HomeLyricsO Nanna Kanne Song Lyrics - ಓ ನನ್ನ ಕಣ್ಣೇ | Jaga Malla

O Nanna Kanne Song Lyrics – ಓ ನನ್ನ ಕಣ್ಣೇ | Jaga Malla

O Nanna Kanne Song Lyrics - ಓ ನನ್ನ ಕಣ್ಣೇ 

O Nanna Kanne Song Lyrics – ಓ ನನ್ನ ಕಣ್ಣೇ 

 ಓ ನನ್ನ ಕಣ್ಣೇ …ಓ ನನ್ನ ಕಣ್ಣೇ
ಕಣ್ಣೀರ ಒರೆಸಲಾ…..
ನಿನಗಾಗಿ ನಾನು ಮಾಡಿಲ್ಲ ಏನೂ
ತಪ್ಪಾಯ್ತು ಅನ್ನಲಾ….
ಕೂಸುಮರಿ ಮಾಡಿ ಹೊತ್ತಾಡಲಿಲ್ಲ
ಹಾಡಿಲ್ಲ ಜೋಗುಳ
ಚಂದ್ರಮನ ತೋರಿ ಕೈತುತ್ತು ತಿನ್ನಿಸಿ
ತೂಗಿಲ್ಲ ತೊಟ್ಟಿಲ
ನನ್ನೆಲ್ಲ ನೋವಕಂಡು
ಕಾರ್ಮೋಡವು
ಕಣ್ಣೀರ ಸುರಿಸಿತಾ …..
ಆರಾರಿ ರಾರೋ ರಾರೋ ರಾರೋ
ಆರಾರಿರಾ..ರೋ
ಆರಾರಿ ರಾರೋ ರಾರೋ ರಾರೋ
ಆರಾರಿ ರಾ..ರೋ
ಆರಾರಿ ರಾರೋ ರಾರೋ ರಾರೋ
ಆರಾರಿ ರಾ..ರೋ
ಆರಾರಿ ರಾರೋ ರಾರೋ ರಾರೋ
ಆರಾರಿ ರಾ..ರೋ
ಓ ನನ್ನ ಕಣ್ಣೇ …ಓ ನನ್ನ ಕಣ್ಣೇ
ಕಣ್ಣೀರ ಒರೆಸಲಾ…..
ನಿನಗಾಗಿ ನಾನು ಮಾಡಿಲ್ಲ ಏನೂ
ತಪ್ಪಾಯ್ತು ಅನ್ನಲಾ….
ಕರುಳಿನ ಸಂಬಂಧ ಕರಗದ ಅನುಬಂಧ
ಕರೆಯಿತು ಕೈಬೀಸಿ ಹುಡುಕಿ ಬಂದೆ
ಕಂಬನಿ ಕೊಳದೊಳಗೆ ಭಾವನೆ ಸುಳಿಯೊಳಗೆ
ಸಿಲುಕಿದ ಜೀವಕ್ಕೆ ನೀನು ಕಂಡೆ
ನಾನಿನ್ನ ಕಾವಲುಗಾರ ಹಾಯಾಗಿ ಮಲಗಮ್ಮ
ಕೈತಪ್ಪಿ ಹೋದರೆ ನೀನು ಅನ್ನೋದೇ ಭಯವಮ್ಮ
ಬಾಳೊಂದು ಪಂಜರ
ನೀನಲ್ಲಿ ಇಂಚರ
ನೀನು ಬಾಯ್ತುಂಬ ಅಪ್ಪ ಅನ್ನಮ್ಮ ಸಾಕು
ಬದುಕು ಸಾರ್ಥಕ
 ಓ ನನ್ನ ಕಣ್ಣೇ …ಓ ನನ್ನ ಕಣ್ಣೇ
ಕಣ್ಣೀರ ಒರೆಸಲಾ…..
ನಿನಗಾಗಿ ನಾನು ಮಾಡಿಲ್ಲ ಏನೂ
ತಪ್ಪಾಯ್ತು ಅನ್ನಲಾ….
ಕೂಸುಮರಿ ಮಾಡಿ ಹೊತ್ತಾಡಲಿಲ್ಲ
ಹಾಡಿಲ್ಲ ಜೋಗುಳ…..
ಚಂದ್ರಮನ ತೋರಿ ಕೈತುತ್ತು ತಿನ್ನಿಸಿ
ತೂಗಿಲ್ಲ ತೊಟ್ಟಿಲ ….
ಲೋಕಾನೆ ಮಲಗಿರುವಾಗ
ಮೌನದಲ್ಲಿ
ಇಬ್ಬರೆ ಮಾತಾಡುವ
ಆರಾರಿ ರಾರೋ ರಾರೋ ರಾರೋ
ಆರಾರಿ ರಾ..ರೋ ……
ಆರಾರಿ ರಾರೋ ರಾರೋ ರಾರೋ
ಆರಾರಿ ರಾ..ರೋ
ಆರಾರಿ ರಾರೋ ರಾರೋ ರಾರೋ
ಆರಾರಿ ರಾ..ರೋ
ಆರಾರಿ ರಾರೋ ರಾರೋ ರಾರೋ
ಆರಾರಿ ರಾ..ರೋ
ಓ ನನ್ನ ಕಣ್ಣೇ …ಓ ನನ್ನ ಕಣ್ಣೇ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments