HomeNewsMumbai - ಮುಂಬೈಯ ಕ್ಯಾಥೆಡ್ರಲ್ ಚರ್ಚ್ ನಲ್ಲಿ ಮೊಳಗಿದ 'ಜನ ಗಣ ಮನ' |Kannada Folks

Mumbai – ಮುಂಬೈಯ ಕ್ಯಾಥೆಡ್ರಲ್ ಚರ್ಚ್ ನಲ್ಲಿ ಮೊಳಗಿದ ‘ಜನ ಗಣ ಮನ’ |Kannada Folks

ಚರ್ಚ್ ನಲ್ಲಿ ಗಾಯಕವೃಂದವು ಭಾರತೀಯ ರಾಷ್ಟ್ರಗೀತೆಯ ನುಡಿಸುವಿಕೆಯೊಂದಿಗೆ ಕ್ರಿಸ್‌ಮಸ್ ಕರೋಲ್ ನ್ನು ಆರಂಭಿಸಿದ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕ ಗಮನ ಸೆಳೆಯುತ್ತಿದೆ.

Mumbai – ಮುಂಬೈಯ ಕ್ಯಾಥೆಡ್ರಲ್ ಚರ್ಚ್ ನಲ್ಲಿ ಮೊಳಗಿದ ‘ಜನ ಗಣ ಮನ’ 

ಮುಂಬೈನ ಸೇಂಟ್ ಥಾಮಸ್ ಕ್ಯಾಥೆಡ್ರಲ್‌ನಲ್ಲಿ ಕ್ರಿಸ್‌ಮಸ್ ಕೋರಲ್ ಗಾಯನ ಪ್ರಾರಂಭವಾಗುತ್ತಿದ್ದಂತೆ ಭಾರತದ ರಾಷ್ಟ್ರಗೀತೆ ಮೊದಲು ಮೊಳಗಿತು. ಮೊದಲು ದೇಶ ಎಂಬ ತತ್ವದಡಿಯಲ್ಲಿ ಜನಗಣ ಮನ ಗೀತೆಯನ್ನು ಹಾಕಲಾಯಿತು.ಚರ್ಚ್ ನಲ್ಲಿ ಗಾಯಕವೃಂದವು ಭಾರತೀಯ ರಾಷ್ಟ್ರಗೀತೆಯ ನುಡಿಸುವಿಕೆಯೊಂದಿಗೆ ಕ್ರಿಸ್‌ಮಸ್ ಕರೋಲ್ ನ್ನು ಆರಂಭಿಸಿದ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕ ಗಮನ ಸೆಳೆಯುತ್ತಿದೆ.ದೇಶ ಮೊದಲು, ಭಾವೈಕ್ಯತೆ: ಮುಂಬೈಯ ಕ್ಯಾಥೆಡ್ರಲ್ ಚರ್ಚ್ ನಲ್ಲಿ ಮೊಳಗಿದ 'ಜನ ಗಣ ಮನ'  ರಾಷ್ಟ್ರಗೀತೆ-Video Vural

Read this – ಮುಂದಿನವಾರ ರಾಜಧಾನಿಯಲ್ಲಿ ಇರಲಿದೆ ದಾಖಲೆಯ ಚಳಿ- Kannada News | Bangalore Braces for Record Cold| kannadafolks

ಐತಿಹಾಸಿಕ ಸೇಂಟ್ ಥಾಮಸ್ ಕ್ಯಾಥೆಡ್ರಲ್‌ನಲ್ಲಿ ಈ ಪ್ರದರ್ಶನ ನಡೆಯಿತು. ಅಲ್ಲಿ ವೈಲ್ಡ್ ವಾಯ್ಸಸ್ ಕಾಯಿರ್ ಇಂಡಿಯಾ ಕ್ರಿಸ್‌ಮಸ್ ಕೋರಲ್ ಸಂಜೆಯನ್ನು “ಜನ ಗಣ ಮನ” ದ ಭಾವಪೂರ್ಣ ಮತ್ತು ಶಿಷ್ಟಾಚಾರ-ಅನುಸರಣೆಯ ಪ್ರದರ್ಶನದೊಂದಿಗೆ ಪ್ರಾರಂಭಿಸಿ ನಂತರ ಸಾಂಪ್ರದಾಯಿಕ ಕರೋಲ್ ಹಾಡಿದರು.

ಛಾಯಾಗ್ರಾಹಕ ಮಾಲ್ಕಮ್ ಸ್ಟೀಫನ್ಸ್ ಹಂಚಿಕೊಂಡ ಈ ವಿಡಿಯೋ 2 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ. ದೇಶಭಕ್ತಿ ಮತ್ತು ಹಬ್ಬದ ಮನೋಭಾವದ ಈ ಹೃದಯಸ್ಪರ್ಶಿ ಕ್ಷಣವನ್ನು ನೆಟ್ಟಿಗರು ಕೊಂಡಾಡಿದ್ದಾರೆ.

ಸೈಂಟ್ ಥಾಮಸ್ ಕ್ಯಾಥಡ್ರಲ್ ಚರ್ಚ್ 300ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದು. ಇದು ಮುಂಬೈ ಮಹಾನಗರದ ಅತಿ ಹಳೆಯ ಚರ್ಚ್. ಬ್ರಿಟಿಷರ ವಸಾಹತುಶಾಹಿ ಜೀವನದಲ್ಲಿ ನೆಲೆಕಂಡ ಮುಂಬೈ ನಗರದ ಮೊದಲ ಆಂಗ್ಲನ್ನರ ಚರ್ಚ್. 1718ರಲ್ಲಿ ಇದನ್ನು ನಿರ್ಮಿಸಲಾಗಿದ್ದು ದೇಶದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವಕ್ಕೆ ಕುರುಹಾಗಿದೆ. ಈ ಚರ್ಚ್ ನಲ್ಲಿ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×