RCB Rename Soon-ಆರ್ಸಿಬಿ ಹೆಸರು ಬದಲಾವಣೆ?
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವನ್ನು ಆದಿತ್ಯ ಬಿರ್ಲಾ ಸಮೂಹವು ಸುಮಾರು 16,706 ಕೋಟಿ ರೂ.ಗೆ ಖರೀದಿಸಿದೆ. ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್ಎಲ್) ನಿಂದ ಈ ಮಾರಾಟ ನಡೆದಿದೆ. ಮದ್ಯ ಬ್ರ್ಯಾಂಡ್ ಪ್ರಚಾರಕ್ಕೆ ತಂಡದ ಹೆಸರನ್ನು ಬಳಸಿದ್ದ ಕಾರಣ, ಹೊಸ ಮಾಲೀಕರು ಹೆಸರು ಬದಲಾಯಿಸುವ ಸಾಧ್ಯತೆ ಇದೆ.
Read this : T20 League 2027 ರಲ್ಲಿ ಪುರುಷರ ಮತ್ತು ಮಹಿಳಾ ಟೂರ್ನಿಯನ್ನು ನ್ಯೂಜಿಲೆಂಡ್ ಕ್ರಿಕೆಟ್ ಆರಂಭಿಸಲಿದೆ.
ಆದಿತ್ಯ ಬಿರ್ಲಾ ಸಮೂಹ ಸುಮಾರು 16,706 ಕೋಟಿ ರೂಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರ್ಯಾಂಚೈಸಿಯನ್ನು ಖರೀದಿ ಮಾಡಿದೆ. ಇವರ ಜೊತೆ ಬ್ಲ್ಯಾಕ್ಸ್ಟೋನ್ ಇಕ್ವಿಟಿ ಫರ್ಮ್, ಅಮೆರಿಕದ ಹೂಡಿಕೆದಾರ ಡೇವಿಡ್ ಬ್ಲಿಟ್ಝರ್ ಒಡೆತನದ ಬೋಲ್ಟ್ ವೆಂಚರ್ಸ್ ಮತ್ತು ಟೈಮ್ಸ್ ಆಫ್ ಇಂಡಿಯಾ ಮಾಧ್ಯಮ ಸಮೂಹ ಕೂಡ ಖರೀದಿಯಲ್ಲಿ ಕೈ ಜೋಡಿಸಿದೆ. ಈಗ ಆರ್ಸಿಬಿ ಹೆಸರು ಬದಲಾವಣೆ ಸಾಧ್ಯತೆ ಬಲವಾಗಿ ಕಾಣಿಸುತ್ತಿದೆ. ಮಾರ್ಚ್ 28ರಂದು ಆರ್ಸಿಬಿ ಈ ಸೀಸನ್ನ ಮೊದಲ ಪಂದ್ಯ ಆಡಲಿದೆ. ಅದಕ್ಕೂ ಮೊದಲು ಮಾರಾಟ ವಹಿವಾಟು ನಡೆದಿದೆ.
ಆರ್ಸಿಬಿ ಒಡೆತನವು ಈ ಮೊದಲು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್ಎಲ್) ಬಳಿ ಇತ್ತು. ಈ ಕಂಪನಿಯು ಲಂಡನ್ ಮೂಲದ ಯುಕೆ–ಡಿಯಾಜಿಯೊದ ಅಂಗಸಂಸ್ಥೆಯಾಗಿದೆ. ಯುಎಸ್ಎಲ್ ಮದ್ಯ ತಯಾರಿಕಾ ಕಂಪನಿ. ಹೀಗಾಗಿ, ತಮ್ಮ ವಿಸ್ಕಿ ಬ್ರ್ಯಾಂಡ್ ರಾಯಲ್ ಚಾಲೆಂಜ್ ಅಥವಾ ಆರ್ಸಿ ಪ್ರಮೋಷನ್ ಮಾಡುವ ಉದ್ದೇಶದಿಂದ ರಾಯಲ್ ಚಾಲೆಂಜರ್ಸ್ ಎಂದು ತಂಡಕ್ಕೆ ಹೆಸರನ್ನು ಇಟ್ಟಿದ್ದರು ವಿಜಯ್ ಮಲ್ಯ. ಈಗ ಐಪಿಎಲ್ ತಂಡ ಬೇರೆಯವರ ತೆಕ್ಕೆಗೆ ಹೋಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಬ ಹೆಸರೇ ಇದ್ದರೆ ಈಗಲೂ ರಾಯಲ್ ಚಾಲೆಂಜ್ ಬ್ರ್ಯಾಂಡ್ ಪ್ರಮೋಷನ್ ಮಾಡಿದಂತೆ ಆಗುತ್ತದೆ. ಈ ಕಾರಣದಿಂದ ಆದಿತ್ಯ ಬಿರ್ಲಾ ಗ್ರೂಪ್ ಹೆಸರು ಬದಲಾವಣೆ ಮಾಡುವ ನಿರ್ಧಾರಕ್ಕೆ ಬರಬಹುದು. ಈ ಮೊದಲು ಸಾಕಷ್ಟು ಐಪಿಎಲ್ ತಂಡಗಳ ಹೆಸರು ಬದಲಾದ ಉದಾಹರಣೆ ಇದೆ. ಸದ್ಯ ಆರ್ಸಿಬಿಯ ಪುರುಷ ಹಾಗೂ ಮಹಿಳಾ ತಂಡ ಎರಡನ್ನೂ ಆದಿತ್ಯ ಬಿರ್ಲಾ ಖರೀದಿ ಮಾಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಬುದು ಈಗ ಕೇವಲ ಹೆಸರಾಗಿ ಉಳಿದುಕೊಂಡಿಲ್ಲ, ಅದೊಂದು ಭಾವನೆ ಆಗಿದೆ. ಅದರಲ್ಲೂ ಆರ್ಸಿಬಿ ಎಂಬ ಶಬ್ದಕ್ಕೆ ತೂಕ ಹೆಚ್ಚು. ಮುಂದಿನ ದಿನಗಳಲ್ಲಿ ಆರ್ಸಿಬಿ ಎಂಬ ಶಾರ್ಟ್ಫಾರ್ಮ್ ಬರುವಂತೆ ಆದಿತ್ಯ ಬಿರ್ಲಾ ಗ್ರೂಪ್ ಹೆಸರನ್ನು ಬದಲಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಈ ಮೊದಲು ಡಿಯಾಜಿಯೊ ತನ್ನ ಹೇಳಿಕೆಯಲ್ಲಿ ಆರ್ಸಿಬಿ ಮಾರಾಟ ವಿಷಯವನ್ನು ಉಲ್ಲೇಖ ಮಾಡಿತ್ತು. ತಮ್ಮ ಕಂಪನಿಗೂ, ಕ್ರಿಕೆಟ್ ಕ್ಷೇತ್ರಕ್ಕೂ ಯಾವುದೇ ಸಂಬಂಧ ಇಲ್ಲದ ಕಾರಣ ಮಾರ್ಚ್ 31ರೊಳಗೆ ತಂಡವನ್ನು ಮಾರುವುದಾಗಿ ಡಿಯಾಜಿಯೊ ಕಳೆದ ನವೆಂಬರ್ನಲ್ಲಿ ಹೇಳಿತ್ತು.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


