ಜನಪದ

ಮಾದೇಶ್ವರ ದಯೆ ಬಾರದೆ….. Kannada Lyrics

ಮಾದೇಶ್ವರ ದಯೆ ಬಾರದೆ…..

Subscribe

Lock

ಮಾದೇಶ್ವರ ದಯೆ ಬಾರದೇ
ಬರಿದಾದ ಬಾಳಲ್ಲಿ ಬರ ಬಾರದೆ
ನೀನಿಲ್ಲದೆ ನನಗೆ ಬದುಕೆಲ್ಲಿದೆ
ಮಾದೇಶ್ವರ ದಯೆ ಬಾರದೇ
ಬರಿದಾದ ಬಾಳಲ್ಲಿ ಬರ ಬಾರದೆ
ನೀನಿಲ್ಲದೆ ನನಗೆ ಬದುಕೆಲ್ಲಿದೆ
ಮಾದೇಶ್ವರ ದಯೆ ಬಾರದೇ II

ಹಗಲಲ್ಲು ನಿನದೆ ಧ್ಯಾನ,
ಇರುಳಲ್ಲು ನಿನ ಗುಣಗಾನ
ಮಹಾದೇವ ನೆನೆಯದೆ ನಿನ್ನ
ನಿಲದಯ್ಯ ನನ್ನೀ ಪ್ರಾಣ II 2 II

ಕನಸ್ಸಲ್ಲು ನೀನೆ ಸ್ವಾಮಿ
ಮನದಲ್ಲು ನೀನೆ ಸ್ವಾಮಿ
ಉಸಿರುಸಿರು ನಿನ್ನ ಹೆಸರೆ
ಕಣ್ತೆರೆದು ನೋಡೊ ಸ್ವಾಮಿ
ಮನೆದೇವ ಮಾದೇಶ್ವರನೆ
ಈ ಮೊರೆಯ ಕೇಳೋ
ಮನೆದೇವ ಮಾದೇಶ್ವರನೆ
ಈ ಮೊರೆಯ ಕೇಳೋ
ನಾ ತಾಳಲಾರೆನಯ್ಯ ಈ ವೇದನೆ
ನಿಜ ಭಕುತ ನನಗೇಕಯ್ಯ ಈ ಶೋಧನೆ II

ಮಾದೇಶ್ವರ ದಯೆ ಬಾರದೇ
ಬರಿದಾದ ಬಾಳಲ್ಲಿ ಬರ ಬಾರದೆ
ನೀನಿಲ್ಲದೆ ನನಗೆ ಬದುಕೆಲ್ಲಿದೆ
ಮಾದೇಶ್ವರ ದಯೆ ಬಾರದೇ

ದೇವಾದಿದೇವತೆಗಳನೆ
ಕಾಪಾಡಿದಂತ ಸ್ವಾಮಿ
ನಂಬಿದ ಮನೆಯಲಿ ನಲಿವ
ನಿಜ ದೈವ ನೀನೆ ಸ್ವಾಮಿ

ಸಿರಿತನದ ಸಿಹಿಯ ಕೇಳೆ
ಬಡತನದ ಬೇಗೆ ತಾಳೆ
ನಿನ ಪಾದ ಸೇವೆಗೆಂದೇ
ಮುಡಿಪಾಯಿತು ನನ್ನೀ ಬಾಳೆ
ನಾ ಮಾಡಿದಂತ ಪಾಪ ಪರಿಹರಿಸು ದೇವಾ
ನಾ ಮಾಡಿದಂತ ಪಾಪ ಪರಿಹರಿಸು ದೇವಾ
ಈ ದಾಸನ ಮೇಲೆ ಮುನಿಸ್ಸೇತಕೆ
ನೀ ಹರಸದಾ ಬದುಕು ನನಗೇತಕೇ II

ಮಾದೇಶ್ವರ ದಯೆ ಬಾರದೇ
ಬರಿದಾದ ಬಾಳಲ್ಲಿ ಬರ ಬಾರದೆ
ನೀನಿಲ್ಲದೆ ನನಗೆ ಬದುಕೆಲ್ಲಿದೆ
ಮಾದೇಶ್ವರ ದಯೆ ಬಾರದೇ

ನಿನ ಕಾಣಲೆಂದು ಬಂದೆ
ಬಾಳೆಲ್ಲ ನೊಂದು ಬೆಂದೆ
ಮಹದೇವ ಎಂಬುದ ಹೊರತು
ಬೇರೇನು ಕಾಣೆ ತಂದೆ
ತಂದೆಯು ನೀನೆ ಸ್ವಾಮಿ
ತಾಯಿಯು ನೀನೆ ಸ್ವಾಮಿ
ನಾ ಕಂಡ ಬಂಧುಬಳಗ
ಎಲ್ಲಾವು ನೀನೆ ಸ್ವಾಮಿII

ನಿನ ಪಾದ ನಂಬಿ ಬಂದೆ
ದಯೆ ತೋರೊ ಮಾದೇವ
ನಿನ ಪಾದ ನಂಬಿ ಬಂದೆ
ದಯೆ ತೋರೊ ಮಾದೇವ
ನೀನಿಲ್ಲದಾ ಬಾಳು ಸುಖವೆಲ್ಲಿದೆ
ನಿ ಹರಸದೆ ನನಗೆ ಬಾಳೆಲ್ಲಿದೆ II

ದೇಶ್ವರ ದಯೆ ಬಾರದೇ
ಬರಿದಾದ ಬಾಳಲ್ಲಿ ಬರ ಬಾರದೆ
ನೀನಿಲ್ಲದೆ ನನಗೆ ಬದುಕೆಲ್ಲಿದೆ
ಮಾದೇಶ್ವರ ದಯೆ ಬಾರದೇ

ಮಾದೇಶ್ವರ ದಯೆ ಬಾರದೇ
ಬರಿದಾದ ಬಾಳಲ್ಲಿ ಬರ ಬಾರದೆ
ನೀನಿಲ್ಲದೆ ನನಗೆ ಬದುಕೆಲ್ಲಿದೆ
ಮಾದೇಶ್ವರ ದಯೆ ಬಾರದೇ.II

ಕರಡಿ ಕುಣಿತ – ಕೊರುಗುವ ಮನುಜನ ಮನೆ ಕಾಯುತ ಮಲುಗುವ ಜಾಂಬುವಂತ/ ಕಥೆ ಅರ್ಧಕ್ಕೆ ನಿಂತ ವ್ಯಥೆ !

    Kannada Folks
    ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
    https://kannadafolks.in

    Leave a Reply

    Your email address will not be published. Required fields are marked *