Hoove Hoove song lyrics – ಹೂವೆ ಹೂವೆ, ಹೂವೆ ಹೂವೆ
Read this – Munjane manjalli song lyrics ಮುಂಜಾನೆ ಮಂಜಲ್ಲಿ ಮುಸ್ಸಂಜೆ ತಿಳಿ ತಂಪಲ್ಲಿ
ಹೂವೆ ಹೂವೆ, ಹೂವೆ ಹೂವೆ
ಹೂವೆ ಹೂವೆ, ಹೂವೆ ಹೂವೆ, ಹೂವೇ
ನಿನ್ನೀ ನಗುವಿಗೆ ಕಾರಣವೇನೇ?
ಸೂರ್ಯನ ನಿಯಮಾನೇ
ಓ, ಚಂದ್ರನ ನೆನಪೇನೇ?
ಹೂವೆ ಹೂವೆ, ಹೂವೆ ಹೂವೆ
ಹೂವೆ ಹೂವೆ, ಹೂವೆ ಹೂವೆ, ಹೂವೇ
ನಿನ್ನೀ ನಗುವಿಗೆ ಕಾರಣವೇನೇ?
ಸೂರ್ಯನ ನಿಯಮಾನೇ?
ಓ, ಚಂದ್ರನ ನೆನಪೇನೇ?
ಆಭರಣದ ಅಂಗಡಿಗೆ ಹೋಗೋಣ ಗಿಳಿಮರಿಯೇ
ಮುದ್ದಾದ ಮೂಗಿಗೆ ಮೂಗುತಿ ಹಾಕುವೇ
ಸೀರೆಗಳ ಅಂಗಡಿಗೆ ಹೋಗೋಣ ಬಾ ನವಿಲೇ
ಸಿಂಗಾರ ಮಾಡಲೂ ನಿನ್ನಂತೇ ನನ್ನನೂ
ಮುಗಿಲೇ, ಓ ಮುಗಿಲೇ, ಕೆನ್ನೆ ಕೆಂಪು ಏಕೇ
ನಿನ್ನಾ ನೋಡೋಕೇ ನಲ್ಲ ಬರುವನೇನೇ
ಗಾಳಿಲೀ ತಂಪನೂ ಕದೋಯ್ದೆ ಎಲ್ಲಿಗೇ, ಕದೋಯ್ದೆ ಎಲ್ಲಿಗೇ
ಹೂವೆ ಹೂವೆ, ಹೂವೆ ಹೂವೆ
ಹೂವೆ ಹೂವೆ, ಹೂವೆ ಹೂವೆ, ಹೂವೇ
ನಿನ್ನೀ ನಗುವಿಗೆ ಕಾರಣವೇನೇ?
ಸೂರ್ಯನ ನಿಯಮಾನೇ?
ಓ, ಚಂದ್ರನ ನೆನಪೇನೇ?
ಎರವಲು ಕುಡಿ ರೆಕ್ಕೆಗಳಾ ಓ ನನ್ನ ಹಕ್ಕಿಗಳೇ
ನಾನೊಮ್ಮೇ ಬಾನಿಗೆ ಹಾರಾಡಬೇಕಿದೇ
ಓ, ಗಡಿಬಿಡಿಯಾ ಇರುವೆಗಳೇ, ಸಾಲಾಗಿ ಬನ್ನಿರೀ
ಒಬ್ಬೊಬ್ಬರಾಗಿಯೇ ಹೆಸರು ಹೇಳಿ ಹೋಗಿರಿ
ಜಿಂಕೆ ಓ ಜಿಂಕೆ ನಿನ್ನ ಮೈಯಮೇಲೇ
ಯಾರೇ ಬರೆದೋರು ಚುಕ್ಕಿ ಇಟ್ಟ ರಂಗೋಲೀ
ಬೆಳದಿಂಗಳೂಟವಾ ಬಡಿಸೋನೇ ಚಂದ್ರಮಾ, ಬಡಿಸು ಬಾ ಚಂದ್ರಮ
ಹೂವೆ ಹೂವೆ, ಹೂವೆ ಹೂವೆ
ಹೂವೆ ಹೂವೆ, ಹೂವೆ ಹೂವೆ, ಹೂವೇ
ನಿನ್ನೀ ನಗುವಿಗೆ ಕಾರಣವೇನೇ?
ಸೂರ್ಯನ ನಿಯಮಾನೇ?
ಓ, ಚಂದ್ರನ ನೆನಪೇನೇ?
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ



