HomeNewsParty Wise Election Results 2026 Winners - ಕನ್ನಡ ಬಿಜೆಪಿ ಕಾಂಗ್ರೆಸ್ ಟಿಎಂಸಿ ಪಶ್ಚಿಮ...

Party Wise Election Results 2026 Winners – ಕನ್ನಡ ಬಿಜೆಪಿ ಕಾಂಗ್ರೆಸ್ ಟಿಎಂಸಿ ಪಶ್ಚಿಮ ಬಂಗಾಳ

Party Wise Election Results 2026 Winners LIVE: ಪಂಚ ರಾಜ್ಯ ಚುನಾವಣಾ ಫಲಿತಾಂಶ; ಎಲ್ಲಿ ಹೇಗಿದೆ ಸ್ಥಿತಿ? ಇಲ್ಲಿದೆ ವಿವರ

Party Wise Election Results 2026 Winners LIVE: ಪಂಚ ರಾಜ್ಯ ಚುನಾವಣಾ ಫಲಿತಾಂಶ; ಎಲ್ಲಿ ಹೇಗಿದೆ ಸ್ಥಿತಿ? ಇಲ್ಲಿದೆ ವಿವರ

All Party Alliance Wise Election Results 2026 and Winners LIVE Updates in Kannada; ಪಂಚ ರಾಜ್ಯ ಚುನಾವಣಾ ಮತ ಎಣಿಕೆ ಪ್ರಗತಿಯಲ್ಲಿದ್ದು ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ಬಿಜೆಪಿ ಭರ್ಜರಿ ಬಹುತಮದತ್ತ ಸಾಗುತ್ತಿದೆ. ತಮಿಳುನಾಡಿನಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ ಭರ್ಜರಿ ಗೆಲುವಿನತ್ತ ಸಾಗುತ್ತಿದ್ದರೆ, ಕೇರಳದಲ್ಲಿ ಕಾಂಗ್ರೆಸ್ ಮರಳಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗುತ್ತಿದೆ.

 ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ (Assembly Election Results 2026) ಪ್ರಕಟವಾಗುತ್ತಿದ್ದು, ಹಲವು ವರ್ಷಗಳ ಸತತ ಪರಿಶ್ರಮದ ನಂತರ ಕೊನೆಗೂ ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಗದ್ದುಗೆ ಏರುವ ಹಾದಿಯಲ್ಲಿ ಬಿಜೆಪಿ ನಾಗಾಲೋಟ ಮುಂದುವರೆಸಿದೆ. ಅಸ್ಸಾಂ ಮತ್ತು ಪುದುಚೇರಿಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದ ಮುನ್ನಡೆ ಕಾಯ್ದುಕೊಂಡಿದೆ. ಕೇರಳದಲ್ಲಿ ಎಲ್‌ಡಿಎಫ್ ಮಣಿಸಿ ಮತ್ತೆ ಯುಡಿಎಫ್ ಅಧಿಕಾರಕ್ಕೆ ಏರಲು ಕ್ಷಣಗಣನೆ ಆರಂಭಿಸಿದೆ. ತಮಿಳುನಾಡಿನಲ್ಲಿ ನಟ ದಳಪತಿ ವಿಜಯ ನೇತೃತ್ವದ ಟಿವಿಕೆ ಅಧಿಕಾರ ಹಿಡಿಯುವುದು ಬಹುತೇಕ ನಿಚ್ಚಳವಾಗಿದೆ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಸ್ಥಿತಿಗತಿ ಇಲ್ಲಿದೆ.

ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ

294 ಕ್ಷೇತ್ರಗಳಿರುವ ಪಶ್ಚಿಮ ಬಂಗಾಳದಲ್ಲಿ 293 ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದ್ದು, ಬಹುಮತಕ್ಕೆ 148 ಸ್ಥಾನಗಳ ಅಗತ್ಯವಿದೆ. ಸಂಜೆ 3.45 ರ ಹೊತ್ತಿಗೆ ಬಿಜೆಪಿ 195 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆಡಳಿತಾರೂಢ ಟಿಎಂಸಿ 92 ಕ್ಷೇತ್ರಗಳಲ್ಲಷ್ಟೇ ಮುನ್ನಡೆಯಲ್ಲಿದೆ. ಕಾಂಗ್ರೆಸ್ 2 ಹಾಗೂ ಪಕ್ಷೇತರರು 4 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ನಡುವಿನ ನಿಕಟ ಸ್ಪರ್ಧೆಯ ನಡುವೆಯೂ, ಕಾಂಗ್ರೆಸ್ ಪಕ್ಷವು ಮುನ್ನಡೆಯ ವಿಷಯದಲ್ಲಿ ತನ್ನ ಖಾತೆ ತೆರೆದಿದೆ. 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

