HomeNewsNEET-UG 2026 Deadline March 11-NEET UG 2026 ಅರ್ಜಿ ಅವಧಿ ವಿಸ್ತರಣೆ |Kannada Folks

NEET-UG 2026 Deadline March 11-NEET UG 2026 ಅರ್ಜಿ ಅವಧಿ ವಿಸ್ತರಣೆ |Kannada Folks

Good news for NEET aspirants: Apply by March 11

NEET-UG 2026 Deadline March 11-NEET UG 2026 ಅರ್ಜಿ ಅವಧಿ ವಿಸ್ತರಣೆ

2026ರ NEET-UG ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕವನ್ನು NTA ಮಾರ್ಚ್ 11ರ ರಾತ್ರಿ 9 ಗಂಟೆಯವರೆಗೆ ವಿಸ್ತರಿಸಿದೆ. ವೈದ್ಯಕೀಯ ಮತ್ತು ಆಯುಷ್ ಕೋರ್ಸ್‌ಗಳ ಪ್ರವೇಶ ಬಯಸುವ ಅರ್ಹ ವಿದ್ಯಾರ್ಥಿಗಳು, ಈ ಅವಕಾಶವನ್ನು ಬಳಸಿಕೊಂಡು ಕೂಡಲೇ ಅರ್ಜಿ ಸಲ್ಲಿಸಬಹುದು. ಪರೀಕ್ಷಾ ಶುಲ್ಕ ಪಾವತಿಗೆ ಮಾರ್ಚ್ 11ರ ರಾತ್ರಿ 11:59ರವರೆಗೆ ಸಮಯವಿದೆ. ಸರ್ವರ್ ಸಮಸ್ಯೆ ತಪ್ಪಿಸಲು ಬೇಗನೆ ಅರ್ಜಿ ಸಲ್ಲಿಸುವುದು ಉತ್ತಮ.NTANEET #NEET #NEET2026 🔥 NTA NEET UG 2026 Registration Online Form 👉  Apply Online:- https://www.fastjobsearchers.com/admission/nta-neet-ug-2026 -registration-form

Read this : Bengaluru LPG Shortage Alert-ಬೆಂಗಳೂರು ಎಲ್‌ಪಿಜಿ ಕೊರತೆ |Kannada Folks

2026-27ನೇ ಸಾಲಿನ ವೈದ್ಯಕೀಯ ಮತ್ತು ಆಯುಷ್ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ (NEET-UG 2026) ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಹತ್ವದ ಅವಕಾಶವೊಂದನ್ನು ನೀಡಿದೆ. ಈ ಹಿಂದೆ ಮಾರ್ಚ್ 8ಕ್ಕೆ ಮುಕ್ತಾಯವಾಗಿದ್ದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಇದೀಗ ಮಾರ್ಚ್ 11 ರ ರಾತ್ರಿ 9 ಗಂಟೆಯವರೆಗೆ ವಿಸ್ತರಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿ ಶುಲ್ಕವನ್ನು ಮಾರ್ಚ್ 11ರ ರಾತ್ರಿ 11:59 ರವರೆಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ (ಅಥವಾ ಜೈವಿಕ ತಂತ್ರಜ್ಞಾನ) ವಿಷಯಗಳೊಂದಿಗೆ ವಿಜ್ಞಾನ ವಿಭಾಗದಲ್ಲಿ ಇಂಟರ್ಮೀಡಿಯೇಟ್ ಅಥವಾ ಪಿಯುಸಿ ಉತ್ತೀರ್ಣರಾದ ಹಾಗೂ ಕನಿಷ್ಠ 17 ವರ್ಷ ವಯೋಮಿತಿ ಹೊಂದಿರುವ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ. 1700, ಇಡಬ್ಲ್ಯೂಎಸ್/ಒಬಿಸಿ-ಎನ್‌ಸಿಎಲ್ ವರ್ಗದವರಿಗೆ ರೂ. 1600 ಹಾಗೂ ಎಸ್‌ಸಿ/ಎಸ್‌ಟಿ/ದಿವ್ಯಾಂಗ ಮತ್ತು ತೃತೀಯ ಲಿಂಗದ ಅಭ್ಯರ್ಥಿಗಳಿಗೆ ರೂ. 1000 ನೋಂದಣಿ ಶುಲ್ಕವನ್ನು ನಿಗದಿಪಡಿಸಲಾಗಿದೆ.

ಮೇ 3 ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ದೇಶಾದ್ಯಂತ ಪೆನ್ ಮತ್ತು ಪೇಪರ್ (ಆಫ್‌ಲೈನ್) ಮಾದರಿಯಲ್ಲಿ ಪರೀಕ್ಷೆ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು 011-40759000/69227700 ಸಂಖ್ಯೆಗಳನ್ನು ಅಥವಾ neetug2026@nta.ac.in ಇ-ಮೇಲ್ ಅನ್ನು ಸಂಪರ್ಕಿಸಬಹುದಾಗಿದೆ. ಸರ್ವರ್ ಡೌನ್​ ಸಮಸ್ಯೆ ತಪ್ಪಿಸಲು ಕೊನೆಯ ಕ್ಷಣದವರೆಗೆ ಕಾಯದೆ ಕೂಡಲೇ ಅರ್ಜಿ ಸಲ್ಲಿಸುವುದು ಉತ್ತಮ ಎಂದು NTA ಸೂಚಿಸಿದೆ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments