HomeNewsIndia Blocks 300 Betting Sites-ಭಾರತದಲ್ಲಿ 300 ಬೆಟ್ಟಿಂಗ್ ನಿಷೇಧ |Kannada Folks

India Blocks 300 Betting Sites-ಭಾರತದಲ್ಲಿ 300 ಬೆಟ್ಟಿಂಗ್ ನಿಷೇಧ |Kannada Folks

Govt cracks down on illegal online betting platforms

India Blocks 300 Betting Sites-ಭಾರತದಲ್ಲಿ 300 ಬೆಟ್ಟಿಂಗ್ ನಿಷೇಧ

ಅಕ್ರಮ ಗ್ಯಾಂಬ್ಲಿಂಗ್ ಮತ್ತು ಬೆಟ್ಟಿಂಗ್ ಜಾಲದ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ 300ಕ್ಕೂ ಹೆಚ್ಚು ಬೆಟ್ಟಿಂಗ್ ವೆಬ್‌ಸೈಟ್, ಆ್ಯಪ್‌ಗಳನ್ನು ನಿರ್ಬಂಧಿಸಿದ್ದಾರೆ. ಆನ್‌ಲೈನ್ ಸ್ಪೋರ್ಟ್ಸ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳು ಹಾಗೂ ಸ್ಲಾಟ್ಸ್ ಮೇಲೆ‌ ಕ್ರಮ ಕೈಗೊಳ್ಳಲಾಗಿದೆ. ರಿಯಲ್-ಮನಿ ಕಾರ್ಡ್ಸ್ ಮತ್ತು ಕ್ಯಾಸಿನೋ ಗೇಮ್ ಆ್ಯಪ್‌ಗಳ ವಿರುದ್ಧವೂ ಕಠಿಣ ಕ್ರಮ ಜರುಗಿಸಲಾಗಿದೆ. ಈ ಕುರಿತು ವಿವರವಾದ ಮಾಹಿತಿ ಇಲ್ಲಿದೆ.Online Gaming: ಕರ್ನಾಟಕದಲ್ಲಿ ಆನ್​ಲೈನ್ ಗೇಮಿಂಗ್​ಗೆ ಗ್ರೀನ್ ಸಿಗ್ನಲ್ ನೀಡಿದ  ಹೈಕೋರ್ಟ್​ - Kannada News | Online Gambling Karnataka High Court Strikes  Down Law Banning Online Gambling | TV9 Kannada

Read this : Bengaluru Pink Line Launch-ಪಿಂಕ್ ಲೈನ್ ಆರಂಭಕ್ಕೆ ಸಿದ್ಧತೆ |Kannada Folks

ನವದೆಹಲಿ, ಮಾರ್ಚ್ 20: ಭಾರತದಲ್ಲಿ ಒಟ್ಟು 8,400 ಅಕ್ರಮ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿರುವ ಕೇಂದ್ರ ಸರ್ಕಾರ ಆನ್‌ಲೈನ್ ಗೇಮಿಂಗ್ ಕಾಯ್ದೆ ಜಾರಿಗೆ ಬಂದ ನಂತರ ಸುಮಾರು 4,900 ಸೈಟ್‌ಗಳ ಮೇಲೆ ಕ್ರಮ ತೆಗೆದುಕೊಂಡಿದೆ. ಕೇಂದ್ರ ಸರ್ಕಾರ ಅಕ್ರಮ ಬೆಟ್ಟಿಂಗ್ (Illegal Betting) ಮೇಲೆ ಕಠಿಣ ಕ್ರಮ ಕೈಗೊಂಡಿದೆ. ಹಾಗೇ, 300 ವೆಬ್‌ಸೈಟ್‌ಗಳು ಮತ್ತು ಆನ್​ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು (Online Gaming Apps) ನಿರ್ಬಂಧಿಸಿದೆ.

ಕೇಂದ್ರ ಸರ್ಕಾರವು ಅಕ್ರಮ ಆನ್‌ಲೈನ್ ಜೂಜು ಮತ್ತು ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳ ಮೇಲಿನ ಕಠಿಣ ಕ್ರಮವನ್ನು ತೀವ್ರಗೊಳಿಸಿದೆ. ಆನ್‌ಲೈನ್ ಕ್ರೀಡಾ ಬೆಟ್ಟಿಂಗ್, ಕ್ಯಾಸಿನೊ-ಶೈಲಿಯ ಗೇಮಿಂಗ್ ಮತ್ತು ಪೀರ್-ಟು-ಪೀರ್ ಬೆಟ್ಟಿಂಗ್, ಓಲ್ಡ್ ಸ್ಕೂಲ್ ಸತ್ತಾ ಆ್ಯಂಡ್ ಮಟ್ಕಾ ನೆಟ್​ವರ್ಕ್, ಕ್ಯಾಸಿನೋ ಆ್ಯಪ್ ಸೇರಿದಂತೆ ವಿವಿಧ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಬೆಟ್ಟಿಂಗ್ ಪ್ಲಾಟ್​​ಫಾರ್ಮ್​ಗಳ ಮೇಲೆ ಮೋದಿ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.

ಸರ್ಕಾರದ ಈ ಕ್ರಮವು ಆನ್‌ಲೈನ್ ಕ್ರೀಡಾ ಬೆಟ್ಟಿಂಗ್ ವೆಬ್‌ಸೈಟ್‌ಗಳು, ಸ್ಲಾಟ್‌ಗಳು, ರೂಲೆಟ್ ಮತ್ತು ಲೈವ್ ಡೀಲರ್ ಟೇಬಲ್‌ಗಳಂತಹ ಆಟಗಳನ್ನು ನೀಡುವ ವರ್ಚುವಲ್ ಕ್ಯಾಸಿನೊಗಳು ಮತ್ತು ಪೀರ್-ಟು-ಪೀರ್ ಮಾರುಕಟ್ಟೆಗಳಾಗಿ ಕಾರ್ಯನಿರ್ವಹಿಸುವ ಬೆಟ್ಟಿಂಗ್ ಎಕ್ಸ್‌ಚೇಂಜ್‌ಗಳು ಸೇರಿದಂತೆ ಹಲವಾರು ವರ್ಗಗಳ ಅಕ್ರಮ ಪ್ಲಾಟ್​​ಫಾರ್ಮ್​ಗಳನ್ನು ಗುರಿಯಾಗಿಸಿಕೊಂಡಿದೆ. ಅಧಿಕಾರಿಗಳು ರಿಯಲ್-ಮನಿ ಕಾರ್ಡ್ ಮತ್ತು ಕ್ಯಾಸಿನೊ ಗೇಮಿಂಗ್ ಅಪ್ಲಿಕೇಶನ್‌ಗಳ ಜೊತೆಗೆ ಸತ್ತಾ ಮತ್ತು ಮಟ್ಕಾ ಜೂಜಿನ ನೆಟ್‌ವರ್ಕ್‌ಗಳ ವಿರುದ್ಧವೂ ಕ್ರಮ ಕೈಗೊಂಡಿದ್ದಾರೆ.

ಅಧಿಕೃತ ಮಾಹಿತಿಯ ಪ್ರಕಾರ, ಕೇಂದ್ರ ಸರ್ಕಾರವು ಇಲ್ಲಿಯವರೆಗೆ ಸುಮಾರು 8,400 ಜೂಜು ಮತ್ತು ಬೆಟ್ಟಿಂಗ್ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದೆ. ಇವುಗಳಲ್ಲಿ ಸುಮಾರು 4,900 ಪ್ಲಾಟ್‌ಫಾರ್ಮ್‌ಗಳನ್ನು ಆನ್‌ಲೈನ್ ಗೇಮಿಂಗ್ ಕಾಯ್ದೆ ಜಾರಿಗೆ ಬಂದ ನಂತರ ತೆಗೆದುಹಾಕಲಾಯಿತು. ಇದು ಡಿಜಿಟಲ್ ಗೇಮಿಂಗ್ ಮತ್ತು ಬೆಟ್ಟಿಂಗ್ ಚಟುವಟಿಕೆಗಳನ್ನು ನಿಯಂತ್ರಿಸಲು ಕಾನೂನು ಚೌಕಟ್ಟನ್ನು ಬಲಪಡಿಸಿತು.

ಈ ವರ್ಷದ ಜನವರಿಯ ಆರಂಭದಲ್ಲಿ ಕೇಂದ್ರ ಸರ್ಕಾರವು 242 ಅಕ್ರಮ ಬೆಟ್ಟಿಂಗ್ ಮತ್ತು ಜೂಜಾಟ ವೆಬ್‌ಸೈಟ್ ಲಿಂಕ್‌ಗಳನ್ನು ನಿರ್ಬಂಧಿಸಿತ್ತು.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments