HomeNewsPM Modi to Arrive in Udupi on November 28 - ಪ್ರಧಾನಿ ಮೋದಿ...

PM Modi to Arrive in Udupi on November 28 – ಪ್ರಧಾನಿ ಮೋದಿ ಆಗಮನ

PM Modi to Arrive in Udupi on November 28 - ಪ್ರಧಾನಿ ಮೋದಿ ಆಗಮನ

PM Modi to Arrive in Udupi on November 28 – ಪ್ರಧಾನಿ ಮೋದಿ ಆಗಮನ

ಉಡುಪಿ: ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ನ.28ರಂದು ಉಡುಪಿ ಶ್ರೀಕೃಷ್ಣಮಠಕ್ಕೆ ಆಗಮಿಸುತ್ತಿದ್ದು, ಹೆಲಿಪ್ಯಾಡ್‌, ಕಾಂಕ್ರೀಟ್‌ ರಸ್ತೆ, ಭದ್ರತಾ ವ್ಯವಸ್ಥೆ ಸಹಿತ ಮೂಲ ಸೌಲಭ್ಯಗಳ ತಯಾರಿ ವೇಗವಾಗಿ ಸಾಗುತ್ತಿದೆ.

ನವೆಂಬರ್ 28 ರಂದು ದೆಹಲಿಯಿಂದ ನೇರವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಬೆಳಗ್ಗೆ 11:05 ಕ್ಕೆ ಬರಲಿದ್ದಾರೆ. ಅಲ್ಲಿಂದ ಬೆಳಿಗ್ಗೆ 11:10 ಕ್ಕೆ ಹೆಲಿಕಾಪ್ಟರ್ ಮೂಲಕ ಉಡುಪಿಗೆ ಪ್ರಯಾಣ ಬೆಳೆಸಲಿದ್ದಾರೆ.

ರೋಡ್‌ಶೋ ರದ್ದು

ಈ ಹಿಂದೆ ಪ್ರಧಾನಿಯವರ ಸ್ವಾಗತಕ್ಕಾಗಿ ರೋಡ್ ಶೋ ನಡೆಸಲು ಯೋಜಿಸಲಾಗಿತ್ತು. ಆದರೆ, ಪರಿಷ್ಕೃತ ಪಟ್ಟಿಯಲ್ಲಿ ರೋಡ್ ಶೋ ರದ್ದುಗೊಳಿಸಲಾಗಿದೆ. ಹೆಲಿಪ್ಯಾಡ್‌ನಿಂದ ನೇರವಾಗಿ ಮಧ್ಯಾಹ್ನ 12 ಗಂಟೆಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿರುವ ಮೋದಿ, ಶ್ರೀಕೃಷ್ಣನ ದರ್ಶನ ಪಡೆಯಲಿದ್ದಾರೆ. ತದನಂತರ ಐತಿಹಾಸಿಕ ‘ಲಕ್ಷ ಕಂಠ ಗೀತ ಗಾಯನ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಕಾರ್ಯಕ್ರಮ ಪಟ್ಟಿ ಹೀಗಿದೆ

  • ಬೆಳಗ್ಗೆ 8.15: ದೆಹಲಿ ವಿಮಾನ ನಿಲ್ದಾಣದಿಂದ ವಾಯುಪಡೆ ವಿಮಾನದಲ್ಲಿ ಪಯಣ.
  • ಬೆಳಗ್ಗೆ 11.05: ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮನ.
  • ಬೆಳಗ್ಗೆ 11.10: ಹೆಲಿಕಾಪ್ಟರ್‌ ಮೂಲಕ ಪಯಣ.
  • ಬೆಳಗ್ಗೆ 11.35: ಆದಿ ಉಡುಪಿ ಹೆಲಿಪ್ಯಾಡ್‌ಗೆ ಆಗಮನ.
  • ಬೆಳಗ್ಗೆ 11.45: ಆದಿ ಉಡುಪಿ ಹೆಲಿಪ್ಯಾಡ್‌ನಿಂದ ರಸ್ತೆ ಪಯಣ.
  • ಮಧ್ಯಾಹ್ನ 12: ಶ್ರೀಕೃಷ್ಣ ಮಠ ಭೇಟಿ, ದೇವರ ದರ್ಶನ, ಲಕ್ಷ ಕಂಠ ಗೀತಾ ಪಾರಾಯಣ ಸಮಾರಂಭದಲ್ಲಿಭಾಗಿ.
  • ಮಧ್ಯಾಹ್ನ 12ರಿಂದ 1.30: ಉಡುಪಿ ಶ್ರೀಕೃಷ್ಣ ಮಠ, ಪರ್ಯಾಯ ಪುತ್ತಿಗೆ ಶ್ರೀ ಭೇಟಿ.
  • ಮಧ್ಯಾಹ್ನ 1.35: ಶ್ರೀಕೃಷ್ಣಮಠದಿಂದ ನಿರ್ಗಮನ.
  • ಮಧ್ಯಾಹ್ನ 1.45: ಹೆಲಿಕಾಪ್ಟರ್‌ ಮೂಲಕ ಮಂಗಳೂರು ವಿಮಾನ ನಿಲ್ದಾಣ.
  • 2.15: ವಾಯುಪಡೆ ವಿಮಾನ ಮೂಲಕ ಗೋವಾದ ದಾಬೋಲಿಮ್‌ ವಿಮಾನ ನಿಲ್ದಾಣಕ್ಕೆ ಪಯಣ.
  • 3.05: ದಾಬೋಲಿಂ ವಿಮಾನ ನಿಲ್ದಾಣದಿಂದ ಗೋಕರ್ಣ ಪರ್ತಗಳಿ ಜೀವೋತ್ತಮ ಮಠದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿ.
ಭರಪೂರ ಸಿದ್ಧತೆ

ರಾಷ್ಟ್ರೀಯ ಹೆದ್ದಾರಿಯ 169(ಎ) ಆದಿ ಉಡುಪಿ ಕರಾವಳಿ ಬೈಪಾಸ್‌ ಮಧ್ಯೆ 400 ಮೀ. ಕಾಂಕ್ರೀಟ್‌ ಕಾಮಗಾರಿ ಭರದಿಂದ ಸಾಗುತ್ತಿದೆ. ಒಂದು ವಾರದ ಕ್ಯೂರಿಂಗ್‌ ನಡುವೆ ಬಲಬದಿ ರಸ್ತೆ ಪ್ರಧಾನಿ ವಾಹನ ಸಂಚಾಕ್ಕೆ ಸೀಮಿತವಾಗಿ ತೆರವಾಗಲಿದೆ. ಆದಿ ಉಡುಪಿಯ ಎಪಿಎಂಸಿ ಎದುರಿಗೆ ಈಗಾಗಲೇ ಇರುವ ಮೂರು ಹೆಲಿಪ್ಯಾಡ್‌ಗಳ ದುರಸ್ತಿ, ಸಂಪರ್ಕ ರಸ್ತೆ, ಮಾರ್ಕಿಂಗ್‌ ಪ್ರಗತಿಯಲ್ಲಿದೆ. ಪಕ್ಕದಲ್ಲೇ ನಾಲ್ಕನೇ ಹೆಲಿಪ್ಯಾಡ್‌ ನಿರ್ಮಾಣ ಲೋಕೋಪಯೋಗಿ ಇಲಾಖೆಯಿಂದ 67 ಲಕ್ಷ ರೂ. ವೆಚ್ಚದಲ್ಲಿನಡೆಯುತ್ತಿದೆ.

ಉಡುಪಿ ನಂತರ ಗೋವಾಕ್ಕೆ ಭೇಟಿ

ಉಡುಪಿಯ ಕಾರ್ಯಕ್ರಮ ಮುಗಿಸಿದ ಬಳಿಕ, ಮಧ್ಯಾಹ್ನ 1:35ಕ್ಕೆ ಆದಿ ಉಡುಪಿ ಹೆಲಿಪ್ಯಾಡ್‌ನಿಂದ ಹೊರಟು ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ. ಅಲ್ಲಿಂದ ಮಧ್ಯಾಹ್ನ 2 ಗಂಟೆಗೆ ಗೋವಾಗೆ ಪ್ರಯಾಣ ಬೆಳೆಸಲಿದ್ದಾರೆ. ಪ್ರಧಾನಿಗಳ ಭೇಟಿಯ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×