Love Mocktail 3 Trailer Out-ಲವ್ ಮಾಕ್ಟೆಲ್ 3 ಟ್ರೈಲರ್ ರಿಲೀಸ್
Love Mocktail 3: 2020 ರಲ್ಲಿ ಬಿಡುಗಡೆ ಆದ ‘ಲವ್ ಮಾಕ್ಟೆಲ್’ ಸಿನಿಮಾದ ಕತೆಯನ್ನು ಎಳೆಯುತ್ತಾ, ಹಿಂಜುತ್ತಾ ಇದೀಗ ‘ಲವ್ ಮಾಕ್ಟೆಲ್ 3’ ವರೆಗೂ ಬಂದಿದ್ದು, ಟ್ರೇಲರ್ನಲ್ಲೇ ಡಾರ್ಲಿಂಗ್ ಕೃಷ್ಣ ಅವರು ಹೇಳಿರುವಂತೆ ಇದು ‘ಲವ್ ಮಾಕ್ಟೆಲ್ 3’ ಸಿನಿಮಾದ ಅಂತಿಮ ಕತೆ ಆಗಿರಲಿದೆ. ‘ಲವ್ ಮಾಕ್ಟೆಲ್ 3’ ಸಿನಿಮಾ ಮೂಲಕ ‘ಲವ್ ಮಾಕ್ಟೆಲ್’ ಸರಣಿಗೆ ಸಮಾಪ್ತಿ ಹಾಡುತ್ತಿದ್ದಾರೆ ಡಾರ್ಲಿಂಗ್ ಕೃಷ್ಣ.
Read this : Siddaramaiah on Power Sharing-ಅಧಿಕಾರ ಹಂಚಿಕೆ ಬಗ್ಗೆ ಸಿದ್ದು ಮಾತು |Kannada Folks
ಡಾರ್ಲಿಂಗ್ ಕೃಷ್ಣ (Darling Krishna) ನಟಿಸಿ, ನಿರ್ದೇಶನ ಮಾಡಿರುವ ‘ಲವ್ ಮಾಕ್ಟೆಲ್ 3’ ಸಿನಿಮಾದ ಟ್ರೈಲರ್ ಇಂದು (ಮಾರ್ಚ್ 07) ಬಿಡುಗಡೆ ಆಗಿದೆ. 2020 ರಲ್ಲಿ ಬಿಡುಗಡೆ ಆದ ‘ಲವ್ ಮಾಕ್ಟೆಲ್’ ಸಿನಿಮಾದ ಕತೆಯನ್ನು ಎಳೆಯುತ್ತಾ, ಹಿಂಜುತ್ತಾ ಇದೀಗ ‘ಲವ್ ಮಾಕ್ಟೆಲ್ 3’ ವರೆಗೂ ಬಂದಿದ್ದು, ಟ್ರೇಲರ್ನಲ್ಲೇ ಡಾರ್ಲಿಂಗ್ ಕೃಷ್ಣ ಅವರು ಹೇಳಿರುವಂತೆ ಇದು ‘ಲವ್ ಮಾಕ್ಟೆಲ್ 3’ ಸಿನಿಮಾದ ಅಂತಿಮ ಕತೆ ಆಗಿರಲಿದೆ. ‘ಲವ್ ಮಾಕ್ಟೆಲ್ 3’ ಸಿನಿಮಾ ಮೂಲಕ ‘ಲವ್ ಮಾಕ್ಟೆಲ್’ ಸರಣಿಗೆ ಸಮಾಪ್ತಿ ಹಾಡುತ್ತಿದ್ದಾರೆ ಡಾರ್ಲಿಂಗ್ ಕೃಷ್ಣ.
ಇದೀಗ ಬಿಡುಗಡೆ ಆಗಿರುವ ಟ್ರೈಲರ್ನಲ್ಲಿ ‘ಲವ್ ಮಾಕ್ಟೆಲ್’ ಸರಣಿಯ ಮೊದಲೆರಡು ಸಿನಿಮಾಗಳ ಹಲವು ದೃಶ್ಯಗಳಿಗೆ ಮೊದಲು ತೋರಿಸಲಾಗಿದ್ದು, ಪ್ರೇಕ್ಷಕರಿಗೆ ಕತೆಯನ್ನು ರೀಕಾಲ್ ಮಾಡಲಾಗಿದೆ. ಚಿತ್ರಮಂದಿರಕ್ಕೆ ಹೋಗುವ ಮುಂಚೆಯೇ ಪ್ರೇಕ್ಷಕರನ್ನು ಟ್ರೈಲರ್ ಮೂಲಕ ಸಜ್ಜುಗೊಳಿಸಿದ್ದಾರೆ ಡಾರ್ಲಿಂಗ್ ಕೃಷ್ಣ. ‘ಲವ್ ಮಾಕ್ಟೆಲ್ 2’ ಸಿನಿಮಾನಲ್ಲಿ ಸಣ್ಣ ಮಗುವೊಂದನ್ನು ನಾಯಕ ದತ್ತು ಪಡೆವ ಮೂಲಕ ಸಿನಿಮಾ ಅಂತ್ಯವಾಗಿತ್ತು.
‘ಲವ್ ಮಾಕ್ಟೆಲ್ 3’ ಸಿನಿಮಾವನ್ನು ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿದ್ದು, ಡಾರ್ಲಿಂಗ್ ಕೃಷ್ಣ ಮತ್ತು ಅವರ ಪತ್ನಿ ಮಿಲನಾ ನಾಗರಾಜ್ ಅವರು ಒಟ್ಟಿಗೆ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಕ್ಯಾಮೆರಾ ಕೆಲಸ, ಎಡಿಟರ್ ಮಾಡಿರುವುದು ಶ್ರೀ ಕ್ರೇಜಿ ಮೈಂಡ್. ಸಿನಿಮಾನಲ್ಲಿ ಡಾರ್ಲಿಂಗ್ ಕೃಷ್ಣ, ಸಮೃತ್ಥ, ಮಿಲನಾ ನಾಗರಾಜ್, ದಿಲೀಪ್ ರಾಜ್, ಶ್ವೇತ ಪ್ರಸಾದ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ನಕುಲ್ ಅಭಯಂಕರ್. ಸಿನಿಮಾ ಮಾರ್ಚ್ 19ಕ್ಕೆ ಬಿಡುಗಡೆ ಆಗುತ್ತಿದೆ. ‘ಟಾಕ್ಸಿಕ್’ ಮುಂದೂಡಲ್ಪಟ್ಟಿದ್ದರಿಂದ ದೊರೆತ ಅವಕಾಶವನ್ನು ಬಾಚಿಕೊಂಡಿದ್ದಾರೆ ಡಾರ್ಲಿಂಗ್ ಕೃಷ್ಣ.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


