Japanese ceo praises bengaluru – ಬೆಂಗಳೂರು ವಿಶ್ವದ ಅತ್ಯುತ್ತಮ ನಗರ, ಆದರೆ ಒಂದು ನ್ಯೂನತೆ ಇದೆ ಎಂದ ಜಪಾನ್ ಉದ್ಯಮಿ
ಜಪಾನಿನ ಉದ್ಯಮಿ ತ್ಸುಯೋಶಿ ಇಟೊ ಬೆಂಗಳೂರನ್ನು ‘ವಿಶ್ವದ ಅತ್ಯುತ್ತಮ ನಗರ’ ಎಂದು ಹಾಡಿಹೊಗಳಿದ್ದಾರೆ. ಇಲ್ಲಿನ ಸುಂದರ ಹವಾಮಾನವನ್ನು ‘ಸಾಗರವಿಲ್ಲದ ಹವಾಯಿ’ಗೆ ಹೋಲಿಸಿದ್ದಾರೆ. ಆದರೆ, ನಗರದ ವಿಪರೀತ ಸಂಚಾರ ದಟ್ಟಣೆ, ರಸ್ತೆಗಳು ಮತ್ತು ವಾಹನಗಳ ಹಾರ್ನ್‌ಗಳಿಂದಾಗುವ ಶಬ್ದ ಮಾಲಿನ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೂ, ಬೆಂಗಳೂರಿನ ಜೀವನ ತನ್ನಲ್ಲಿ ಸಕಾರಾತ್ಮಕ ಬದಲಾವಣೆ ತಂದಿದೆ ಎಂದು ಹೇಳಿದ್ದು, ಅವರ ಪೋಸ್ಟ್ ವೈರಲ್ ಆಗಿದೆ.
Read this – New Year Wishes Top 5 heartfelt happy new year wishes 2026
ಜಪಾನಿನ ಉದ್ಯಮಿ ಒಬ್ಬರು ಬೆಂಗಳೂರನ್ನು ಹಾಡಿಹೋಗಳಿದ್ದಾರೆ. ಬಿಯಾಂಡ್ ನೆಕ್ಸ್ಟ್ ವೆಂಚರ್ಸ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ಜಪಾನಿನ ಉದ್ಯಮಿ ತ್ಸುಯೋಶಿ ಇಟೊ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಭಾರೀ ವೈರಲ್ ಆಗಿದೆ. ನಗರದ ಟ್ರಾಫಿಕ್ ಬಗ್ಗೆಯೂ ಪ್ರಮಾಣಿಕವಾಗಿ ಹೇಳಿದ್ದಾರೆ. ಲಿಂಕ್ಡ್ಇನ್ನ್ಲಿ ಈ ಪೋಸ್ಟ್ನ್ನು ಹಂಚಿಕೊಂಡಿದ್ದು, ಬೆಂಗಳೂರು ಎಲ್ಲದರಲ್ಲೂ ಸೂಪರ್ ಆಗಿದೆ. ಆದರೆ ಈ ಬಗ್ಗೆ ಮಾತ್ರ ಅಸಮಾಧಾನ ಇದೆ ಎಂದು ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ. ಇವರ ಈ ಪೋಸ್ಟ್ ನೆಟ್ಟಿಗರನ್ನು ಗಮನಸೆಳೆದಿದೆ. ಈ ಪೋಸ್ಟ್ನಲ್ಲಿ ಜಪಾನಿನ ವಾತಾವರಣಕ್ಕೂ ಬೆಂಗಳೂರಿನ ವಾತಾವರಣಕ್ಕೂ ಹೋಲಿಕೆ ಮಾಡಿದ್ದಾರೆ.
ಅವರು ತಮ್ಮ ಪೋಸ್ಟ್ನಲ್ಲಿ ಬೆಂಗಳೂರು ವಿಶ್ವದ ಅತ್ಯುತ್ತಮ ನಗರ ಎಂದು ಹೇಳಿದ್ದಾರೆ. ಅಲ್ಲಿ ವಾಸಿಸಿದ ನಂತರವೇ ನಗರದ ಮೋಡಿ ಸ್ಪಷ್ಟವಾಗುತ್ತದೆ. ಅಲ್ಲಿನ ಹವಾಮಾನ ತುಂಬಾ ಕೂಲ್ ಹಾಗು ಸುಂದರ. ವರ್ಷಪೂರ್ತಿ ಸೌಮ್ಯವಾದ ತಾಪಮಾನ ಮತ್ತು ಶುಷ್ಕ, ಆಹ್ಲಾದಕರ ಗಾಳಿ ಅಲ್ಲಿನ ಆಕರ್ಷಣೆ ಎಂದು ಹೇಳಿದ್ದಾರೆ . ಇವರು ಜಪಾನಿನ ವೃತ್ತಿಪರರನ್ನು ಭಾರತಕ್ಕೆ ಬರುವಂತೆ ಹೇಳುವ ಪೋಸ್ಟ್ಗಳನ್ನು ಆಗ್ಗಾಗೆ ಹಂಚಿಕೊಳ್ಳುತ್ತಾರೆ. ಬೆಂಗಳೂರು “ಸಾಗರವಿಲ್ಲದ ಹವಾಯಿ ದ್ವೀಪ” ದಂತೆ ಎಂದು ಹೇಳಿದ್ದಾರೆ. ಆದರೆ ಜಪಾನ್ ರೆಸಾರ್ಟ್ ತರಹದ ಹವಾಮಾನ ಹೊಂದಿದೆ ಎಂದು ಬೆಂಗಳೂರು ಹಾಗೂ ಜಪಾನ್ನ ಹವಾಮಾನವನ್ನು ಹೊಲಿಕೆ ಮಾಡಿದ್ದಾರೆ.
Read this – New headache for BBMP ಬಿಬಿಎಂಪಿಗೆ ಹೊಸ ತಲೆನೋವು
ಆದರೆ ಬೆಂಗಳೂರಿನಲ್ಲಿ ಒಂದು ನ್ಯೂನತೆ ಇದೆ, ಅದುವೆ ವಾಹನ ದಟ್ಟಣೆ, ಬೆಂಗಳೂರಿನಲ್ಲಿ ಟ್ರಾಫಿಕ್ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವಂತಿಲ್ಲ, ಇಂದಿಗೂ ಆ ಒಂದು ವಿಚಾರದಲ್ಲಿ ಅಸಮಾಧಾನ ಇದೆ. ಇಷ್ಟು ದೊಡ್ಡ ಹಾಗೂ ಸುಂದರ ನಗರದಲ್ಲಿ ವಾಹನ ದಟ್ಟಣೆ ಆಗಬಾರದು ಎಂದು ಹೇಳಿದ್ದಾರೆ. ಅವರು ಬೆಂಗಳೂರಿಗೆ ಬಂದ ನಂತರ ಸ್ಥಳೀಯ ಜೀವನವನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಮಾರುತಿ ಸುಜುಕಿಯನ್ನು ಖರೀದಿಸಿ ಬೆಂಗಳೂರಿನ ನಗರಗಳಲ್ಲಿ ಓಡಾಡಿದ್ದಾರೆ. ಟ್ರಾಫಿಕ್, ರಸ್ತೆಗಳು, ವಾಹನ ಸಂಚಾರ ವ್ಯವಸ್ಥೆ, ಅದರಲ್ಲೂ ಕರ್ಕಶ ಹಾರ್ನ್ಗಳಿಂದ ಬೆಂಗಳೂರಿನ ಸೌಂದರ್ಯವನ್ನು ಹಾಳು ಮಾಡಿದೆ ಎಂದು ಹೇಳಿದ್ದಾರೆ.
ಇವುಗಳು ನಾನು ಜಪಾನ್‌ನಲ್ಲಿ ಎಂದಿಗೂ ಅನುಭವಿಸದ ವಿಷಯಗಳು, ಮತ್ತು ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಬೆಂಗಳೂರಿನಲ್ಲಿ ಹೊಸ ಹೊಸ ವಿಚಾರಗಳಿಗೆ ಹಾಗೂ ಕೌಶಲ್ಯಗಳ ಹೆಚ್ಚು ಒತ್ತು ನೀಡುತ್ತಾರೆ. ಇಟೊ ಭಾರತದಲ್ಲಿನ ತನ್ನ ಜೀವನವು ಇನ್ನೂ ಮನರಂಜನೆಯಿಂದ ಕೂಡಿದೆ ಎಂದು ಹೇಳಿದರು. ಇನ್ನು ಇವರ ಈ ಪೋಸ್ಟ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿ ಅನೇಕರು ಈ ಬಗ್ಗೆ ತುಂಬಾ ಆಸಕ್ತಿದಾಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಬಗ್ಗೆ ಒಂದು ಒಳ್ಳೆಯ ಮಾತು ಕೇಳಿ ತುಂಬಾ ಖುಷಿಯಾಗಿದೆ ಎಂದು ಒಬ್ಬರು ಹೇಳಿದ್ದಾರೆ. ಇತ್ತೀಚೆಗೆ, ಬಹಳಷ್ಟು ನಕಾರಾತ್ಮಕ ಮಾತುಗಳು ಕೇಳಿಬರುತ್ತಿವೆ. ಸಂಚಾರ, ಭಾಷೆ, ಇತ್ಯಾದಿ, ಆದರೆ ಯಾವುದೂ ಸುಂದರ ನಗರವನ್ನು ನಿಜವಾಗಿಯೂ ಹಾಳುಮಾಡಲು ಸಾಧ್ಯವಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ.
Support Us 


