯೇ ಶರಣಂ ಅಯ್ಯಪ್ಪ

ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ||ಸ್ವಾಮಿ ಅಯ್ಯಪ್ಪ||

ತಲೆ ಮೇಲೆ ನಿನ್ನಾ ಇರುಮುಡಿಯು ಇರಲು
ಮನದಲ್ಲಿ ನೂರು ಆಸೆ ತುಂಬಿರಲು
ಸ್ವಾಮಿ ಅಯ್ಯಪ್ಪ ಶರಣು ಎನುತಲಿರಲು
ಕಲ್ಲು ಮುಳ್ಳೆಲ್ಲಾ ಕಾಲ್ಗೆ ಹೂವುಗಳು

ಎರಿಮೇಲಿಯಲ್ಲಿ ಕುಣಿಯುವರು ಎಲ್ಲಾ
ಆನಂದದಿಂದ ಹಾಡದವರಿಲ್ಲ
ಸ್ವಾಮಿ ಧೀಂತಕ ತೋಂ ಅಯ್ಯಪ್ಪ ಧೀಂತಕ ತೋಂ
ಅಯ್ಯಪ್ಪ ಧೀಂತಕ ತೋಂ ಸ್ವಾಮಿ ಧೀಂತಕ ತೋಂ
ಸ್ವಾಮಿ ಧೀಂತಕ ತೋಂ ತೋಂ
ಅಯ್ಯಪ್ಪ ಧೀಂತಕ ತೋಂ ತೋಂ
ಸ್ವಾಮಿ ಧೀಂತಕ ತೋಂ ತೋಂ

ಎರಿಮೇಲಿಯಲ್ಲಿ ಕುಣಿಯುವರು ಎಲ್ಲಾ
ಆನಂದದಿಂದ ಹಾಡದವರಿಲ್ಲ
ಎಂದೆಂದು ಅಲ್ಲಿ ಜಾತಿ ಮಾತಿಲ್ಲ
ಸ್ವಾಮಿ ಎದುರಲ್ಲಿ ಒಂದೇ ಜನರೆಲ್ಲ ||ಸ್ವಾಮಿ ಅಯ್ಯಪ್ಪ||

ಕಂಡಾಗ ಅಳುದಾ ನದಿಯನ್ನು ಕಣ್ಣು
ನೀರಲ್ಲಿ ಇಡಲು ಈ ಕಾಲ್ಗಲನ್ನು
ನೋವೆಲ್ಲ ಮರೆತು ಸಂತೋಷವೇನು
ಶರಣೆಂಬ ಕೂಗೆ ಇಲ್ಲ ಬೇರೇನು
ಕರಿಮಲೆಯ ಮೇಲೆ ನಡೆವಾಗ ನೀನು
ಎಲ್ಲೆಲ್ಲು ಬೀಸೊ ತಂಗಾಳಿ ಏನು
ಬಲು ಕಠಿನವಾದ ಆ ಬೆಟ್ಟವನ್ನು
ಏರಿ ಇಳಿವಾಗ ಆ ತ್ರಪ್ತಿ ಏನು ||ಸ್ವಾಮಿ ಅಯ್ಯಪ್ಪ||

ಪಂಪೆಯಲಿ ಸ್ನಾನ ದೇವರ ಧ್ಯಾನ|
ನೀಗುವುದು ಎಲ್ಲಾ ಆಯಾಸವನ್ನ
ನದಿಯಲ್ಲಿ ಬಿಡುವ ಹಣತೆಗಳ ಸಾಲು
ನೊಡುವುದೆ ಭಾಗ್ಯ ತೇಲಾಡುತಿರಲು
ಮೊದಲ ಸಲ ಗಿರಿಗೆ ಬರುವ ಜನರೆಲ್ಲಾ
ಶಬರಿಪೀಠಕೆ ನಮಿಸಿ ನಡೆಯುವರೆಲ್ಲಾ
ಶರಣ್ಗುತ್ತಿಆಲಿಲ್ ಅಂಬನ್ನು ಎಸೆದು
ನಡೆಯುವರು ಮುಂದೆ ಸ್ವಾಮಿಯ ನೆನೆದು
||ಸ್ವಾಮಿ ಅಯ್ಯಪ್ಪ||

ಕಡಲಲೆಯ ಹಾಗೆ ಬರುತಿರುವ ಜನರು
ಭಕ್ತಿಯೇ ಅಲ್ಲಿ ಎಲ್ಲರಾ ಉಸಿರು
ಹದಿನೆಂಟು ಮೆಟ್ಟಿಲಾ ಏರುತ್ತಲಿರಲು
ಎಲ್ಲರೆದೆಯಲ್ಲಿ ಹರುಷದಾ ಹೊನಲು
ತುಪ್ಪದಭಿಷೇಕಾ… , ಗಂಧದಭಿಷೇಕಾ…
ಧರ್ಮಶಾಸ್ತನಿಗೆ ಹಲವು ಅಭಿಷೇಕಾ..
ಕೋಟಿ ಕಣ್ಗಲಿಗೆ ಅದು ದೇವಲೋಕಾ
ನಿಜವಾಗಿ ಅಂದೇ ಬದುಕಿದ್ದು ಸಾರ್ಥಕ
||ಸ್ವಾಮಿ ಅಯ್ಯಪ್ಪ||

ಓಂ ಓಂ ಅಯ್ಯಪ್ಪ ಓಂ ಗುರುನಾಥ ಅಯ್ಯಪ್ಪ||3||

ವರುಷಕ್ಕೆ ಒಮ್ಮೆ ದೇವರಿಗೆ ಇಡುವ
ಒಡವೆಗಳು ಇರುವ ಪೆಟ್ಟಿಗೆಯು ಬರುವ
ಅ ದ್ರಶ್ಯವನ್ನು ಕಾಣುವುದೆ ಭಾಗ್ಯ
ನೂರು ಜನುಮಗಳು ತಂದಿರುವ ಪುಣ್ಯ
ಅಲಂಕಾರವೆಲ್ಲ ಮುಗಿದಾದ ಮೇಲೆ
ಕರ್ಪೂರದಿಂದ ಬೆಳಗುವ ವೇಳೆ
ಬಾನಲ್ಲಿ ಮೂಡಿ ಬಂತು ಜ್ಯೋತಿ
ಬೆಳಗುವುದು ಬೆಳಗುವುದು ಆನಂದ ಜ್ಯೋತಿ||2||
ಸ್ವಾಮಿಯೇ ಅಯ್ಯಪ್ಪ ಶರಣಂ ಶರಣಂ ಅಯ್ಯಪ್ಪ||5||

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×