MI Vs PBKS ಪಂದ್ಯದಲ್ಲಿ ಹೈಡ್ರಾಮಾ DRS ನಿಯಮನ್ನೇ ಬದಲಾಯಿಸಿ – ಹಿರಿಯ ಆಟಗಾರನ ಒತ್ತಾಯವೇಕೆ?
ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ಮತ್ತು ಜಸ್ಪ್ರೀತ್ ಬುಮ್ರಾ ನೇತೃತ್ವದ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಮುಂಬೈ ತಂಡ ಗೆಲುವು ಸಾಧಿಸಿದೆ. ಪಂಜಾಬ್ ಬ್ಯಾಟಿಂಗ್ ವೇಳೆ, ನೀಡಲಾದ DRS ತೀರ್ಪಿನ ಬಗ್ಗೆ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಈ ನಿಯಮದಲ್ಲಿ ತುರ್ತಾಗಿ ಬದಲಾವಣೆಯನ್ನು ತರಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.
ಸತತ ನಾಲ್ಕು ಸೋಲಿನಿಂದ ಕಂಗೆಟ್ಟಿದ್ದ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡಕ್ಕೆ, ಮುಂಬೈ ವಿರುದ್ದದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಿತ್ತು. ಆದರೆ, ಕುತೂಹಲದ ಕಾದಾಟದಲ್ಲಿ ಮುಂಬೈ ತಂಡ, ಆರು ವಿಕೆಟ್’ಗಳಿಂದ ಗೆಲುವು ಸಾಧಿಸಿದೆ. ಸೋಲಲಿ, ಬಿಡಲಿ, ಮುಂಬೈ ತಂಡ ಈಗಾಗಲೇ ಕೂಟದಿಂದ ನಿರ್ಗಮಿಸಿಯಾಗಿದೆ. ಮೊದಲ ಇನ್ನಿಂಗ್ಸ್’ನ ಕೊನೆಯ ಬಾಲ್’ನಲ್ಲಿ ಹೈಡ್ರಾಮಾ ನಡೆದಿದೆ.
ಜಸ್ಪ್ರೀತ್ ಬುಮ್ರಾ, ಬೌಲಿಂಗ್’ನ ಕೊನೆಯ ಓವರ್’ನಲ್ಲಿ ಹೈಡ್ರಾಮಾ
ಟಾಸ್ ಗೆದ್ದ ಮುಂಬೈ ತಂಡದ ನಾಯಕ ಜಸ್ಪ್ರೀತ್ ಬುಮ್ರಾ, ಬೌಲಿಂಗ್ ಅನ್ನು ಆಯ್ಕೆ ಮಾಡಿಕೊಂಡರು. ಇಪ್ಪತ್ತು ಓವರ್’ನಲ್ಲಿ ಪಂಜಾಬ್ ತಂಡ ಎಂಟು ವಿಕೆಟ್ ಕಳೆದುಕೊಂಡು ಬರೋಬ್ಬರಿ ಇನ್ನೂರು ರನ್’ಮಾಡಿತ್ತು. ಗಾಯದ ಸಮಸ್ಯೆಯಿಂದ ಹಾರ್ದಿಕ್ ಪಾಂಡ್ಯ ಮತ್ತು ವೈಯಕ್ತಿಕ ಕಾರಣದಿಂದ ಸೂರ್ಯ ಕುಮಾರ್ ಯಾದವ್ ಈ ಪಂದ್ಯದಲ್ಲಿ ಆಡಿರಲಿಲ್ಲ. ಇದನ್ನು ಚೇಸ್ ಮಾಡಿದ ಮುಂಬೈ ತಂಡ, ಆರು ವಿಕೆಟ್ ನಿಂದ ಗೆಲುವು ಸಾಧಿಸಿದೆ. 75 ರನ್ ಹೊಡೆದ ತಿಲಕ್ ವರ್ಮಾ, ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂಜಾಬ್ ತಂಡದ ಬ್ಯಾಟಿಂಗ್’ನ ಕೊನೆಯ ಓವರ್’ನಲ್ಲಿ DRS ನಿಯಮದ ಬಗ್ಗೆ ಭಾರೀ ತಕರಾರು ಎದ್ದಿದೆ.

ಪಂಜಾಬ್ ಮತ್ತು ಮುಂಬೈ ತಂಡದ ನಡುವಿನ ಪಂದ್ಯದಲ್ಲಿನ DRS ನಿಯಮದಲ್ಲಿರುವ ಪ್ರಮುಖ ಲೋಪದೋಷವನ್ನು ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಎತ್ತಿ ತೋರಿಸಿದ್ದಾರೆ. ಈ ಪಂದ್ಯದ ಮೊದಲ ಇನ್ನಿಂಗ್ಸ್ ರೋಚಕತೆಯಿಂದ ಕೂಡಿತ್ತು ಮತ್ತು ಹಲವು ತಿರುವುಗಳಿಗೆ ಸಾಕ್ಷಿಯಾಯಿತು. ಪಂಜಾಬ್ ಇನ್ನಿಂಗ್ಸ್’ನ ಕೊನೆಯ ಓವರ್’ಅನ್ನು ನಾಯಕ ಬುಮ್ರಾ ಎಸೆಯುತ್ತಿದ್ದರು. ಬುಮ್ರಾ ಅವರ ಎಸೆದ ಚೆಂಡು, ಪಂಜಾಬ್ ಆಟಗಾರ ವಿಷ್ಣು ವಿನೋದ್ ಅವರ ಪ್ಯಾಡಿಗೆ ಬಡಿದಿತ್ತು ಮತ್ತು ಅವರನ್ನು ಆನ್-ಫೀಲ್ಡ್ ಅಂಪೈರ್ ಔಟ್’ ಎಂದು ತೀರ್ಪು ನೀಡಿದ್ದರು.
ವಿಷ್ಣು, ಇದನ್ನು ಪ್ರಶ್ನಿಸಿ ಥರ್ಡ್ ಅಂಪೈರ್ ಮೊರೆ ಹೋದಾಗ, ಅದು ನಾಟೌಟ್ ಎನ್ನುವ ತೀರ್ಪು ಬಂತು. ಆದರೆ, ಪಂಜಾಬ್ ತಂಡಕ್ಕೆ ಲೆಗ್’ಬೈ ನೀಡಲಿಲ್ಲ. ಯಾಕೆಂದರೆ, ಅಂಪೈರ್ ಔಟ್ ಎಂದು ತೀರ್ಪು ನೀಡಿದ ಮೇಲೆ, ಡೆಡ್ ಬಾಲ್ ಎಂದು ಅದನ್ನು ಪರಿಗಣಿಸಲಾಗಿತ್ತು. ಅಶ್ವಿನ್ ಈ ನಿಯಮವನ್ನು ಪ್ರಶ್ನಿಸಿ, ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ನಿಯಮ ಬದಲಾವಣೆಗೆ ರವಿಚಂದ್ರನ್ ಅಶ್ವಿನ್ ಒತ್ತಾಯ
ಕೊನೆಯ ಎಸೆತದ ಈ ಹೈಡ್ರಾಮಾ, ರವಿಚಂದ್ರನ್ ಅಶ್ವಿನ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ರಿವ್ಯೂನಲ್ಲಿ ಅಂಪೈರ್ ತೀರ್ಪು ಬದಲಾದರೂ, ಪಂಜಾಬ್ ತಂಡಕ್ಕೆ ರನ್ ನಿರಾಕರಿಸಿದ್ದು ತಪ್ಪು ಎನ್ನುವುದು ಇವರ ಅಭಿಪ್ರಾಯವಾಗಿದೆ. DRS ನಿಯಮಕ್ಕೆ ತುರ್ತಾಗಿ ತಿದ್ದುಪಡಿಯನ್ನು ತರಬೇಕಾಗಿದೆ ಎಂದು ಇವರು ಒತ್ತಾಯಿಸಿದ್ದಾರೆ.
“ತಪ್ಪು ತೀರ್ಪಿನಿಂದಾಗಿ ಪಂಜಾಬ್ ಒಂದು ರನ್ ಕಳೆದುಕೊಂಡಿದೆ. ಈ ನಿಯಮ ಆದಷ್ಟು ಬೇಗ ಬದಲಾಗಬೇಕಿದೆ. ಹೇಗೆ, ಇಂಪ್ಯಾಕ್ಟ್ ಸಬ್ ಎನ್ನುವುದು ಹೇಗೆ ಐಪಿಎಲ್ ನಿಯಮವೋ, ಹಾಗೆಯೇ, ಐಸಿಸಿ ಕೂಡಾ DRSಗೆ ಸಂಬಂಧಿಸಿದಂತೆ ಟಿ20ಯಲ್ಲಿ ಬದಲಾವಣೆಯನ್ನು ತರಬೇಕು”ಎಂದು ರವಿಚಂದ್ರನ್ ಅಶ್ವಿನ್ ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯ ಮೂಲಕ ಒತ್ತಾಯಿಸಿದ್ದಾರೆ.
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


