Rulesgella Don’t Care Trivikram, Manju fight again Bigg boss 11 – ರೂಲ್ಸ್ಗೆಲ್ಲಾ ಡೊಂಟ್ ಕೇರ್ ಹೊಡೆದಾಡಿಕೊಂಡ ತ್ರಿವಿಕ್ರಮ್ ,ಮಂಜು
ಬಿಗ್ ಬಾಸ್ ಕನ್ನಡ 11’ರ ಆಟ 100ನೇ ದಿನಕ್ಕೆ ಕಾಲಿಟ್ಟಿದೆ. ಫಿನಾಲೆ ಹಂತ ತಲುಪಲು ನಾನಾ ರೀತಿಯ ತಂತ್ರಗಳು ನಡೆಯುತ್ತಿವೆ. ಬಿಗ್ ಬಾಸ್ ಕೊಡುವ ಪ್ರತಿ ಟಾಸ್ಕ್‌ನಲ್ಲೂ ಅತ್ಯುತ್ತಮ ಪರ್ಫಾಮೆನ್ಸ್ ನೀಡಲು ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಎದುರಾಳಿಗಳನ್ನು ಹೆದರಿಸಿಕೊಂಡು ಮನೆಯೊಳಗೆ ಟಾಸ್ಕ್ ಆಡುತ್ತಿದ್ದಾರೆ. ಅದರಂತೆ ಬಿಗ್ ಬಾಸ್‌ನಲ್ಲಿ ಸರಣಿ ಟಾಸ್ಕ್‌ಗಳು ಆರಂಭವಾಗಿವೆ. ಇದೀಗ ಟಾಸ್ಕ್‌ವೊಂದರಲ್ಲಿ ತ್ರಿವಿಕ್ರಮ್ ಮತ್ತು ಉಗ್ರಂ ಮಂಜು ಹೊಡೆದಾಡಿಕೊಂಡಿದ್ದಾರೆ.
ಉಳಿದುಕೊಂಡಿರುವ 9 ಸ್ಪರ್ಧಿಗಳಿಗೆ ಬಿಗ್ ಬಾಸ್ ಸರಣಿ ಟಾಸ್ಕ್‌ಗಳನ್ನು ನೀಡಲಿದ್ದಾರೆ. ಈ ಟಾಸ್ಕ್‌ಗಳಲ್ಲಿ ಹೆಚ್ಚು ಚೆನ್ನಾಗಿ ಆಡಿ, ಯಾವುದೇ ಮೋಸ ಮಾಡದೇ ಗೆಲುವು ಸಾಧಿಸಬೇಕು. ಟಾಸ್ಕ್‌ಗಳಲ್ಲಿ ಎಲ್ಲ ನಿಯಮಗಳನ್ನು ಸರಿಯಾಗಿ ಪಾಲಿಸಿ ಗೆಲುವನ್ನು ಪಡೆಯುವ ಸ್ಪರ್ಧಿಗಳಿಗೆ ಗ್ರ‍್ಯಾಂಡ್ ಫಿನಾಲೆ ಟಿಕೆಟ್ ಸಿಗಲಿದೆ. ಅಂದರೆ ಸ್ಪರ್ಧಿಗಳು ಆಡುವ ಟಾಸ್ಕ್ ಮೇಲೆ ಅವರ ಫಿನಾಲೆ ಟಿಕೆಟ್ ಖಾತರಿಯಾಗುತ್ತದೆ ಎಂದು ಬಿಗ್ ಬಾಸ್ ಹೇಳಿದ್ದಾರೆ
Read this – Fines will be imposed for thrown garbage on bangalore university campus
ರಜತ್ ಈ ವಾರ ಮನೆಯ ಕ್ಯಾಪ್ಟನ್ ಆದ ಮೇಲೆ ಬಿಗ್ ಬಾಸ್ ಮನೆಯಲ್ಲಿ ಹೊಸ ಹೊಸ ಟಾಸ್ಕ್‌ಗಳು ವೇಗ ಪಡೆದುಕೊಂಡಿವೆ. ಫಿನಾಲೆಗೆ ಹೋಗುವ ಆಸೆಯಿಂದ ಎಲ್ಲರೂ ಟಾಸ್ಕ್ ಪೂರ್ಣಗೊಳಿಸುವ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಇಷ್ಟು ದಿನ ಆಡಿದ್ದಕ್ಕಿಂತ ಈ ಕೊನೆ ಮೂರು ವಾರಗಳಲ್ಲಿ 9 ಸ್ಪರ್ಧಿಗಳು ಆಡುವ ಟಾಸ್ಕ್ ಅತ್ಯಂತ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿರುತ್ತವೆ.
ಇನ್ನು ಇಂದಿನ ಟಾಸ್ಕ್‌ನಲ್ಲಿ ಉಗ್ರಂ ಮಂಜು ಹಾಗೂ ತ್ರಿವಿಕ್ರಮ್ ಮಧ್ಯೆ ಸಖತ್ ವಾಕ್ಸಮರ ನಡೆದಿದೆ. ಟಾಸ್ಕ್‌ನಲ್ಲಿ ತ್ರಿವಿಕ್ರಮ್ ಮುಖಕ್ಕೆ ಉಗ್ರಂ ಮಂಜು ಹೊಡೆದಿದ್ದಾರೆ. ಇದಕ್ಕೆ ಕೋಪಗೊಂಡಿರುವ ತ್ರಿವಿಕ್ರಮ್ ಅಷ್ಟು ಜೋರಾಗಿ ಹೊಡೆದರೆ ಹೆಂಗೆ ಎಂದು ಪ್ರಶ್ನೆ ಮಾಡಿದ್ದಲ್ಲದೇ ನಾನು ಹೊಡೆಯುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಮಂಜು ನಾನು ಎಲ್ಲಿ ತಳ್ಳಾಡಿದೆ, ಎಲ್ಲಿ ಹೊಡೆದಾಡಿದೆ ಎಂದು ಕೇಳಿದ್ದಾರೆ. ಬಳಿಕ ಟಾಸ್ಕ್‌ನಲ್ಲಿ ಮಂಜುಗೆ ತ್ರಿವಿಕ್ರಮ್ ಓಡಾಡಿಸಿ ಹೊಡೆದಿದ್ದಾರೆ. ಈ ವೇಳೆ, ನಿಯಮ ಉಲ್ಲಂಘನೆ ಮಾಡಿದ್ರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.