HomeNewsIND vs AFG 2024-ಟೀಮ್ ಇಂಡಿಯಾ ಸರಣಿ ವೇಳಾಪಟ್ಟಿ |Kannada Folks

IND vs AFG 2024-ಟೀಮ್ ಇಂಡಿಯಾ ಸರಣಿ ವೇಳಾಪಟ್ಟಿ |Kannada Folks

Complete Match Schedule & Venues

IND vs AFG 2024-ಟೀಮ್ ಇಂಡಿಯಾ ಸರಣಿ ವೇಳಾಪಟ್ಟಿ

T20 World Cup 2026: ಟಿ20 ವಿಶ್ವಕಪ್​ನ ಫೈನಲ್ ಪಂದ್ಯವು ಮಾರ್ಚ್ 8 ರಂದು ನಡೆಯಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜರುಗಲಿರುವ ಈ ಪಂದ್ಯದ ಬಳಿಕ ಭಾರತದಲ್ಲಿ ಐಪಿಎಲ್ ಶುರುವಾಗಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 28 ರಿಂದ ಶುರುವಾಗಿ ಮೇ 31 ರವರೆಗೆ ನಡೆಯಲಿದೆ. ಇದಾದ ಬಳಿಕ ಟೀಮ್ ಇಂಡಿಯಾ ಟೆಸ್ಟ್ ಹಾಗೂ ಏಕದಿನ ಪಂದ್ಯಗಳನ್ನಾಡಲಿದೆ.Team India: ಭಾರತ ತಂಡದ ಮುಂದಿನ ಸರಣಿ ವೇಳಾಪಟ್ಟಿ ಪ್ರಕಟ - Kannada News | India to  tour Zimbabwe for 5 T20I series | TV9 Kannada

Read this : Puducherry Elections ಪ್ರಧಾನಿ ಮೋದಿ ವಾಗ್ದಾಳಿ

ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಲಿದೆ. ಹೀಗಾಗಿ ಟೀಮ್ ಇಂಡಿಯಾ ಆಟಗಾರರು ಮಾರ್ಚ್ 28 ರಿಂದ ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಐಪಿಎಲ್ ಮುಗಿಯೋದು ಮೇ 31 ರಂದು. ಇದರ ಬೆನ್ನಲ್ಲೇ ಟೀಮ್ ಇಂಡಿಯಾ 4 ಪಂದ್ಯಗಳ ಸರಣಿ ಆಡಲಿದೆ. ಅದು ಸಹ ಅಫ್ಘಾನಿಸ್ತಾನ್ ವಿರುದ್ಧ ಎಂಬುದು ವಿಶೇಷ.

ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ 4 ಪಂದ್ಯಗಳ ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಭಾರತದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಒಂದು ಟೆಸ್ಟ್ ಪಂದ್ಯ ಹಾಗೂ 3 ಏಕದಿನ ಪಂದ್ಯಗಳನ್ನಾಡಲಾಗುತ್ತದೆ.

ಟೆಸ್ಟ್ ಪಂದ್ಯವು ಚಂಡೀಗಢ್​ನಲ್ಲಿ ನಡೆದರೆ, ಏಕದಿನ ಪಂದ್ಯಗಳು ಧರ್ಮಶಾಲಾ, ಲಕ್ನೋ ಹಾಗೂ ಚೆನ್ನೈನಲ್ಲಿ ಜರುಗಲಿದೆ. ಅಂದರೆ ಮುಂಬರುವ ಸರಣಿಯಲ್ಲೂ ಬೆಂಗಳೂರಿನಲ್ಲಿ ಪಂದ್ಯ ಆಯೋಜಿಸಲು ಬಿಸಿಸಿಐ ನಿರ್ಧರಿಸಿಲ್ಲ.

8 ವರ್ಷಗಳ ಬಳಿಕ ಟೆಸ್ಟ್:

ಭಾರತ ಮತ್ತು ಅಫ್ಘಾನಿಸ್ತಾನ್ ತಂಡ ಈವರೆಗೆ ಏಕೈಕ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಿದೆ. ಅದು ಸಹ 2018 ರಲ್ಲಿ. ಈ ಪಂದ್ಯವನ್ನು ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 262 ರನ್​ಗಳ ಜಯ ಸಾಧಿಸಿತ್ತು.

ಇದೀಗ ಬರೋಬ್ಬರಿ 8 ವರ್ಷಗಳ ಬಳಿಕ ಮತ್ತೊಮ್ಮೆ ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಟೆಸ್ಟ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ವಿಶೇಷ ಎಂದರೆ ಈ ಪಂದ್ಯ ನಡೆಯಲಿರುವುದು ಚಂಡೀಗಢ್​ನ ಮುಲ್ಲನ್​ಪುರ್ ಸ್ಟೇಡಿಯಂನಲ್ಲಿ.

ಅಂದರೆ ಇದೇ ಮೊದಲ ಬಾರಿಗೆ ಚಂಡೀಗಢ್​ ಟೆಸ್ಟ್ ಪಂದ್ಯಕ್ಕೆ ಆತಿಥ್ಯವಹಿಸಲಿದೆ. ಮುಲ್ಲನ್​ಪುರ್​ನಲ್ಲಿರುವ ಎಂವೈಎಸ್ ಸ್ಟೇಡಿಯಂನಲ್ಲಿ ಈವರೆಗೆ ಐಪಿಎಲ್ ಪಂದ್ಯಗಳು, ಒಂದು ಪುರುಷರ ಟಿ20 ಪಂದ್ಯ ಮತ್ತು ಎರಡು ಮಹಿಳಾ ಏಕದಿನ ಪಂದ್ಯಗಳನ್ನು ಆಯೋಜಿಸಲಾಗಿದೆ. ಇದೀಗ ಭಾರತ ಮತ್ತು ಅಫ್ಘಾನಿಸ್ತಾನ್ ಪಂದ್ಯಕ್ಕೆ ಆತಿಥ್ಯವಹಿಸಲು ಸಜ್ಜಾಗಿದೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕಂಬ್ಯಾಕ್:

ಮೇ ತಿಂಗಳಾಂತ್ಯದಲ್ಲಿ ಐಪಿಎಲ್ ಮುಗಿಯಲಿದ್ದು, ಇದಾದ ಬಳಿಕ ಟೀಮ್ ಇಂಡಿಯಾ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಇನ್ನು ಜೂನ್ 14 ರಿಂದ ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಯ ಮೂಲಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟೀಮ್ ಇಂಡಿಯಾ ಪರ ಮತ್ತೆ ಕಣಕ್ಕಿಳಿಯಲಿದ್ದಾರೆ. ಈ ಸರಣಿಯ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

ಭಾರತ vs ಅಫ್ಘಾನಿಸ್ತಾನ್ ಸರಣಿ ವೇಳಾಪಟ್ಟಿ:

ದಿನಾಂಕ ಸಮಯ ಪಂದ್ಯ ಸ್ವರೂಪ ಸ್ಥಳ
ಜೂನ್ 6 ಬೆಳಿಗ್ಗೆ 9:30 ಭಾರತ vs ಅಫ್ಘಾನಿಸ್ತಾನ್ ಟೆಸ್ಟ್ ಹೊಸ ಚಂಡೀಗಢ
ಜೂನ್ 14 ಮಧ್ಯಾಹ್ನ 1:30 ಭಾರತ vs ಅಫ್ಘಾನಿಸ್ತಾನ್ ಏಕದಿನ ಪಂದ್ಯ ಧರ್ಮಶಾಲಾ
ಜೂನ್ 17 ಮಧ್ಯಾಹ್ನ 1:30 ಭಾರತ vs ಅಫ್ಘಾನಿಸ್ತಾನ್ ಏಕದಿನ ಪಂದ್ಯ ಲಕ್ನೋ
ಜೂನ್ 20 ಮಧ್ಯಾಹ್ನ 1:30 ಭಾರತ vs ಅಫ್ಘಾನಿಸ್ತಾನ್ ಏಕದಿನ ಪಂದ್ಯ ಚೆನ್ನೈ

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments