HomeLyricsEntha Mojina Kudure Song Lyrics - ಎಂಥಾ ಮೋಜಿನ ಕುದುರಿ | Raja-Simha

Entha Mojina Kudure Song Lyrics – ಎಂಥಾ ಮೋಜಿನ ಕುದುರಿ | Raja-Simha

Entha Mojina Kudure Song Lyrics - ಎಂಥಾ ಮೋಜಿನ ಕುದುರಿ 

Entha Mojina Kudure Song Lyrics – ಎಂಥಾ ಮೋಜಿನ ಕುದುರಿ 

ಎಂಥಾ ಮೋಜಿನ ಕುದುರಿ
ಹತ್ತಿದ ಮ್ಯಾಲ ತಿರುಗುವುದು
ಹನ್ನಂದು ಕೇರಿ…
ಎಂಥಾ ಮೋಜಿನ ಕುದುರಿ
ಹತ್ತಿದ ಮ್ಯಾಲ ತಿರುಗುವುದು
ಹನ್ನಂದು ಕೇರಿ..ಈಈಈಈ
ಹಚ್ಚನ್ನ ಕರಡ ಹಾಕಲಿಬೇಕು
ನಿಚ್ಚಳ ನೀರ.. ಕುಡಿಸಲಿಬೇಕು
ಹಚ್ಚನ್ನ ಕರಡ ಹಾಕಲಿಬೇಕು
ನಿಚ್ಚಳ ನೀರ.. ಕುಡಿಸಲಿಬೇಕು
ಸಂಸ್ಕಾರ ಕಮಚೀಲಿ
ಹೊಡಿಯಲಿಬೇಕು
ಸಂಸ್ಕಾರ ಕಮಚೀಲಿ
ಹೊಡಿಯಲಿಬೇಕು
ಅಚ್ಯುತ ಮೆಚ್ಚುವಂತೆ
ಮೈ ತಿಕ್ಕಬೇಕು
ಎಂಥಾ ಮೋಜಿನ ಕುದುರಿ
ಹತ್ತಿದ ಮ್ಯಾಲ ತಿರುಗುವುದು
ಹನ್ನಂದು ಕೇರಿ..ಈಈಈಈ ಹೈ
ತಪ್ಪುವುದಿಲ್ಲಪ್ಪ
ಎರಡು ಹೊತ್ತು ದಾ~ಣಿ
ತಿಂದ ಮ್ಯಾಲ ತಿರಗತೈತಿ
ಮ್ಯಾಗಲ ಓಣಿ..
ತಪ್ಪುವುದಿಲ್ಲಪ್ಪ
ಎರಡು ಹೊತ್ತು ದಾ~ಣಿ
ತಿಂದ ಮ್ಯಾಲ ತಿರಗುತೈತಿ
ಮ್ಯಾಗಲ ಓಣಿ
ಖಾದರ ಲಿಂಗು ಪೋಡಿದ ಓಣಿ
ಖಾದರ ಲಿಂಗು ಪೋಡಿದ ಓಣಿ
ಸೋಸಿ ನೋಡಿಕೋ ಹಾಕಿದ ಗೋಣಿ
ಎಂಥಾ ಮೋಜಿನ ಕುದುರಿ
ಹತ್ತಿದ ಮ್ಯಾಲ ತಿರುಗುವುದು
ಹನ್ನಂದು ಕೇರಿ..ಈಈಈಈಇ
ಪಾಂಡವರ ಮನಿಯೊಳಗ
ಪಾದದಾಗಿತ್ತು
ಪಾದದ ಗೂಟವ ಝಾಡಿಸಿ ಕಿತ್ತು
ಪಾಂಡವರ ಮನಿಯೊಳಗ
ಪಾದದಾಗಿತ್ತು
ಪಾದದ ಗೂಟವ ಝಾಡಿಸಿ ಕಿತ್ತು
ಹೋಗುವಾಗ ಶಿಶುನಾಳಕ್ಕೊಡೋಡಿ
ಬಂತು
ಹೋಗುವಾಗ ಶಿಶುನಾಳಕ್ಕೊಡೋಡಿ
ಬಂತು
ಗೋವಿಂದ ಗುರುವೇ ತಾನಾ..ಗಿತ್ತು
ಎಂಥಾ ಮೋಜಿನ ಕುದುರಿ
ಹತ್ತಿದ ಮ್ಯಾಲ ತಿರುಗುವುದು
ಹನ್ನಂದು ಕೇರಿ..ಈಈಈಈ
ಎಂಥಾ ಮೋಜಿನ ಕುದುರಿ
ಹತ್ತಿದ ಮ್ಯಾಲ ತಿರುಗುವುದು
ಹನ್ನಂದು ಕೇರಿ
ಹತ್ತಿದ ಮ್ಯಾಲ ತಿರುಗುವುದು
ಹನ್ನಂದು ಕೇರಿ
ಹತ್ತಿದ ಮ್ಯಾಲ ತಿರುಗುವುದು
ಹನ್ನಂದು ಕೇರಿ…ಈ…

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments