EPF Account Merge Online-ಬಹು ಇಪಿಎಫ್ ವಿಲೀನ
Steps to merge multiple EPF accounts through official EPFO website: ಒಬ್ಬ ಉದ್ಯೋಗಿ ಒಂದಕ್ಕಿಂತ ಹೆಚ್ಚು ಇಪಿಎಫ್ ಅಕೌಂಟ್ಗಳನ್ನು ಹೊಂದಿರುವ ಅವಕಾಶ ಇರುತ್ತದೆ. ಎಲ್ಲಾ ಇಪಿಎಫ್ ಅಕೌಂಟ್ಗಳನ್ನು ಒಂದೇ ಅಕೌಂಟ್ಗೆ ವಿಲೀನಗೊಳಿಸಬಹುದು. ಹೆಚ್ಚು ಅಕೌಂಟ್ ಇರುವ ಬದಲು ಒಂದೇ ಅಕೌಂಟ್ ಇದ್ದರೆ ಬಡ್ಡಿ ಹಣ ನಿರಂತರವಾಗಿ ಸಂದಾಯ ಆಗುತ್ತಿರುತ್ತದೆ. ಹೀಗೆ ಇಪಿಎಫ್ ಅಕೌಂಟ್ಗಳನ್ನು ವಿಲೀನಗೊಳಿಸುವ ಕ್ರಮ ಇಲ್ಲಿದೆ.
Read this : Davanagere south by election Ticket Fight ಇಬ್ಬರ ಜಗಳದಲ್ಲಿ 3ನೇ ವ್ಯಕ್ತಿಗೆ ಟಿಕೆಟ್| Kannada Folks
ಇವತ್ತು ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಭವಿಷ್ಯದ ಭದ್ರತೆಗೆ ಇರುವ ಸ್ಕೀಮ್ಗಳಲ್ಲಿ ಇಪಿಎಫ್ ಅಕೌಂಟ್ ಪ್ರಮುಖವಾದುದು. ಪ್ರತೀ ಉದ್ಯೋಗಿಗೂ ಕಂಪನಿ ವತಿಯಿಂದ ಇಪಿಎಫ್ ಅಕೌಂಟ್ ತೆರೆಯಲಾಗುತ್ತದೆ. ಉದ್ಯೋಗಿಯ ಸಂಬಳದಲ್ಲಿ ಶೇ. 12ರಷ್ಟು ಹಣವನ್ನು ಕಡಿತಗೊಳಿಸಿ ಈ ಅಕೌಂಟ್ಗೆ ಹಾಕಲಾಗುತ್ತದೆ. ಕಂಪನಿ (ಉದ್ಯೋಗದಾತರು) ವತಿಯಿಂದಲೂ ಅಷ್ಟೇ ಪ್ರಮಾಣದಲ್ಲಿ ಹಣವು ಇಪಿಎಫ್ ಅಕೌಂಟ್ಗೆ ಸೇರ್ಪಡೆಯಾಗುತ್ತದೆ. ಸರ್ಕಾರದಿಂದ (ಇಪಿಎಫ್ಒ ಸಂಸ್ಥೆ) ಪ್ರತೀ ವರ್ಷ ಇಪಿಎಫ್ ಅಕೌಂಟ್ನಲ್ಲಿರುವ ಹಣಕ್ಕೆ ಬಡ್ಡಿ ಸಂದಾಯ ಆಗುತ್ತದೆ. ಹೀಗೆ ಉದ್ಯೋಗಿ ನಿವೃತ್ತಿಯಾಗುವವರೆಗೂ ಹಣ ಬೆಳೆಯಬೇಕೆನ್ನುವುದು ಉದ್ದೇಶ.
ಇದೇ ವೇಳೆ, ಉದ್ಯೋಗಿಯು ಕಂಪನಿ ಬದಲಿಸಿ ಹೊಸ ಕಂಪನಿ ಸೇರಿದಾಗ ಹೊಸ ಇಪಿಎಫ್ ಅಕೌಂಟ್ ರಚನೆಯಾಗುತ್ತದೆ. ಉದ್ಯೋಗಿಯು ತನ್ನ ವೃತ್ತಿಜೀವನದಲ್ಲಿ ಹಲವು ಕಂಪನಿಗಳಲ್ಲಿ ಕೆಲಸ ಮಾಡಬಹುದಾದ್ದರಿಂದ ಬಹು ಇಪಿಎಫ್ ಅಕೌಂಟ್ಗಳು ಇದ್ದಿರಲು ಸಾಕು. ಕಂಪನಿ ಬದಲಿಸಿದಾಗ ಹಿಂದಿನ ಕಂಪನಿಯ ಇಪಿಎಫ್ ಅಕೌಂಟ್ ಅನ್ನು ವಿಲೀನಗೊಳಿಸಲು ಹೊಸ ಕಂಪನಿಯ ಎಚ್ಆರ್ಗೆ ತಿಳಿಸಿದರೆ ಸುಲಭವಾಗಿ ವಿಲೀನಗೊಳಿಸಬಹುದು. ಇಲ್ಲದಿದ್ದರೆ ಒಬ್ಬ ವ್ಯಕ್ತಿಗೆ ಹಲವು ಇಪಿಎಫ್ ಅಕೌಂಟ್ಗಳು ಇರುತ್ತವೆ.
ಒಂದಕ್ಕಿಂತ ಹೆಚ್ಚು ಇಪಿಎಫ್ ಅಕೌಂಟ್ಗಳಿದ್ದರೆ ಅವನ್ನು ಇತ್ತೀಚಿನ ಇಪಿಎಫ್ ಅಕೌಂಟ್ಗೆ ವಿಲೀನಗೊಳಿಸಬಹುದು. ಆನ್ಲೈನ್ನಲ್ಲೇ ಸುಲಭವಾಗಿ ಈ ಕೆಲಸ ಮಾಡಬಹುದು. ಹಾಗೆ ಮಾಡಲು ಯುಎಎನ್ ಆ್ಯಕ್ಟಿವೇಟ್ ಆಗಿರಬೇಕು. ಇಪಿಎಫ್ ಅಕೌಂಟ್ಗಳನ್ನು ವಿಲೀನಗೊಳಿಸುವ ಕ್ರಮ ಹೀಗಿದೆ:
- ಇಪಿಎಫ್ಒ ವೆಬ್ಸೈಟ್ಗೆ ಭೇಟಿ ನೀಡಿ:
- ನಿಮ್ಮ ಯುಎಎನ್ ಮತ್ತು ಪಾಸ್ವರ್ಡ್ ಬಳಸಿ ಸೈನ್ ಇನ್ ಆಗಿ
- ಆನ್ಲೈನ್ ಸರ್ವಿಸ್ ಟ್ಯಾಬ್ಗೆ ಹೋಗಿ, ‘ಒನ್ ಮೆಂಬರ್ ಅಂಡ್ ಒನ್ ಇಪಿಎಫ್ ಅಕೌಂಟ್’ ಲಿಂಕ್ ಕ್ಲಿಕ್ ಮಾಡಿ.
- ಹೊಸ ವಿಂಡೋದಲ್ಲಿ ನಿಮ್ಮ ವೈಯಕ್ತಿಕ ವಿವರ ಮತ್ತು ಈಗಿರುವ ಕಂಪನಿಯ ಇಪಿಎಫ್ ಅಕೌಂಟ್ ಅನ್ನು ನೋಡಬಹುದು.
- ನೊಂದಾಯಿತ ಫೋನ್ ನಂಬರ್ ಮತ್ತು ಯುಎಎನ್ ಸೇರಿದಂತೆ ಅಲ್ಲಿ ಕೇಳಲಾಗುವ ಮಾಹಿತಿ ಒದಗಿಸಿ.
- ‘ಜನರೇಟ್ ಒಟಿಪಿ’ ಆಯ್ಕೆ ಆಯ್ದುಕೊಂಡು ವೆರಿಫಿಕೇಶನ್ ಪಡೆಯಿರಿ.
- ಈಗ ಹೊಸ ಇಪಿಎಫ್ ಅಕೌಂಟ್ಗೆ ವಿಲೀನವಾಗಬೇಕಿರುವ ಹಳೆಯ ಇಪಿಎಫ್ ಅಕೌಂಟ್ಗಳ ಮಾಹಿತಿ ಕೇಳಲಾಗುತ್ತದೆ.
- ಡಿಕ್ಲರೇಶನ್ ಬಾಕ್ಸ್ ಅನ್ನು ಚೆಕ್ ಮಾಡಿ, ‘ಸಬ್ಮಿಟ್’ ಕ್ಲಿಕ್ ಮಾಡಿ.
ಈಗ ವಿಲೀನಕ್ಕೆ ನೀವು ಅರ್ಜಿ ಸಲ್ಲಿಸಿದಂತಾಗುತ್ತದೆ. ಈ ಅರ್ಜಿಗೆ ನಿಮ್ಮ ಈಗಿನ ಕಂಪನಿಯು ಅನುಮೋದನೆ ನೀಡಬೇಕು. ಆಗ ಈ ಅರ್ಜಿಯನ್ನು ಇಪಿಎಫ್ಒ ಪರಿಶೀಲಿಸಿ, ಇಪಿಎಫ್ ಅಕೌಂಟ್ಗಳನ್ನು ವಿಲೀನಗೊಳಿಸುತ್ತದೆ.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


