HomeLyricsHaalaravi Bando Song Lyrics-ಹಾಲರವಿ ಬಂದೊ|Asha Bhat|Janapada song

Haalaravi Bando Song Lyrics-ಹಾಲರವಿ ಬಂದೊ|Asha Bhat|Janapada song

Haalaravi Bando Song Lyrics-ಹಾಲರವಿ ಬಂದೊ

Haalaravi Bando Song Lyrics-ಹಾಲರವಿ ಬಂದೊ

ಹಾಲರವಿ ಬಂದೊ ನೂರೊಂದು ಹಾಲರವಿ ಬಂದೊ
ಹಾಲರವಿ ಬಂದೊ ನೂರೊಂದು ಹಾಲರವಿ ಬಂದೊ
ಹಾಲರವಿ ಮ್ಯಾಲ್ ಹೂವಿನ ದಂಡೆ ವಾಲಾಡಿ ಬಂದೊ
ಹಾಲರವಿ ಮ್ಯಾಲ್ ಹೂವಿನ ದಂಡೆ ವಾಲಾಡಿ ಬಂದೊ

ಹಾಲಂಬಾಡಿಂದ ವಾಲೂಗ ಮಾಡಿಕೊಂಡು
ವಾಲಾಡಿಕೊಂಡು ಏಳುಮಲೆಗ್ ಹಾಲರವಿ ಬಂದೊ
ವಾಲಾಡಿಕೊಂಡು ಏಳುಮಲೆಗ್ ಹಾಲರವಿ ಬಂದೊ
ಹಾಲ್ಹಳ್ಳ ತುಂಬಿ ಹಾಲ್ಹಳ್ಳ ತುಂಬಿ ಜಾಲಾದ ಕೊಳ ತುಂಬಿ
ಜೋಲುತ್ತ ಏಳುತ್ತ ಏಳಿಮಲೆಗೆ ಹಾಲರವಿ ಬಂದೊ
ಹಾಲರವಿ ಬಂದೊ ನೂರೊಂದು ಹಾಲರವಿ ಬಂದೊ
ಹಾಲರವಿ ಮ್ಯಾಲ್ ಹೂವಿನ ದಂಡೆ ವಾಲಾಡಿ ಬಂದೊ

ಸರಗೂರಿಂದ ಸರಣಾರು ಬಂದಾರೇ
ಸರಗೂರಿಂದ ಸರಣಾರು ಬಂದಾರೇ
ಮಜ್ಜಾನದೊತ್ತಿಗೆ ಏಳುಮಲೆಗೆ ಹಾಲರವಿ ಬಂದೊ
ಮಜ್ಜಾನದೊತ್ತಿಗೆ ಏಳುಮಲೆಗೆ ಹಾಲರವಿ ಬಂದೊ
ಕಾಡುಬೆಟ್ಟದಲ್ಲಿ ತಮಟೆಯ ಸದ್ದೇನು
ತಮಟೆಯ ಸದ್ದಲಿ ಏಳುಮಲೆಗೆ ಹಾಲರವಿ ಬಂದೊ
ಹಾಲರವಿ ಬಂದೊ ನೂರೊಂದು ಹಾಲರವಿ ಬಂದೊ
ಹಾಲರವಿ ಮ್ಯಾಲ್ ಹೂವಿನ ದಂಡೆ ವಾಲಾಡಿ ಬಂದೊ

ಆನೆದಿಂಬದಲ್ಲಿ ಆನಂದವೇ ನಮ್ಮ
ಆನಂದಕಾರನ ಏಳುಮಲೆಗೆ ಹಾಲರವಿ ಬಂದೊ
ಆನಂದಕಾರನ ಏಳುಮಲೆಗೆ ಹಾಲರವಿ ಬಂದೊ
ಹಾಲರವಿ ಬಂದೊ ನೂರೊಂದು ಹಾಲರವಿ ಬಂದೊ
ಮಾದೇವ್ನ ಮಜ್ಜನದೊತ್ತಿಗೆ ಏಳುಮಲೆ ಹಾಲರವಿ ಬಂದೊ
ಹಾಲರವಿ ಬಂದೊ ನೂರೊಂದು ಹಾಲರವಿ ಬಂದೊ
ಹಾಲರವಿ ಮ್ಯಾಲ್ ಹೂವಿನ ದಂಡೆ ವಾಲಾಡಿ ಬಂದೊ
ಹಾಲರವಿ ಬಂದೊ ನೂರೊಂದು ಹಾಲರವಿ ಬಂದೊ
ಹಾಲರವಿ ಬಂದೊ ನೂರೊಂದು ಹಾಲರವಿ ಬಂದೊ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments