HomeLyricsSiddappaji God songs Lyrics - Hogalaare halagurige Naanu

Siddappaji God songs Lyrics – Hogalaare halagurige Naanu

Hogalaare halagurige Naanu - Malavalli Mahadevaswamy Siddappaji Song

ಹೋಗಲಾರೆ ಹಲಗೂರಿಗೆ ನಾನು – Hogalaare halagurige Naanu – Malavalli Mahadevaswamy Siddappaji Song

ಲಕ್ಷಿಕನ ಮಗನ ತಂದು…. ಉ… ಊ…
ಭಿಕ್ಷುಕನ ಮಾ..ಡಿ ……ಈ… ಈ…


ಪಾಳ್ಳೇಗಾರನ ಮಗನ ತಂದೂ…..
ಪರದೇಸಿ ಮಾ..ಡಿ
ನನ್ನ ಜಾತಿಯವರ ಮನೆಗೆ
ಭಿಕ್ಷೆಗೆ ಕಳಿಸುವೆಯಾ….
ಧರ್ಮ ಗುರುವೇ ….
ಮಂಟೇದ ಲಿಂಗಯಾ……..ಆ ಆ.ಆ ಆ ಆ ಆ ಆ ಆ ಆ
ಹೋಗಲಾರೆ ಹಲಗೂರಿಗೆ ನಾನು….ಉ ಉ ಉ
ಮನ್ನಿಸೆನ್ನ ಧರ್ಮ ಗುರುವೆ ನೀನು

ಹೋಗಲಾರೆ ಹಲಗೂರಿಗೆ ನಾನು….ಉ ಉ ಉ
ಮನ್ನಿಸೆನ್ನ ಧರ್ಮ ಗುರುವೆ ನೀನು
ಹೋಗಲಾ…ರೆ
ಧಾನವ ತಿಳಿದಿಲ್ಲಾ….ಪಂಚಾಳದವರು
ಧರ್ಮವ ಅರಿತಿಲ್ಲಾ….ಆ ಆ ಆ ……
ನನ್ನೀ ವೇಷವ ನೋ..ಡಿ
ಜಂಗುಮನೆಂದು ಜರಿದು ನಗುವರಲ್ಲಾ
ಗುರುವೇ……ಪರಂಜ್ಯೋತಿ….
ಆ……..ಆ ಆ ಆ
ಊರುಟ್ಟಿದಾ ಕಾಲಕೂ
ಆ ಊರಿಗೆ ಯಾರು ಹೋದವರಲ್ಲಾ…… ಆ ಆ ಆ
ಹಿಂಡು ಮಾರಿಯರುಂಟು
ನಾ ಹೋದರೇ ನನಗೂ ಉಳಿವಿಲ್ಲಾ
ನಿಮ್ಮ ಪಾದದಲ್ಲೇ ಈ ಪ್ರಾಣ ಹೋಗಲಿ
ಈ ನನ್ನ ಕಣ್ಣೀರು ನಿಮಗೆ ಹರುವಾಗಲಿ
ನನ್ನನ್ನು ಕಳಿಸದಿರಿ ಸ್ವಾಮೀ
ನನ್ನನ್ನು ಕಳಿಸದಿರಿ…..
ಹೋಗಲಾರೆ ಹಲಗೂರಿಗೆ ನಾನು….ಉ ಉ ಉ
ಮನ್ನಿಸೆನ್ನ ಧರ್ಮ ಗುರುವೆ ನೀನು
ಹೋಗಲಾ…ರೆ
ಕಬ್ಬಿಣದ ಭಿಕ್ಷೆ ಕೇಳಲೂ ಪಂಚಾಳದವರು
ಸುಮ್ಮನೆ ಬಿಡುವರೇನಯ್ಯಾ …ಆ ಆ ಆ …

ಕಾಳಮ್ಮನ ಗುಡಿಗೆ ತಳ್ಳಿ
ನನ್ನನು ಬಲಿಯನ್ನೇ ಕೊಡುವರಯ್ಯಾ
ಗುರುವೇ….ಅಯ್ಯೋ …….
ಆ …….ಆ…. ಆಆಆ …..
ಏಳು ಜನ ಪಾಳ್ಳೆಗಾರರು ಜಿಲ್ಲಾಪುರವ
ಕಟ್ಟಿ ಆಳುವರಯ್ಯಾ …ಆ ಆ ಆ …
ಕಾದ ಗಟ್ಟಿಯಾ ಮೇ….ಲೆ..
ಕೂರಿಸಿ ನನ್ನ ಪವಡ ಮಾಡಿಸುವರಯ್ಯಾ
ಹಣೆ ಭಸ್ಮವಾ ನೋಡಿ
ಕುಲುಮೆ ಬೂದಿ ಅನ್ನುವರಲ್ಲಾ
ಕಪ್ಪುತಿಲಕವ ನೋಡಿ
ನಾಚಿಸಿ ನಗುವರಲ್ಲಾ
ಅಲ್ಲಿಗೆ ಹೇಗೋಗಲೀ…
ಗುರುವೇ ಅಲ್ಲಿಗೆ ಹೇಗೋಗಲೀ…

ಹೋಗಲಾರೆ ಹಲಗೂರಿಗೆ ನಾನು….ಉ ಉ ಉ
ಮನ್ನಿಸೆನ್ನ ಧರ್ಮ ಗುರುವೆ ನೀನು
ಹೋಗಲಾ…ರೆ…..
ತಂದೆ ತಾಯಿ ಇಲ್ಲದ ಈ…ತಬ್ಬಲಿಗೆ
ಎಲ್ಲವೂ ನೀನೆ ದೇವಾ…ಆ ಆ ಆ ಆ…
ನೀನೆ ಕೈ ಬಿಟ್ಟ ಮೇಲೇ… ಏ.. ಏ.. ಏ
ಮಂಟೇದ ಸ್ವಾಮೀ
ಕಾಯುವರಾರಿಲ್ಲಾ
ಗುರುವೇ …ಏ ಏ ಏ..ಅಪ್ಪಾಜೀ…..ಈ… ಈ
ಆ …….ಆ…. ಆ…ಆಆಆ …..
ನೊಂದು ಅಳುವಾಗ ಕಣ್ಣೀರೊರೆಸೋ
ತಾಯಮ್ಮ ನನಗಿಲ್ಲಾ …ಆ ಆ ಆ..
ಎಲ್ಲಿ ಹೋಗಲಿ ನಾನು… ಉ
ಪ್ರಭುವೇ ಯಾ…ರ ಸೇರಲಿ ನಾನು

ಬಂಧು ಬಳಗವ ನಾ ತೊರೆದಿರುವೇ…
ನಿನ್ನನೆ ನಂಬಿ ನಾ ಬಂದಿರುವೆ
ಕಾಯೋ ಧರ್ಮ ಗುರುವೇ ….ಸ್ವಾಮೀ
ಕಾಯೋ ಧರ್ಮ ಗುರುವೇ… ಏ.. ಏ… ಏ
ಹೋಗಲಾರೆ ಹಲಗೂರಿಗೆ ನಾನು….ಉ ಉ ಉ
ಮನ್ನಿಸೆನ್ನ ಧರ್ಮ ಗುರುವೆ ನೀನು
ಹೋಗಲಾ…ರೆ… ಏ… ಏ..
ಗುರುವೆ ನೀ ಕೇಳು ಬಸವ ಬೆಟ್ಟವನೇ
ಬೆಳ್ಳಿಯ ಮಾಡಿ ನಾ ತರುವೇ….ಏ… ಏ..
ಇನ್ನು ಬೇಕೆನ್ನು ಕುಂದೂರು ಬೆಟ್ಟವ
ಚಿನ್ನವ ಮಾಡಿ ನಾ ತರುವೇ …ಏ… ಏ… ಏ
ಪ್ರಾಣ ಬೇಕೆಂದು ಗುರುವೆ ನೀ…ಕೇಳು
ಪ್ರಾಣವನೇ ನಿನಗರ್ಪಿಸುವೇ…ಏ. ಏ. ಏ
ಕಾಪಾಡೋ …….ಓ.ಓ ಓ
ಮಂಟೆದಾ……..ಆ ಆ ಆ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
Banu Mitra
Banu Mitrahttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments