HomeNewsLove Mocktail 3 Trailer Out-ಲವ್ ಮಾಕ್ಟೆಲ್ 3 ಟ್ರೈಲರ್ ರಿಲೀಸ್ |Kannada Folks

Love Mocktail 3 Trailer Out-ಲವ್ ಮಾಕ್ಟೆಲ್ 3 ಟ್ರೈಲರ್ ರಿಲೀಸ್ |Kannada Folks

Darling Krishna’s Love Mocktail 3 trailer hints at the final chapter of the popular romantic series.

Love Mocktail 3 Trailer Out-ಲವ್ ಮಾಕ್ಟೆಲ್ 3 ಟ್ರೈಲರ್ ರಿಲೀಸ್

Love Mocktail 3: 2020 ರಲ್ಲಿ ಬಿಡುಗಡೆ ಆದ ‘ಲವ್ ಮಾಕ್ಟೆಲ್’ ಸಿನಿಮಾದ ಕತೆಯನ್ನು ಎಳೆಯುತ್ತಾ, ಹಿಂಜುತ್ತಾ ಇದೀಗ ‘ಲವ್ ಮಾಕ್ಟೆಲ್ 3’ ವರೆಗೂ ಬಂದಿದ್ದು, ಟ್ರೇಲರ್​​ನಲ್ಲೇ ಡಾರ್ಲಿಂಗ್ ಕೃಷ್ಣ ಅವರು ಹೇಳಿರುವಂತೆ ಇದು ‘ಲವ್ ಮಾಕ್ಟೆಲ್ 3’ ಸಿನಿಮಾದ ಅಂತಿಮ ಕತೆ ಆಗಿರಲಿದೆ. ‘ಲವ್ ಮಾಕ್ಟೆಲ್ 3’ ಸಿನಿಮಾ ಮೂಲಕ ‘ಲವ್ ಮಾಕ್ಟೆಲ್’ ಸರಣಿಗೆ ಸಮಾಪ್ತಿ ಹಾಡುತ್ತಿದ್ದಾರೆ ಡಾರ್ಲಿಂಗ್ ಕೃಷ್ಣ.Love Mocktail 3: 'ಲವ್ ಮಾಕ್ಟೇಲ್ 3' ರಿಲೀಸ್‌ಗೆ ಮುಹೂರ್ತ ಫಿಕ್ಸ್; ಮೋಡಿ ಮಾಡ್ತಾರಾ  ಕೃಷ್ಣ, ಮಿಲನಾ, ಅಮೃತಾ? | Darling Krishna, Milana Nagaraj, Amrutha Iyengar  movie Love Mocktail 3 release date revealed ...

Read this : Siddaramaiah on Power Sharing-ಅಧಿಕಾರ ಹಂಚಿಕೆ ಬಗ್ಗೆ ಸಿದ್ದು ಮಾತು |Kannada Folks

ಡಾರ್ಲಿಂಗ್ ಕೃಷ್ಣ (Darling Krishna) ನಟಿಸಿ, ನಿರ್ದೇಶನ ಮಾಡಿರುವ ‘ಲವ್ ಮಾಕ್ಟೆಲ್ 3’ ಸಿನಿಮಾದ ಟ್ರೈಲರ್ ಇಂದು (ಮಾರ್ಚ್ 07) ಬಿಡುಗಡೆ ಆಗಿದೆ. 2020 ರಲ್ಲಿ ಬಿಡುಗಡೆ ಆದ ‘ಲವ್ ಮಾಕ್ಟೆಲ್’ ಸಿನಿಮಾದ ಕತೆಯನ್ನು ಎಳೆಯುತ್ತಾ, ಹಿಂಜುತ್ತಾ ಇದೀಗ ‘ಲವ್ ಮಾಕ್ಟೆಲ್ 3’ ವರೆಗೂ ಬಂದಿದ್ದು, ಟ್ರೇಲರ್​​ನಲ್ಲೇ ಡಾರ್ಲಿಂಗ್ ಕೃಷ್ಣ ಅವರು ಹೇಳಿರುವಂತೆ ಇದು ‘ಲವ್ ಮಾಕ್ಟೆಲ್ 3’ ಸಿನಿಮಾದ ಅಂತಿಮ ಕತೆ ಆಗಿರಲಿದೆ. ‘ಲವ್ ಮಾಕ್ಟೆಲ್ 3’ ಸಿನಿಮಾ ಮೂಲಕ ‘ಲವ್ ಮಾಕ್ಟೆಲ್’ ಸರಣಿಗೆ ಸಮಾಪ್ತಿ ಹಾಡುತ್ತಿದ್ದಾರೆ ಡಾರ್ಲಿಂಗ್ ಕೃಷ್ಣ.

ಇದೀಗ ಬಿಡುಗಡೆ ಆಗಿರುವ ಟ್ರೈಲರ್​​ನಲ್ಲಿ ‘ಲವ್ ಮಾಕ್ಟೆಲ್’ ಸರಣಿಯ ಮೊದಲೆರಡು ಸಿನಿಮಾಗಳ ಹಲವು ದೃಶ್ಯಗಳಿಗೆ ಮೊದಲು ತೋರಿಸಲಾಗಿದ್ದು, ಪ್ರೇಕ್ಷಕರಿಗೆ ಕತೆಯನ್ನು ರೀಕಾಲ್ ಮಾಡಲಾಗಿದೆ. ಚಿತ್ರಮಂದಿರಕ್ಕೆ ಹೋಗುವ ಮುಂಚೆಯೇ ಪ್ರೇಕ್ಷಕರನ್ನು ಟ್ರೈಲರ್ ಮೂಲಕ ಸಜ್ಜುಗೊಳಿಸಿದ್ದಾರೆ ಡಾರ್ಲಿಂಗ್ ಕೃಷ್ಣ. ‘ಲವ್ ಮಾಕ್ಟೆಲ್ 2’ ಸಿನಿಮಾನಲ್ಲಿ ಸಣ್ಣ ಮಗುವೊಂದನ್ನು ನಾಯಕ ದತ್ತು ಪಡೆವ ಮೂಲಕ ಸಿನಿಮಾ ಅಂತ್ಯವಾಗಿತ್ತು.

‘ಲವ್ ಮಾಕ್ಟೆಲ್ 3’ ಸಿನಿಮಾನಲ್ಲಿ ಆ ಪುಟ್ಟ ಹುಡುಗಿಯದ್ದೇ ಕತೆ ಇದೆ. ಬಿಡುಗಡೆ ಆಗಿರುವ ಟ್ರೈಲರ್​​ನಲ್ಲಿ ಹೊಸ ಸಿನಿಮಾದ ಗುಟ್ಟುಗಳನ್ನು ಹೆಚ್ಚಾಗಿ ಬಿಟ್ಟುಕೊಡಲಾಗಿಲ್ಲ, ಆದರೆ ಆ ಪುಟ್ಟ ಬಾಲಕಿಯನ್ನು ಹೆಚ್ಚು ಫೋಕಸ್ ಮಾಡಲಾಗಿದೆ. ಆದರೆ ಬಂದು ಹೋಗುವ ನಾಯಕಿಯರು, ಲವ್ ಸ್ಟೋರಿ ಇನ್ನಿತರೆಗಳ ಬಗ್ಗೆ ಹೆಚ್ಚು ಸುಳಿವು ಬಿಟ್ಟುಕೊಡಲಾಗಿಲ್ಲ. ಆದರೆ ಇದು ಸಹ ನವಿರಾದ, ಭಾವಕ ಕತೆಯನ್ನು ಹೊಂದಿರುವುದಂತೂ ಖಾತ್ರಿ.

‘ಲವ್ ಮಾಕ್ಟೆಲ್ 3’ ಸಿನಿಮಾವನ್ನು ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿದ್ದು, ಡಾರ್ಲಿಂಗ್ ಕೃಷ್ಣ ಮತ್ತು ಅವರ ಪತ್ನಿ ಮಿಲನಾ ನಾಗರಾಜ್ ಅವರು ಒಟ್ಟಿಗೆ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಕ್ಯಾಮೆರಾ ಕೆಲಸ, ಎಡಿಟರ್ ಮಾಡಿರುವುದು ಶ್ರೀ ಕ್ರೇಜಿ ಮೈಂಡ್. ಸಿನಿಮಾನಲ್ಲಿ ಡಾರ್ಲಿಂಗ್ ಕೃಷ್ಣ, ಸಮೃತ್ಥ, ಮಿಲನಾ ನಾಗರಾಜ್, ದಿಲೀಪ್ ರಾಜ್, ಶ್ವೇತ ಪ್ರಸಾದ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ನಕುಲ್ ಅಭಯಂಕರ್. ಸಿನಿಮಾ ಮಾರ್ಚ್ 19ಕ್ಕೆ ಬಿಡುಗಡೆ ಆಗುತ್ತಿದೆ. ‘ಟಾಕ್ಸಿಕ್’ ಮುಂದೂಡಲ್ಪಟ್ಟಿದ್ದರಿಂದ ದೊರೆತ ಅವಕಾಶವನ್ನು ಬಾಚಿಕೊಂಡಿದ್ದಾರೆ ಡಾರ್ಲಿಂಗ್ ಕೃಷ್ಣ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments