Shukravara bandaga song lyrics – ಶುಕ್ರವಾರ ಬಂದಾಗ ಶುಭದ ಶಕುನ ತಂದಾಗ
ಶುಕ್ರವಾರ ಬಂದಾಗ
ಶುಭದ ಶಕುನ ತಂದಾಗ
ಶುಭ್ರ ಮನದಿ ಪೂಜಿಸಿದಾಗ
ಒಲಿವಳಮ್ಮ ಭಾಗ್ಯಲಕ್ಷ್ಮಿ
ಶುಕ್ರವಾರ ಬಂದಾಗ
ಶುಭದ ಶಕುನ ತಂದಾಗ
ಶುಭ್ರ ಮನದಿ ಪೂಜಿಸಿದಾಗ
ಒಲಿವಳಮ್ಮ ಭಾಗ್ಯಲಕ್ಷ್ಮಿ
ಮನೆಯ ತುಂಬಾ ಮಕ್ಕಳು ಬೇಕೇ
ಕೊಡುವಳಮ್ಮ ಸಂತಾನ ಲಕ್ಷ್ಮಿ
ದಾರಿದ್ರ್ಯವೂ ನೀಗಬೇಕೆ
ಧನ ಕೊಡುವಳು ಧನಲಕ್ಷ್ಮಿ
ಶುಕ್ರವಾರ ಬಂದಾಗ
ಶುಭದ ಶಕುನ ತಂದಾಗ
ಶುಭ್ರ ಮನದಿ ಪೂಜಿಸಿದಾಗ
ಒಲಿವಳಮ್ಮ ಭಾಗ್ಯಲಕ್ಷ್ಮಿ
ಜ್ಞಾನ ಜ್ಯೋತಿ ಬೆಳೆಗಳು ಬೇಕೇ
ವಿದ್ಯೆ ತರುವ ವಿದ್ಯಾಲಕ್ಷ್ಮಿ
ತೊಟ್ಟ ಕೆಲಸ ಕೈಗೂಡಬೇಕೆ
ಜಯ ತರುವಳು ವಿಜಯಲಕ್ಷ್ಮಿ
ಶುಕ್ರವಾರ ಬಂದಾಗ
ಶುಭದ ಶಕುನ ತಂದಾಗ
ಶುಭ್ರ ಮನದಿ ಪೂಜಿಸಿದಾಗ
ಒಲಿವಳಮ್ಮ ಭಾಗ್ಯಲಕ್ಷ್ಮಿ
ಮನೆಯ ಕಣಜ ತುಂಬಬೇಕೆ
ಕೊಡುವಳಮ್ಮ ಧಾನ್ಯ ಲಕ್ಷ್ಮಿ
ಇಟ್ಟ ಹೆಜ್ಜೆ ಮುಂದಿಡಬೇಕೆ
ಧೈರ್ಯ ಕೊಡುವಳಮ್ಮ ಧೈರ್ಯ ಲಕ್ಷ್ಮಿ
ಶುಕ್ರವಾರ ಬಂದಾಗ
ಶುಭದ ಶಕುನ ತಂದಾಗ
ಶುಭ್ರ ಮನದಿ ಪೂಜಿಸಿದಾಗ
ಒಲಿವಳಮ್ಮ ಭಾಗ್ಯಲಕ್ಷ್ಮಿ
ಅರಿಶಿಣ ಕುಂಕುಮವನು ಬೆಳೆಸಿ
ನಲಿವಳಮ್ಮ ಆದಿಲಕ್ಷ್ಮಿ
ಮಂಗಳೆಯರ ಮನಸಿಗೆ
ಹರುಷ ತರುವ ಮಹಾಲಕ್ಷ್ಮಿ
ಶುಕ್ರವಾರ ಬಂದಾಗ
ಶುಭದ ಶಕುನ ತಂದಾಗ
ಶುಭ್ರ ಮನದಿ ಪೂಜಿಸಿದಾಗ
ಒಲಿವಳಮ್ಮ ಭಾಗ್ಯಲಕ್ಷ್ಮಿ
ಶುಕ್ರವಾರ ಬಂದಾಗ
ಶುಭದ ಶಕುನ ತಂದಾಗ
ಶುಭ್ರ ಮನದಿ ಪೂಜಿಸಿದಾಗ
ಒಲಿವಳಮ್ಮ ಭಾಗ್ಯಲಕ್ಷ್ಮಿ
Support Us 

