KN rajanna should not speak bad says HC balakrishna
ರಾಜಣ್ಣ ಬಾಯಿ ಚಪಲಕ್ಕೆ, ತಮ್ಮ ತೆವಲು ತೀರಿಸಿಕೊಳ್ಳಲು ಈ ರೀತಿ ಹೇಳಿಕೆ ಕೊಡಬಾರದು ಎಂದು ಮಾಗಡಿ ಶಾಸಕ ಬಾಲಕೃಷ್ಣಎಚ್ಚರಿಕೆ ನೀಡಿದ್ದಾರೆ. ಮಾಗಡಿಗೆ ಹೇಮಾವತಿ ನೀರು ಕೊಡಲ್ಲ ಎಂಬ ಸಚಿವ ರಾಜಣ್ಣ ಹೇಳಿಕೆಗೆ ಬಾಲಕೃಷ್ಣ ಕೆಂಡಾಮಂಡಲವಾಗಿದ್ದಾರೆ. ತುಮಕೂರಿನಲ್ಲಿ ಹೈ ನುಗಾರಿಕೆ ಮಾಡುವ ಜನ ನಮ್ಮ ಕುದೂರಿನಲ್ಲಿ ಹಾಲು ಮಾರಾಟ ಮಾಡುತ್ತಿದ್ದಾರೆ.
Read this – karwar labour dies by an accident ಕಾರವಾರದ ಕಾರ್ಮಿಕ ಅಪಘಾತದಿಂದ ಸಾವು
ತುಮಕೂರು ಹಾಲು ಉತ್ಪನ್ನ ಬೆಂಗಳೂರಿನಲ್ಲಿ ಅರ್ಧ ಭಾಗ, ನಮ್ಮ ಕುದೂರಿನಲ್ಲಿ ಅರ್ಧ ಭಾಗ ಮಾರಾಟ ಆಗುತ್ತಿದೆ. ನಾವು ಅದನ್ನು ಏನಾದರೂ ತಡೆದು ನಿಲ್ಲಿಸಿದ್ರೆ ಹೇಗೆ? ನಿಮ್ಮ ಹಾಲು ಬೇಡ, ನಿಮ್ಮ ನೀರು ಬೇಡ ಅಂತಾ ತಡೆದು ನಿಲ್ಲಿಸಿದ್ರೆ ಅದರಿಂದ ಹಾನಿ ಆಗೋದು ತುಮಕೂರಿನ ರೈತರಿಗೆ. ಅದನ್ನು ನಾವು ಮಾಡಬೇಕಾ ಎಂದು ಕಿಡಿಕಾರಿದರು.
Read this – CM Siddaramaiah instruction to provide justice to the victims of atrocity cases
ರಾಜಣ್ಣ ಅವರು ವಿವೇಚನೆಯಿಂದ ಮಾತನಾಡಬೇಕು. ಅವರು ಹಿರಿಯ ಮಂತ್ರಿಗಳು, ಈ ರೀತಿ ಬಾಲಿಷ ಹೇಳಿಕೆಯನ್ನ ನೀಡಬಾರದು. ಅದೇನೇ ಹೇಳೊದು ಇದ್ದರೂ ಸರ್ಕಾರದ ಹಂತದಲ್ಲಿ ಹೇಳಬೇಕು. ಕೊಡೋದೆ ಇಲ್ಲ, ಬಿಡೋದೆ ಇಲ್ಲ ಅಂದರೆ ಹೇಗೆ? ತುಮಕೂರಿನಿಂದ ಬರುವ ಹಾಲು ನಾವು ನಿಲ್ಲಿಸಿದ್ರೆ ಹೇಗೆ? ಇದು ಒಕ್ಕೂಟದ ವ್ಯವಸ್ಥೆ, ಒಂದೇ ದೇಶ, ಒಂದೇ ರಾಜ್ಯದಲ್ಲಿ ಬದುಕುತ್ತಿದ್ದೇವೆ. ಒಬ್ಬ ಹಿರಿಯ ಸಚಿವರಾಗಿ ಈ ರೀತಿ ಚಿಲ್ಲರೆ ಹೇಳಿಕೆ ಕೊಡಬಾರದು. ತೆವಲು ತೀರಿಸಿಕೊಳ್ಳಲು ಈ ರೀತಿ ಮಾತನಾಡಬಾರದು ಎಂದು ವಾಗ್ದಾಳಿ ನಡೆಸಿದರು.