HomeNewsRCB vs SRH - ಎಸ್‌ರ್‌ಎಚ್‌ ವಿರುದ್ಧ ಸೋತರೂ ಆರ್‌ಸಿಬಿ ಕ್ವಾಲಿಫೈಯರ್ 1ಕ್ಕೆ ಪ್ರವೇಶಿಸಿದ್ದೇ ರೋಚಕ

RCB vs SRH – ಎಸ್‌ರ್‌ಎಚ್‌ ವಿರುದ್ಧ ಸೋತರೂ ಆರ್‌ಸಿಬಿ ಕ್ವಾಲಿಫೈಯರ್ 1ಕ್ಕೆ ಪ್ರವೇಶಿಸಿದ್ದೇ ರೋಚಕ

RCB Vs SRH - ಸೋತರೂ ಗೆದ್ದಂತಾದ ಆರ್‌ಸಿಬಿ ಕ್ವಾಲಿಫೈಯರ್ 1 ಖಚಿತ

RCB vs SRH – ಸೋತರೂ ಗೆದ್ದಂತಾದ ಆರ್‌ಸಿಬಿ ಕ್ವಾಲಿಫೈಯರ್ 1 ಖಚಿತ

 

ಹೈದರಾಬಾದ್‌ನಲ್ಲಿ ಶುಕ್ರವಾರ (ಮೇ 22) ನಡೆದ ಐಪಿಎಲ್‌ 2026ರ ರೋಚಕ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 55 ರನ್‌ಗಳ ಅಂತರದಿಂದ ಸೋಲನುಭವಿಸಿತು. ಆದರೆ ಸೋಲಿನ ನಡುವೆಯೂ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿ ಒಂದನ್ನು ಖಚಿತಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಹೈದರಾಬಾದ್ ತಂಡವು ಇಶಾನ್ ಕಿಶಾನ್‌, ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್ ಸಿಡಿಸಿದ ಸ್ಫೋಟಕ ಅರ್ಧಶತಕಗಳ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 255 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆದರೆ ಆರ್‌ಸಿಬಿ 200 ರನ್‌ ಗಳಿಸಿ 55 ರನ್‌ಗಳಿಂದ ಸೋಲನುಭವಿಸಿತು.

ಇನ್ನಷ್ಟು ಅನ್ವೇಷಿಸಿ ಕ್ರೀಡಾ ಸುದ್ದಿ Movies ಪ್ರವಾಸ ಮಾರ್ಗದರ್ಶಿ ಕನ್ನಡ ಲೈವ್ ಸುದ್ದಿ ರಾಜಕೀಯ ವಿಶ್ಲೇಷಣೆ ಎಸ್‌ಆರ್‌ಎಚ್ ಪರ ಮಿಂಚಿದ ಕಿಶನ್, ಅಭಿಷೇಕ್ ಕ್ಲಾಸೆನ್ ಎಸ್‌ಆರ್‌ಎಚ್‌ ಪರ ಬ್ಯಾಟ್‌ ಬೀಸಿದ ಇಶಾನ್ ಕಿಶನ್ ಆಕ್ರಮಣಕಾರಿ ಆಟದ ಮೂಲಕ ಕೇವಲ 46 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್‌ಗಳ ಸಹಿತ 79 ರನ್‌ ಕಲೆಹಾಕಿದರು. ಅಭಿಷೇಕ್ ಶರ್ಮಾ 56(22), ಟ್ರಾವಿಸ್‌ ಹೆಡ್‌ 26(26), ಹೆನ್ರಿಚ್ ಕ್ಲಾಸೆನ್ 24 ಎಸೆತಗಳಲ್ಲಿ 51 ರನ್ ಚಚ್ಚಿದರೆ, ನಿತೀಶ್ ಕುಮಾರ್ ರೆಡ್ಡಿ ಅಜೇಯ 29 ರನ್‌ ಸಿಡಿಸಿ ತಂಡದ ಮೊತ್ತವನ್ನು 255ಕ್ಕೆ ತಲುಪಿಸಿದರು.

ದುಬಾರಿಯಾದ ಆರ್‌ಸಿಬಿ ಬೌಲರ್ಸ್ ಆರ್‌ಸಿಬಿ ಪರ ಬೌಲಿಗ್ ಮಾಡಿದ ಸ್ಟಾರ್ ಬೌಲರ್‌ಗಳೇ 50ಕ್ಕೂ ಅಧಿಕ ರನ್‌ಗಳನ್ನು ಬಿಟ್ಟುಕೊಟ್ಟು ದುಬಾರಿ ಎನಿಸಿಕೊಂಡರು. ಜೋಶ್ ಹ್ಯಾಜಲ್‌ವುಡ್‌ ನಾಲ್ಕು ಓವರ್‌ ಬೌಲಿಂಗ್ ಎಸೆದು ಯಾವುದೇ ವಿಕೆಟ್‌ ಇಲ್ಲದೆ 55 ರನ್‌ ಬಿಟ್ಟುಕೊಟ್ಟರೆ, ಭುವನೇಶ್ವರ್ ಕುಮಾರ್ 51, ರಸಿಖ್ ದಾರ್ ಸಲಾಂ ಎರಡು ವಿಕೆಟ್‌ ಕಿತ್ತರೂ 52 ರನ್‌ಗಳನ್ನು ನೀಡಿ ದುಬಾರಿಯಾದರು. ಅಲ್ಲದೆ ಸುಯಶ್‌ ಶರ್ಮಾ (36/1), ರೊಮಾರಿಯೋ ಶೆಫರ್ಡ್‌ 37, ಕೃನಾಲ್‌ ಪಾಂಡ್ಯ (24/1) ರನ್‌ ಬಿಟ್ಟುಕೊಟ್ಟರು.

Who won IPL 2026 match Yesterday? SRH vs RCB Match Results, Top Players, Match Summary & Award Winners - myKhel

Read here: RCB vs SRH Who’s Stronger-RCB vs SRH ಯಾರು ಬಲಿಷ್ಠ?

Powered By ಆರ್‌ಸಿಬಿ ಪರ ಯಾರು ಎಷ್ಟು ರನ್‌ ಗಳಿಸಿದರು?
ಬೃಹತ್ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಪಂದ್ಯ ಗೆಲ್ಲುವುದು ಒಂದೆಡೆಯಾದರೆ, ಅಗ್ರ ಎರಡು ಸ್ಥಾನ ಖಚಿತಪಡಿಸಿಕೊಳ್ಳಲು ಕನಿಷ್ಠ 166 ರನ್ ಗಳಿಸಬೇಕಾದ ಅಗತ್ಯವಿತ್ತು. ಈ ಕೆಲಸವನ್ನು ನಾಯಕ ರಜತ್ ಪಾಟಿದಾರ್ ಹಾಗೂ ಕೃನಾಲ್ ಪಾಂಡೆ ಜೊತೆ ಸೇರಿ ಅಚ್ಚುಕಟ್ಟಾಗಿ ನಿಭಾಯಿಸಿದರು. ಆರ್‌ಸಿಬಿ ಪರ ನಾಯಕ ಪಾಟಿದಾರ್ 56(39), ದೇವದತ್ ಪಡಿಕ್ಕಲ್ 21(14), ವೆಂಕಟೇಶ್ ಅಯ್ಯರ್ 44 (19), ಕೃನಾಲ್ ಪಾಂಡ್ಯ ಅಜೇಯ 41 (31), ಟಿಮ್ ಡೇವಿಡ್ ಅಜೇಯ 15(7) ರನ್‌ಗಳೊಂದಿಗೆ 200ರ ಗಡಿ ಮುಟ್ಟಿಸಿದರು.

ಎಸ್‌ಆರ್‌ಎಚ್ ಮಾರಕ ಬೌಲಿಂಗ್ ದಾಳಿ ಎಸ್‌ಆರ್‌ಎಚ್ ಪರ ಬೌಲರ್‌ಗಳು ಉತ್ತಮ ಬೌಲಿಂಗ್ ದಾಳಿ ನಡೆಸಿ ಆರ್‌ಸಿಬಿ ರನ್‌ ವೇಗಕ್ಕೆ ಕಡಿವಾಣ ಹಾಕಿದರು. ನಾಯಕ ಪ್ಯಾಟ್‌ ಕಮ್ಮಿನ್ಸ್ ಯಾವುದೇ ವಿಕೆಟ್ ಇಲ್ಲದೆ 48 ರನ್‌ಗಳನ್ನು ನೀಡಿ ದುಬಾರಿ ಎಸಿನಿಕೊಂಡರು. ಆದರೆ ಇಶಾನ್ ಮಾಲಿಂಗ 2 ವಿಕೆಟ್‌ ಪಡೆದರೆ, ಸಕೀಚ್ ಹುಸೈನ್ ಹಾಗೂ ಟ್ರಾವಿಡ್‌ ಹೆಡ್‌ ತಲಾ ಒಂದು ವಿಕೆಟ್‌ ಪಡೆದು ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಒಟ್ಟಿನಲ್ಲಿ ಹೇಳುವುದಾದರೆ ಈ ಫಲಿತಾಂಶದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕ್ವಾಲಿಫೈಯರ್ 1 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಮತ್ತೊಂದೆಡೆ ಸನ್‌ರೈಸರ್ಸ್ ಹೈದರಾಬಾದ್ ತಂಡವು ಎಲಿಮಿನೇಟರ್ ಪಂದ್ಯಕ್ಕಾಗಿ ತನ್ನ ಎದುರಾಳಿ ಯಾರು ಎಂದು ತಿಳಿದುಕೊಳ್ಳಲು ಕಾಯಬೇಕಿದೆ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments