Renukaswamy Probe Case Filed-ದರ್ಶನ್ ಕೇಸ್‌ನಲ್ಲಿ ಸ್ಪೋಟಕ ಟ್ವಿಸ್ಟ್!
ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ A2 ಪರ ವಕೀಲರು ಸಲ್ಲಿಸಿದ್ದ ಅರ್ಜಿಗೆ ಇಂದು ಎಸ್ ಪಿಪಿ ಅಕ್ಷೇಪಣೆ ಸಲ್ಲಿಕೆ ಮಾಡಲಿದ್ದಾರೆ. ಕೊಲೆ ಪ್ರಕರಣದ ಆರೋಪಿಗಳ ಮೊಬೈಲ್ ಸೀಜ್ ಮಾಡೊರುವುದೇ ಬೇರೆ ಸ್ಥಳದಲ್ಲಿ. ಆದ್ರೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಸೀಜ್ ಮಾಡಿರುವುದಾಗಿ ಉಲ್ಲೇಖ ಮಾಡಿದ್ದಾರೆ.
Read this : Murder Case ಶಿವಮೊಗ್ಗ ಎಸ್ಎಸ್ಎಲ್ಸಿ ವಿದ್ಯಾರ್ಥಿ ಕೊಲೆ ಪ್ರಕರಣ |Kannada Folks
ಜೊತೆಗೆ ತನಿಖಾಧಿಕಾರಿ ಹಾಕಿರುವ ಪೋಟೊ ಪ್ರತಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯದು ಅಲ್ಲ. ಹೀಗಾಗಿ ತನಿಖಾಧಿಕಾರಿ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನಿನ್ನೆ ಅರ್ಜಿ ಸಲ್ಲಿಕೆ ಮಾಡಿದ್ರು. ಈ ಸಂಬಂಧ ಇಂದು ಮಧ್ಯಾಹ್ನ ಎಸ್ ಪಿ ಪಿ ಪ್ರಸನ್ನಕುಮಾರ್ ಅವರು ಆರೋಪಿ ಪರ ವಕೀಲರು ಸಲ್ಲಿಕೆ ಮಾಡಿರುವ ಅರ್ಜಿಗೆ ಉತ್ತರಿಸಲಿದ್ದಾರೆ.
ಇನ್ನೂ ನ್ಯೂಸ್ 18 ಜೊತೆ ಮಾತನಾಡಿದ ಎ೩ ಪವನ್ ಪರ ವಕೀಲ ಸುಧನ್ವ ಕೆಲವೊಂದು ವಿಚಾರವನ್ನು ಹಂಚಿಕೊಂಡಿದ್ದಾರೆ.ನಮ್ಮ ಕಕ್ಷಿದಾರರೆ ಮಾಹಿತಿ ಕೊಟ್ಟಿದ್ದರು. ನಂತರ ನಮ್ಮ ವಕೀಲರು ಸ್ಟೇಷನ್ ಗೆ ಹೋಗಿ ಪರಿಶೀಲನೆ ನಡೆಸಿದಾಗ ವ್ಯತ್ಯಾಸ ಕಂಡು ಬಂತು.ಜೊತೆಗೆ ಮಹಜರು ಪೋಟೊದಲ್ಲಿ ಟೈಲ್ಸ್ ವ್ಯತ್ಯಾಸ ಇದೆ. ಇದು ಪೊಲೀಸರು ಮಿಸ್ಟೆಕ್ ನಿಂದ ಮಾಡಿರೋದಲ್ಲ. ಪೊಲೀಸರು ಉದ್ದೇಶ ಪೂರ್ವಕವಾಗಿ ಮಾಡಿರುವುದು. ಹೀಗಾಗಿ ಇದು ಕೇಸ್ ವಿಚಾರಣೆ ಮೇಲೆ ಪರಿಣಾಮ ಬೀರುತ್ತೆ.ಹೀಗಾಗಿ ತನಿಖಾಧಿಕಾರಿ ಮೇಲೆ ಕ್ರಮ ಆಗಬೇಕು. ಹಾಗೂ ನ್ಯಾಯಾಧೀಶರು ಖುದ್ದಾಗಿ ಭೇಟಿ ನೀಡಬೇಕು ಅಂತಾ ಅರ್ಜಿ ಹಾಕಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