Election Result 2026: Tamil Nadu, Kerala, West Bengal, Puducherry, Assam Election  Results, News, Coverage - India Today


Read here:
Thalapathy Vijay ರಾಜಕೀಯ ಚೊಚ್ಚಲ ಪ್ರವೇಶ ಟಿವಿಕೆಯ 2026 ಚುನಾವಣಾ ತಂತ್ರ

ಅಸ್ಸಾಂ ಚುನಾವಣೆ ಫಲಿತಾಂಶ

126 ಕ್ಷೇತ್ರಗಳಿರುವ ಅಸ್ಸಾಂನಲ್ಲಿ ಬಹುಮತಕ್ಕೆ 64 ಸ್ಥಾನಗಳ ಅಗತ್ಯವಿದೆ. ಮಧ್ಯಾಹ್ನ ಸಂಜೆ 3.45 ರ ಹೊತ್ತಿಗೆ ಬಿಜೆಪಿ 101 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 23 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಎಐಯುಡಿಎಫ್ 2 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಪುದುಚೇರಿ ಚುನಾವಣೆ ಫಲಿತಾಂಶ

30 ಕ್ಷೇತ್ರಗಳಿರುವ ಪುದುಚೇರಿಯಲ್ಲಿ ಬಹುಮತಕ್ಕೆ 16 ಸ್ಥಾನಗಳ ಅಗತ್ಯವಿದೆ. ಸಂಜೆ 3.45 ರ ಹೊತ್ತಿಗೆ ಬಿಜೆಪಿ 20 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 7 ಹಾಗೂ ಇತರರು 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಕೇರಳ ಚುನಾವಣೆ ಫಲಿತಾಂಶ

140 ಕ್ಷೇತ್ರಗಳಿರುವ ಕೇರಳದಲ್ಲಿ ಬಹುಮತಕ್ಕೆ 71 ಸ್ಥಾನಗಳ ಅಗತ್ಯವಿದೆ. ಸಂಜೆ 3.45 ರ ಹೊತ್ತಿಗೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ 102 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಆಡಳಿತಾರೂಢ ಎಲ್​​ಡಿಎಫ್ 36 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಬಿಜೆಪಿ 2 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.

ಕೇರಳದಲ್ಲಿ ಎಲ್​ಡಿಎಫ್ ಅಧಿಕಾರ ಕಳೆದುಕೊಳ್ಳುವ ಹಾದಿಯಲ್ಲಿದ್ದು, ಅಂತಿಮವಾಗಿ ಸೋಲೊಪ್ಪಿಕೊಂಡಲ್ಲಿ ಭಾರತದಿಂದ ಕಮ್ಯೂನಿಸ್ಟ್ ಪಕ್ಷದ ಆಡಳಿತ ಸಂಪೂರ್ಣ ನಿರ್ಮೂಲನೆಯಾದಂತಾಗಲಿದೆ.

ತಮಿಳುನಾಡು ಚುನಾವಣೆ ಫಲಿತಾಂಶ

234 ಕ್ಷೇತ್ರಗಳಿರುವ ತಮಿಳುನಾಡಿನಲ್ಲಿ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದೆ. ಸಂಜೆ 3.45 ರ ಹೊತ್ತಿಗೆ ದಳಪತಿ ವಿಜಯ್ ನೇತೃತ್ವದ ಟಿವಿಕೆ 108 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದು ಸರಳ ಬಹುಮತದತ್ತ ಸಾಗುತ್ತಿದೆ. ಡಿಎಂಕೆ 72, ಎಐಎಡಿಎಂಕೆ 54 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

 

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments