HomeLyricsJeeva Kottavalu Song Lyrics - ಜೀವ ಕೊಟ್ಟವಳು | Pogaru

Jeeva Kottavalu Song Lyrics – ಜೀವ ಕೊಟ್ಟವಳು | Pogaru

Jeeva Kottavalu Song Lyrics - ಜೀವ ಕೊಟ್ಟವಳು

Jeeva Kottavalu Song Lyrics – ಜೀವ ಕೊಟ್ಟವಳು

ಜೀವ ಕೊಟ್ಟವಳು ತುತ್ತು ಇಟ್ಟವಳು
ಭೂಮಿ ಮೇಲೆ ಒಬ್ಬಳೇ..
ಪ್ರಾಣ ಒತ್ತೆ ಇಟ್ಟು ಜನ್ಮ ನೀಡುವಳು
ತಾಯಿ ಇಲ್ಲಿ ಒಬ್ಬಳೇ..
ಕಾಣುವ ದೈವವೆ
ಕಂಬನಿ ಇಟ್ಟರೆ
ಬದುಕಿಗೆ ಅರ್ಥ ಎಲ್ಲಿದೆ?
ಕರುಣೆ ಕಣಜವೆ
ಕೊರಗಿ ನಿಂತರೆ
ನನ್ನುಸಿರೆ ನನ್ನ ಕೊಂದಿದೆ..
ಜೀವ ಕೊಟ್ಟವಳು ತುತ್ತು ಇಟ್ಟವಳು
ಭೂಮಿ ಮೇಲೆ ಒಬ್ಬಳೆ
ಪ್ರಾಣ ಒತ್ತೆ ಇಟ್ಟು ಜನ್ಮ ನೀಡುವಳು
ತಾಯಿ ಇಲ್ಲಿ ಒಬ್ಭಳೆ
ಕಾಣುವ ದೈವವೆ
ಕಂಬನಿ ಇಟ್ಟರೆ
ಬದುಕಿಗೆ ಅರ್ಥ ಎಲ್ಲಿದೆ?
ಕರುಣೆ ಕಣಜವೆ
ಕೊರಗಿ ನಿಂತರೆ
ನನ್ನುಸಿರೆ ನನ್ನ ಕೊಂದಿದೆ..
ಋಣಿಯೇ ನಿನಗೆ ನಾನು ಅಮ್ಮಾ!
ಕಂದ ಕೂಗೋ ಕರೆಯೇ ಅಮ್ಮ
ನಿನ್ನ ಮಡಿಲಲಿ ಮಲಗುವಾಸೆ
ಮನದಲಿ ನಾ ಕೂಸೇ..
ನಿನ್ನ ಬಿಟ್ಟು ನಾನು ಎಲ್ಲೂ ಹೋಗಲಾರೆ
ನೀನೆ ನನ್ನ ಜಗವೇ..
ಕೈಯನು ಹಿಡಿದು ನೀ
ನನ್ನನ್ನು ನಡೆಸಿದೆ
ಕುರುಡನೆ ನಾನು ಅಮ್ಮ..
ಹಾದಿಯೇ ಕಾಣದ
ನನ್ನಯ ಪಯಣದಿ
ಧ್ರುವತಾರೆ ನೀನಮ್ಮ..
ನೋವ ಮರೆಸೋ ನಗುವೇ ಅಮ್ಮ
ಜೋಜೋ ಲಾಲಿಯಲ್ಲಿ ಜಗವನ್ನೇ ಮರೆಸುವ
ದೇವತೆ ಅಮ್ಮ..
ಎಷ್ಟೇ ತಪ್ಪು ಮಾಡಿದರು ಕ್ಷಮಿಸುವ
ಜೀವಿ ನೀನೆ ಅಮ್ಮ..
ಸ್ವಾರ್ಥವೇ ಇಲ್ಲದ
ಅರ್ಥಕು ಮೀರಿದ
ಭಾವನೆಯೇ ನೀನಮ್ಮ..
ಜೀವವೇ ಹೋದರು
ಕೊನೆಯ ಉಸಿರಲು
ನಿನ್ನ ಕಾಯುವೆನಮ್ಮ..
ಋಣಿಯೇ ನಿನಗೆ ನಾನು ಅಮ್ಮಾ!

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments