HomeNewsIndia protected Farm Interests-ರಷ್ಯಾ ತೈಲ ಖರೀದಿ ಬಗ್ಗೆ MEA ಮಾಹಿತಿ

India protected Farm Interests-ರಷ್ಯಾ ತೈಲ ಖರೀದಿ ಬಗ್ಗೆ MEA ಮಾಹಿತಿ

ರಷ್ಯಾ ತೈಲ ಖರೀದಿ ಬಗ್ಗೆ MEA ಮಾಹಿತಿ: ಗೋಯಲ್

India protected Farm Interests-ರಷ್ಯಾ ತೈಲ ಖರೀದಿ ಬಗ್ಗೆ MEA ಮಾಹಿತಿ

ಕೃಷಿ ಸುಂಕ ಕಡಿತದ ಬಗ್ಗೆ ಕೆಲವು ವ್ಯಾಪಾರ ತಜ್ಞರು ಎತ್ತಿರುವ ಕಳವಳಗಳನ್ನು ಪರಿಹರಿಸಲು ಯತ್ನಿಸಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು, ಅಮೆರಿಕ ಜೊತೆಗಿನ ಮಧ್ಯಂತರ ವ್ಯಾಪಾರ ಒಪ್ಪಂದದಲ್ಲಿ ಭಾರತ ಯಾವುದೇ ರಿಯಾಯಿತಿಗಳನ್ನು ನೀಡಿಲ್ಲ ಎಂದು ಶನಿವಾರ ಹೇಳಿದ್ದಾರೆ.

“ಭಾರತೀಯ ರೈತರ ಕೃಷಿ ಉತ್ಪನ್ನಗಳನ್ನು ಶೂನ್ಯ ಸುಂಕದಲ್ಲಿ ಅಮೆರಿಕಕ್ಕೆ ರಫ್ತು ಮಾಡಲಾಗುತ್ತದೆ. ಅದೇ ಸಮಯದಲ್ಲಿ, ಭಾರತೀಯ ಮಾರುಕಟ್ಟೆಗೆ ಪ್ರವೇಶಿಸುವ ಅಮೆರಿಕದ ರೈತರ ಕೃಷಿ ಉತ್ಪನ್ನಗಳಿಗೆ ಯಾವುದೇ ಸುಂಕ ರಿಯಾಯಿತಿಗಳನ್ನು ನೀಡಲಾಗಿಲ್ಲ” ಎಂದು ಗೋಯಲ್ ಸ್ಪಷ್ಟಪಡಿಸಿದ್ದಾರೆ.

ಭಾರತದಿಂದ ರಷ್ಯಾ ತೈಲ ಖರೀದಿ ನಿಲ್ಲಿಸುವ ಭರವಸೆ,ತೈಲ ಖರೀದಿಸುವುದಿಲ್ಲ ಎಂದು ಭಾರತ ಹೇಳಿಲ್ಲ; ಡೊನಾಲ್ಡ್‌ ಟ್ರಂಪ್‌ ಹೇಳಿದ್ದೆಲ್ಲವನ್ನೂ ನಂಬಲ್ಲ ಎಂದ ರಷ್ಯಾ! - no ...

“ಭಾರತದ ರೈತರ ಮೇಲೆ ಪರಿಣಾಮ ಬೀರುವ ಯಾವುದೇ ಕೆಲಸವನ್ನು ನಾವು ಮಾಡಿಲ್ಲ. ಡೈರಿ, ಜೋಳ, ಸೋಯಾ ಹಿಟ್ಟು, ಸಕ್ಕರೆ, ರಾಗಿ, ಸಿಟ್ರಸ್ ಹಣ್ಣುಗಳ ಮೇಲೆ ಯಾವುದೇ ರಿಯಾಯಿತಿ ನೀಡಲಾಗಿಲ್ಲ” ಎಂದು ಸಚಿವರು ತಿಳಿಸಿದ್ದಾರೆ.

Read This: Final Call on division of Belagavi-CM ಸಿದ್ದರಾಮಯ್ಯ ನಿರ್ಧಾರವೇ ಅಂತಿಮ

ನಾವು ಡಿಸ್ಟಿಲ್ಲರ್ಸ್ ಡ್ರೈಡ್ ಗ್ರೇನ್ಸ್ ವಿಥ್ ಸೊಲ್ಯೂಬಲ್ಸ್ (ಡಿಡಿಜಿಎಸ್​), ವೈನ್‌ಗಳು ಮತ್ತು ಸ್ಪಿರಿಟ್‌ಗಳಂತಹ ಕೆಲವು ಉತ್ಪನ್ನಗಳ ಮೇಲೆ ಅಮೆರಿಕ ಮಾರುಕಟ್ಟೆಗೆ ಮುಕ್ತವಾಗಿಸಿದ್ದೇವೆ. ಇವುಗಳಲ್ಲಿ ನಾವು ಕನಿಷ್ಠ ಆಮದು ಬೆಲೆಯನ್ನು ಸಹ ಇಟ್ಟುಕೊಂಡಿದ್ದೇವೆ ಎಂದರು.

ಭಾರತಕ್ಕೆ ಅಮೆರಿಕದಿಂದ ಬರುವ ಸೇಬುಗಳ ಮೇಲೆ ಕೋಟಾ ಆಧಾರಿತ ಸುಂಕ ರಿಯಾಯಿತಿಗಳನ್ನು ಮತ್ತು ಪ್ರತಿ ಕೆಜಿಗೆ ಕನಿಷ್ಠ ಆಮದು ಬೆಲೆಯನ್ನು 80 ರೂ.ಗಳಿಗೆ ನೀಡುತ್ತಿದೆ. ಸೋಯಾಬೀನ್ ಎಣ್ಣೆಯಲ್ಲಿ ಅಮೆರಿಕಕ್ಕೆ ಕೋಟಾ ಆಧಾರಿತ ಸುಂಕ ರಿಯಾಯಿತಿಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ಈ ಒಪ್ಪಂದದ ಚೌಕಟ್ಟಿನಲ್ಲಿ ರೈತರಿಗೆ ಸಂಪೂರ್ಣ ರಕ್ಷಣೆ ನೀಡಲಿದೆ. ಭಾರತೀಯ ಎಂಎಸ್​ಎಂಇಗಳಿಗೆ ಭಾರಿ ಪ್ರಯೋಜನಗಳನ್ನು ತರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

Read This: Final Call on division of Belagavi-CM ಸಿದ್ದರಾಮಯ್ಯ ನಿರ್ಧಾರವೇ ಅಂತಿಮ

ರಷ್ಯಾ ತೈಲ ಖರೀದಿ ಬಗ್ಗೆ MEA ಮಾಹಿತಿ

ಇನ್ನು ಅಮೆರಿಕ, ಭಾರತದ ಮೇಲೆ ವಿಧಿಸಲಾದ ಹೆಚ್ಚುವರಿ ಸುಂಕಗಳನ್ನು ತೆಗೆದುಹಾಕುವುದಾಗಿ ಘೋಷಿಸಿದ ಬಳಿಕ ಭಾರತವು ರಷ್ಯಾದಿಂದ ತೈಲ ಖರೀದಿ ಮುಂದುವರೆಸುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ವಿಚಾರ ಕುರಿತು ಎಷ್ಟೇ ಸಾರಿ ಕೇಳಿದರು ಅಷ್ಟೇ, ಈ ಕುರಿತು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಲಿದೆ ಎಂದರು.

ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದ ಘೋಷಣೆ ವೇಳೆ ಭಾರತವು ರಷ್ಯಾದ ಒಕ್ಕೂಟದ ತೈಲವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲು ಬದ್ಧವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದರು.

Read This: Final Call on division of Belagavi-CM ಸಿದ್ದರಾಮಯ್ಯ ನಿರ್ಧಾರವೇ ಅಂತಿಮ

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×