HomeNewsRajamouli Shoots Varanasi in Georgia-ಯೂರೋಪ್‌ನಲ್ಲಿ ವಾರಣಾಸಿ ಚಿತ್ರೀಕರಣ

Rajamouli Shoots Varanasi in Georgia-ಯೂರೋಪ್‌ನಲ್ಲಿ ವಾರಣಾಸಿ ಚಿತ್ರೀಕರಣ

Epic film shooting underway in scenic Europe

Rajamouli Shoots Varanasi in Georgia-ಯೂರೋಪ್‌ನಲ್ಲಿ ವಾರಣಾಸಿ ಚಿತ್ರೀಕರಣ

Varanasi movie: ರಾಜಮೌಳಿ ರಾಮಾಯಣದ ಕತೆಯನ್ನು ಫ್ಯಾಂಟಸಿ, ಆಕ್ಷನ್ ಥ್ರಿಲ್ಲರ್ ಕತೆಯೊಟ್ಟಿಗೆ ಬೆಸೆದು ಅದ್ಧೂರಿಯಾಗಿ ‘ವಾರಣಾಸಿ’ ಸಿನಿಮಾವನ್ನು ಚಿತ್ರೀಕರಣ ಮಾಡುತ್ತಿದ್ದು, ಸಿನಿಮಾವನ್ನು ಭಾರತ ಮಾತ್ರವೇ ಅಲ್ಲದೆ ವಿವಿಧ ದೇಶಗಳಲ್ಲಿಯೂ ಚಿತ್ರೀಕರಣ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾವನ್ನು ಮಸೈಮಾರಾ ಸೇರಿದಂತೆ ಇನ್ನೂ ಕೆಲವು ಪ್ರಮುಖ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಇದೀಗ ರಾಜಮೌಳಿ ಅವರು ತಮ್ಮ ತಂಡವನ್ನು ಕಡೆದುಕೊಂಡು ಯೂರೋಪಿನ ಸುಂದರ ದೇಶಕ್ಕೆ ಹೋಗಿದ್ದಾರೆ.ಯೂರೋಪಿನ ಸುಂದರ ದೇಶದಲ್ಲಿ 'ವಾರಣಾಸಿ' ಚಿತ್ರೀಕರಣ - Kannada News | Rajamouli  shooting his movie Varanasi in Georgia | TV9 Kannada

Read this : Kalki 2898 AD Sequel Filming Begins ಕಲ್ಕಿ ಸೀಕ್ವೆಲ್|Kannada Folks

ರಾಜಮೌಳಿ (Rajamouli) ನಿರ್ದೇಶಿಸಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ‘ವಾರಣಾಸಿ’ ಸಿನಿಮಾ ವಿಶ್ವದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ರಾಜಮೌಳಿ ರಾಮಾಯಣದ ಕತೆಯನ್ನು ಫ್ಯಾಂಟಸಿ, ಆಕ್ಷನ್ ಥ್ರಿಲ್ಲರ್ ಕತೆಯೊಟ್ಟಿಗೆ ಬೆಸೆದು ಅದ್ಧೂರಿಯಾಗಿ ಸಿನಿಮಾವನ್ನು ಚಿತ್ರೀಕರಣ ಮಾಡುತ್ತಿದ್ದು, ಸಿನಿಮಾವನ್ನು ಭಾರತ ಮಾತ್ರವೇ ಅಲ್ಲದೆ ವಿವಿಧ ದೇಶಗಳಲ್ಲಿಯೂ ಚಿತ್ರೀಕರಣ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾವನ್ನು ಮಸೈಮಾರಾ ಸೇರಿದಂತೆ ಇನ್ನೂ ಕೆಲವು ಪ್ರಮುಖ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಇದೀಗ ರಾಜಮೌಳಿ ಅವರು ತಮ್ಮ ತಂಡವನ್ನು ಕಡೆದುಕೊಂಡು ಯೂರೋಪಿನ ಸುಂದರ ದೇಶಕ್ಕೆ ಹೋಗಿದ್ದಾರೆ.

ಮಹೇಶ್ ಬಾಬು ಮತ್ತು ಪೃಥ್ವಿರಾಜ್ ಸುಕುಮಾರ್ ಅವರ ನಡುವಿನ ಭರ್ಜರಿ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣಕ್ಕಾಗಿ ರಾಜಮೌಳಿ ಅವರು ಇದೀಗ ಜಾರ್ಜಿಯಾ ದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರನ್ನು ಬಿಟ್ಟು ಮಹೇಶ್ ಬಾಬು ಮತ್ತು ಪೃಥ್ವಿರಾಜ್ ಸುಕುಮಾರ್ ಅವರುಗಳು ಮಾತ್ರವೇ ಜಾರ್ಜಿಯಾಕ್ಕೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಜಾರ್ಜಿಯಾ ದೇಶದಲ್ಲಿ ನಾಯಕ ಹಾಗೂ ವಿಲನ್ ನಡುವ ಭರ್ಜರಿ ಆಕ್ಷನ್ ಸೀಕ್ವೆನ್ಸ್ ಅನ್ನು ಚಿತ್ರೀಕರಣ ಮಾಡಲಾಗುವುದಂತೆ. ಇದಕ್ಕಾಗಿ ನಟರುಗಳ ಜೊತೆಗೆ ದೊಡ್ಡ ತಾಂತ್ರಿಕ ವರ್ಗವನ್ನು ರಾಜಮೌಳಿ ಕರೆದುಕೊಂಡು ಹೋಗುತ್ತಿದ್ದಾರೆ.

ಈಗಾಗಲೇ ವಾರಣಾಸಿಯಲ್ಲಿ ಕೆಲವೊಂದು ಪ್ರಮುಖ ದೃಶ್ಯಗಳ ಚಿತ್ರೀಕರಣ ಮುಗಿಸಿರುವ ರಾಜಮೌಳಿ, ಮುಂದಿನ ಹಂತದ ಚಿತ್ರೀಕರಣಕ್ಕಾಗಿ ಜಾರ್ಜಿಯಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲಿನ ಕಡಿದಾದ ಬೆಟ್ಟಗಳು ಮತ್ತು ಸುಂದರ ಪರಿಸರದಲ್ಲಿ ಭರ್ಜರಿ ಆಕ್ಷನ್ ಸೀಕ್ವೆನ್ಸ್‌ಗಳನ್ನು ಚಿತ್ರೀಕರಿಸಲು ಪ್ಲಾನ್ ಮಾಡಲಾಗಿದೆ. ವಿಶೇಷವೆಂದರೆ, ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಅವರ ಮತ್ತು ಮಹೇಶ್ ಬಾಬು ನಡುವಿನ ಜಿದ್ದಾಜಿದ್ದಿನ ದೃಶ್ಯಗಳು ಜಾರ್ಜಿಯಾದಲ್ಲಿ ಸೆರೆಯಾಗಲಿವೆ.

‘ವಾರಣಾಸಿ’ ಸಿನಿಮಾವು 2027ರ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಅರ್ಧ ಭಾಗದ ಚಿತ್ರೀಕರಣ ಮುಗಿಸಲಾಗಿದೆ ಎನ್ನಲಾಗುತ್ತಿದೆ. ಸಿನಿಮಾವನ್ನು ಹಾಲಿವುಡ್ ಗುಣಮಟ್ಟಕ್ಕೆ ಸರಿ ಸಮವಾಗಿ ಚಿತ್ರೀಕರಣ ಮಾಡಲಾಗುತ್ತಿದೆ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×